ಟಿ20 ವಿಶ್ವ ವಿಶ್ವಕಪ್ – ಟೀಮ್ ಇಂಡಿಯಾ ಪ್ರಿಪರೇಷನ್- ದುಬೈನಲ್ಲಿ ಸಮರಕ್ಕೆ ಮುನ್ನ ಶಸ್ತ್ರಾಭ್ಯಾಸ ..!- ಇಂಗ್ಲೆಂಡ್ ವಿರುದ್ಧ ಪ್ರಾಕ್ಟೀಸ್ ಮ್ಯಾಚ್..!
ಐಪಿಎಲ್ ನೆನಪುಗಳು ಹಾಗೇ ಉಳಿದಿದೆ. ಚೆನ್ನೈ , ಕೊಲ್ಕತ್ತಾ, ಡೆಲ್ಲಿ, ಆರ್ಸಿಬಿ ತಂಡಗಳ ಫೈಟಿಂಗ್ ಜೊತೆ ಮುಂಬೈ, ಪಂಜಾಬ್, ರಾಜಸ್ಥಾನ ಮತ್ತು ಹೈದ್ರಾಬಾದ್ ತಂಡಗಳು ಟೂರ್ನಿಯಲ್ಲಿ ನಡೆಸಿದ್ದ ಹೋರಾಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈಗ ಐಪಿಎಲ್ ಹಳೆಯ ಮಾತು. ಮೂರೇ ಮೂರು ದಿನಗಳಲ್ಲಿ ಸೀನ್ ಬದಲಾಗಿದೆ. ದೃಷ್ಟಿ ಚುಟುಕು ವಿಶ್ವಕಪ್ ಕಡೆಗೆ ತಿರುಗಿದೆ. ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ನ ಅತೀ ದೊಡ್ಡ ಸಮರವಾಗಿ ಮರ್ಪಾಡಾಗಿದೆ.
ಸಮರಕ್ಕೆ ಇಳಿಯುವ ಮುನ್ನ ಟೀಮ್ ಇಂಡಿಯಾ ಶಸ್ತ್ರಾಭ್ಯಾಸಕ್ಕೆ ಸಿದ್ಧವಾಗಿದೆ. ಆಟಗಾರರ ಫಿಟ್ನೆಸ್ ಅಳೆಯಲು ಸಿದ್ಧತೆ ಮಾಡಿಕೊಂಡಿದೆ. ಯಾರು ಬೌಲಿಂಗ್ ಮಾಡಬಲ್ಲರು, ಯಾರು ಬ್ಯಾಟಿಂಗ್ ಮಾಡಲು ಸಮರ್ಥರಿದ್ದಾರೆ ಅನ್ನುವುದನ್ನು ಪರೀಕ್ಷಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಐಪಿಎಲ್ ಮೂಡ್ನಿಂದ ವಿಶ್ವಕಪ್ ಮೂಡ್ಗೆ ತಯಾರಾಗಿರುವ ಆಟಗಾರರು ಈಗ ದೇಶಕ್ಕಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಟೀಮ್ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಬ್ಯಾಟಿಂಗ್ ಲೈನ್ ಅಪ್ ಮತ್ತು ಬೌಲರ್ಗಳ ಆಯ್ಕೆಯ ಬಗ್ಗೆ ನಿರ್ಣಾಯಕ ನಿರ್ಧಾರ ಮಾಡಲು ಇದು ಇಂಪಾರ್ಟೆಂಟ್ ಮ್ಯಾಚ್ ಆಗಲಿದೆ. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲು ಕೆ.ಎಲ್. ರಾಹುಲ್ ಇದ್ದರೂ ವಿರಾಟ್ ಕೊಹ್ಲಿಯ ಜಾಗ ಯಾವುದು ಅನ್ನುವುದು ಅಭ್ಯಾಸ ಪಂದ್ಯದಲ್ಲೇ ನಿರ್ಧಾರವಾಗಲಿದೆ. ಇಶಾನ್ ಕಿಶಾನ್ ರನ್ನು ಕಣಕ್ಕಿಳಿಸುವ ಮೂಲಕ ಸ್ಪೆಷಲಿಸ್ಟ್ ಕೀಪರ್ ಕಂ ಓಪನರ್ ಸಿಗಲಿದ್ದಾರೆ ಅನ್ನುವುದು ಕೂಡ ಯೋಜನೆಯಲ್ಲಿದೆ. ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ ಮತ್ತು ರಿಷಬ್ ಪಂತ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಕ್ಲಾರಿಟಿ ಸಿಗಲಿದೆ. ವರುಣ್ ಚಕ್ರರ್ತಿ, ಅಶ್ವಿನ್ ಮತ್ತು ರಾಹುಲ್ ಚಹರ್ ಪೈಕಿ ಯಾರು ಮೋಡಿ ಮಾಡ್ತಾರೆ ಅನ್ನುವುದು ಕೂಡ ನಿರ್ಧಾರವಾಗಲಿದೆ. ಭುವನೇಶ್ವರ್್ ಕುಮಾರ್, ಜಸ್ ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಥಾಕೂರ್ ಮತ್ತು ರವೀಂದ್ರ ಜಡೇಜಾ ಪ್ರದರ್ಶನದ ಬಗ್ಗೆಯೂ ಕಣ್ಣಿಟ್ಟಿದೆ. ಒಟ್ಟಿನಲ್ಲಿ ವಿಶ್ವಕಪ್ಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಕ್ಕೆ ಅಭ್ಯಾಸ ಪಂದ್ಯ ವಿವಿಧ ರೀತಿಯಲ್ಲಿ ಸಹಾಯ ಮಾಡಲಿದೆ.
ಸಿದ್ದರಾಮಯ್ಯ ನಮ್ಮ ನಾಯಕ, ಸಿದ್ದು ಹೆಸರು ದುರ್ಬಳಕೆ ಬೇಡ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವವನ್ನು ಪುನಃ ದೃಢಪಡಿಸಿದ್ದಾರೆ. ಅವರು ಹೇಳಿದ್ದು, "ಸಿದ್ದರಾಮಯ್ಯ ಅವರು ನಮ್ಮ ನಾಯಕ. ಅವರು ಎಲ್ಲಾ ಚುನಾವಣೆಗಳಿಗೆ ಬೇಕು....