ಅಭ್ಯಾಸ ಪಂದ್ಯದಲ್ಲಿ ಗೆದ್ದರೂ ಅಂದುಕೊಂಡಿದ್ದು ಆಗಿಲ್ಲ, ಸ್ಪಿನ್, ಡೆತ್ ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ವೀಕ್..!
ಟೀಮ್ ಇಂಡಿಯಾ ಬ್ಯಾಟಿಂಗ್ನ ಎಲ್ಲಾ ಅಸ್ತ್ರಗಳು ಸಿಡಿದವು. ಇಶಾನ್ ಕಿಶನ್ ಆಟ ಹೇಗಿರಬಹುದು ಅನ್ನುವ ಝಲಕ್ ಸಿಕ್ಕಿತ್ತು. ಕೆ.ಎಲ್. ರಾಹುಲ್ ರೋಲ್ ಏನು ಅನ್ನುವ ಬಗ್ಗೆ ಕ್ಲಾರಿಟಿ ಸಿಕ್ತು. ರಿಷಭ್ ಪಂತ್ ಮ್ಯಾಚ್ ಫಿನಿಷ್ ಮಾಡುವ ಪ್ಲೇಯರ್ ಅನ್ನುವುದು ಗೊತ್ತಾಯಿತು. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೂ ಸ್ಪಿನ್ ಬೌಲಿಂಗ್ ಮತ್ತು ಡೆತ್ ಓವರುಗಳ ಪ್ರಾಬ್ಲಂಗೆ ಉತ್ತರ ಮಾತ್ರ ಸಿಕ್ಕಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರುಗಳಲ್ಲಿ ಬರೋಬ್ಬರಿ 5 ವಿಕೆಟ್ ಕಳೆದುಕೊಂಡು 188 ರನ್ ಸೇರಿಸಿತ್ತು. ಬೇರ್ ಸ್ಟೋವ್, ಮೊಯಿನ್ ಅಲಿ ಮತ್ತು ಲಿಯಂ ಲಿವಿಂಗ್ ಸ್ಟೋನ್ ಭಾರತದ ಬೌಲರ್ ಗಳನ್ನು ಚಿಂದಿ ಚಿತ್ರಾನ್ನ ಮಾಡಿದ್ದರು. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ರಾಹುಲ್ ಚಹರ್ ಕೋಟಾದ 4 ಓವರುಗಳಲ್ಲಿ 10ಕ್ಕಿಂತಲೂ ಹೆಚ್ಚಿನ ಸರಾಸರಿಯಲ್ಲಿ ರನ್ ಕೊಟ್ಟಿದ್ದರು. ಅಶ್ವಿನ್ 4 ಓವರುಗಳಲ್ಲಿ 23 ರನ್ ಕೊಟ್ಟರೂ ವಿಕೆಟ್ ಬೀಳಿಸಲಿಲ್ಲ. ಬುಮ್ರಾ ಕೂಡ 4 ಓವರುಗಳಲ್ಲಿ 26 ರನ್ ಮಾತ್ರ ಕೊಟ್ಟಿದ್ದರು. ಶಮಿ 3 ವಿಕೆಟ್ ಪಡೆದರೂ ದುಬಾರಿ ಆಗಿದ್ದು ಚಿಂತೆಗೆ ಕಾರಣವಾಗಿದೆ.
ಇನ್ನು ಚೇಸಿಂಗ್ ವೇಳೆ ರಾಹುಲ್ ಮತ್ತು ಕಿಶನ್ ಅಬ್ಬರಿಸಿದರು. ರಾಹುಲ್ 24 ಎಸೆತಗಳಲ್ಲಿ 51 ರನ್ಗಳಿಸಿದರೆ, ಕಿಶನ್ 46 ಎಸೆತಗಳಲ್ಲಿ 70 ರನ್ಗಳಿಸಿ ಅಜೇಯರಾಗಿದ್ದರು. ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ವೈಫಲ್ಯ ಕಂಡರೂ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಗೆಲುವು ತಂದುಕೊಟ್ಟರು. ಆಲ್ರೌಂಡರ್ ತಂಡದಲ್ಲಿ ಇಲ್ಲದೇ ಇದ್ದರೆ ಏನೆಲ್ಲ ಸಮಸ್ಯೆ ಬರಬಹುದು ಅನ್ನುವುದನ್ನು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ತೋರಿಸಿಕೊಟ್ಟಿದೆ. ಟೀಮ್ಇಂಡಿಯಾ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 20 ರಂದು ಆಡಲಿದೆ.
ಸಿದ್ದರಾಮಯ್ಯ ನಮ್ಮ ನಾಯಕ, ಸಿದ್ದು ಹೆಸರು ದುರ್ಬಳಕೆ ಬೇಡ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವವನ್ನು ಪುನಃ ದೃಢಪಡಿಸಿದ್ದಾರೆ. ಅವರು ಹೇಳಿದ್ದು, "ಸಿದ್ದರಾಮಯ್ಯ ಅವರು ನಮ್ಮ ನಾಯಕ. ಅವರು ಎಲ್ಲಾ ಚುನಾವಣೆಗಳಿಗೆ ಬೇಕು....