ಟಿ20 ವಿಶ್ವಕಪ್ 2021 – ಐರ್ಲೆಂಡ್ ತಂಡದಲ್ಲೊಬ್ಬ ಮಾಲಿಂಗ…!
ಲಸಿತ್ ಮಾಲಿಂಗ. ಗುಂಗುರು ಕೂದಲು.. ಅದಕ್ಕೊಂದು ಕಲರ್ ಬೇರೆ.. ಬೌಲಿಂಗ್ ಆರಂಭಿಸಿದರೆ ಯಾರ್ಕರ್ ಮಾಲಿಂಗ ಎಂದೇ ಕರೆಸಿಕೊಳ್ಳುತ್ತಿದ್ದರು. ಮಾಲಿಂಗ ಅಂದರೆ ಯಾರ್ಕರ್, ಯಾರ್ಕರ್ ಅಂದ್ರೆ ಮಾಲಿಂಗ ಅನ್ನುವಷ್ಟರ ಮಟ್ಟಿಗೆ ಫೇಮಸ್. ಮಾಲಿಂಗ ಅಂದರೆ ದಕ್ಷಿಣ ಆಫ್ರಿಕಾ ವಿರುದ್ಧದ 2007 ರಏಕದಿನ ವಿಶ್ವಕಪ್ ಪಂದ್ಯ ಮೊದಲು ನೆನಪಿಗೆ ಬರುತ್ತದೆ. ದಕ್ಷಿಣ ಆಫ್ರಿಕಾ ಗೆಲ್ತಾ ಇದ್ದ ಪಂದ್ಯವನ್ನು ಮಾಲಿಂಗ ಸತತ 4 ಬಾಲ್ಗಳಲ್ಲಿ 4 ವಿಕೆಟ್ ಕಬಳಿಸಿ ಶ್ರೀಲಂಕಾ ಗೆಲ್ಲುವಂತೆ ಮಾಡಿದ್ದರು. ಅದಾದಾ ಮೇಲೆ ಟಿ20 ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ನ ಕಾಲಿನ್ ಮನ್ರೊ, ರುದರ್ಫೊರ್ಡ್, ಕಾಲಿನ್ ಡಿ ಗ್ರಾಂಡ್ ಹೋಂ ಮತ್ತು ರಾಸ್ ಟೇಲರ್ ವಿಕೆಟ್ ಗಳನ್ನು ಸತತ 4 ಎಸೆತಗಳಲ್ಲಿ ಪಡೆದು ದಾಖಲೆ ನಿರ್ಮಿಸಿದ್ದರು. ಟಿ20 ಮ್ಯಾಚ್ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಕೂಡ ಐರ್ಲೆಂಡ್ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಈಗ ಟಿ20 ವಿಶ್ವಕಪ್ನ 2ನೇ ದಿನವೇ ಐರ್ಲೆಂಡ್ನ ಕರ್ಟಿಸ್ ಕ್ಯಾಂಪರ್ ಎದುರಾಳಿಗಳಿಗೆ ಮಾಲಿಂಗ ಚಮಕ್ ತೋರಿಸಿದ್ದಾರೆ.
ಐರ್ಲೆಂಡ್ ವೇಗದ ಬೌಲರ್ ಕರ್ಟಿಸ್ ಕ್ಯಾಂಫರ್ ಭಾನುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ಜೊತೆಗೆ 4 ಬಾಲ್ನಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ. ಈ ಹಿಂದೆ ಶ್ರೀಲಂಕಾದ ಲಸಿತ್ ಮಾಲಿಂಗ ) ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ಗಳನ್ನು ಗಳಿಸಿದ್ದರು.
ಕ್ಯಾಂಪರ್ ಐರ್ಲೆಂಡ್ ಇನ್ನೇನು ದೊಡ್ಡ ಮೊತ್ತ ಗಳಿಸುತ್ತೆ ಅನ್ನುವಾಗಲ ಮ್ಯಾಜಿಕ್ ಮಾಡಿದರು. ನೆದರ್ಲೆಂಡ್ ಇನ್ನಿಂಗ್ಸ್ ನ 10ನೇ ಓವರ್ ನ ಎರಡನೇ ಎಸೆತದಲ್ಲಿ ಏಕರ್ ಮನ್ ಅವರನ್ನು ಕ್ಯಾಂಪರ್ ಮೊದಲ ಬಲಿಯಾಗಿ ಪಡೆದರು. ಮೂರನೇ ಎಸೆತದಲ್ಲಿ ಟೆನ್ ಡೆಷ್ಕೋಟ್ ಎಲ್ಬಿ ಬಲೆಗೆ ಬಿದ್ದರು. ನಾಲ್ಕನೇ ಎಸೆತದಲ್ಲಿ ಸ್ಕಾಟ್ ಎಡ್ವರ್ಡ್ಸ್ ಕೂಡ ಎಲ್ ಬಿ ಬಲೆಗೆ ಬಿದ್ದು ಹ್ಯಾಟ್ರಿಕ್ ಬಲಿಯಾದರು. ಮುಂದಿನ ಎಸೆತದಲ್ಲಿ ರೊಲ್ಫ್ ವಾನ್ ಡರ್ ಮರ್ವ್ ಕ್ಲೀನ್ ಬೌಲ್ಡ್ ಆದರು, ಹೀಗೆ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಫರ್ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿದ 4 ವಿಕೆಟ್ ಪಡೆದ ಸಾಧನೆ ಮಾಡಿದರು.
ಅಮೇಜಾನ್ ಪ್ರೈಮ್ ನಲ್ಲಿ ಕನ್ನಡದ ‘ಮರ್ಯಾದೆ ಪ್ರಶ್ನೆ’
ಒಂದಷ್ಟು ಅನುಭವಿ ತಂಡ ಸೇರಿಕೊಂಡು ಮರ್ಯಾದೆ ಪ್ರಶ್ನೆ ಎಂಬ ಒಂದೊಳ್ಳೆ ಕಂಟೆಂಟ್ ಸಿನಿಮಾವನ್ನು ಪ್ರೇಕ್ಷಕರ ಎದುರು ಹರವಿಟ್ಟಿದ್ದಾರೆ. ಕಳೆದ ನವೆಂಬರ್ 22ರಂದು ಚಿತ್ರಮಂದಿರಕ್ಕೆ ಬಂದ ಈ ಚಿತ್ರ...