ಟಿ – ವಿಶ್ವಕಪ್ – ಶೋಯಿಬ್ ಮಲ್ಲಿಕ್, ರಿಜ್ವಾನ್ ಗೆ ಜ್ವರ- ಸೆಮಿಫೈನಲ್ ನಲ್ಲಿ ಆಡೋದು ಅನುಮಾನ

1 min read
Mohammad Rizwan pakistan babar azaam t-20 wolrd cup saakshatv

ಟಿ – ವಿಶ್ವಕಪ್ – ಶೋಯಿಬ್ ಮಲ್ಲಿಕ್, ರಿಜ್ವಾನ್ ಗೆ ಜ್ವರ- ಸೆಮಿಫೈನಲ್ ನಲ್ಲಿ ಆಡೋದು ಅನುಮಾನ

shoib mallik pakistan  saakshatv t-20 world cupಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಡ್ರೆಸಿಂಗ್ ರೂಮ್ ನಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ಇಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ನಡುವೆ ಪಾಕಿಸ್ತಾನದ ಸ್ಟಾರ್ ಆಟಗಾರರಾದ ಶೋಯಿಬ್ ಮಲ್ಲಿಕ್ ಮತ್ತು ಮಹಮ್ಮದ್ ರಿಜ್ವಾನ್ ಅವರು ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.
ಶೋಯಿಬ್ ಮಲ್ಲಿಕ್ ಮತ್ತು ಮಹಮ್ಮದ್ ರಿಜ್ವಾನ್ ಅವರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂದು ಬೆಳಗ್ಗಿನ ಅಭ್ಯಾಸದಿಂದಲೂ ಹೊರಗುಳಿದಿದ್ದಾರೆ.
ಏತನ್ಮಧ್ಯೆ, ಶೋಯಿಬ್ ಮಲ್ಲಿಕ್ ಮತ್ತು ಮಹಮ್ಮದ್ ರಿಜ್ವಾನ್ ಅವರನ್ನು ಕೋವಿಡ್ ಟೆಸ್ಟ್ ಗೂ ಒಳಪಡಿಸಲಾಗಿದ್ದು, ವರದಿ ನೆಗಟಿವ್ ಅಂತ ಬಂದಿದೆ. ಇದು ತುಸು ಸಮಾಧಾನಕರ ಸಂಗತಿಯಾಗಿದೆ.
ಒಂದು ವೇಳೆ ಇವರಿಬ್ಬರು ಇಂದಿನ ಪಂದ್ಯಕ್ಕೆ ಅಲಭ್ಯರಾದ್ರೆ ಮಹಮ್ಮದ್ ರಿಜ್ವಾನ್ ಸ್ಥಾನಕ್ಕೆ ಮಾಜಿ ಣಾಯಕ ಸಫ್ರಾಝ್ ಅಹಮ್ಮದ್ ಮತ್ತು ಶೋಯಿಬ್ ಮಲ್ಲಿಕ್ ಸ್ಥಾನಕ್ಕೆ ಹೈದರ್ ಆಲಿ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸೂಪರ್ -12 ಹಂತದಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಈಗಾಗಲೇ ಇಂಗ್ಲೆಂಡ್ ತಂಡವನ್ನು ಮಣಿಸಿರುವ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿದೆ. ಪಾಕ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಯಾರು ಫೈನಲ್ ಪ್ರವೇಶಿಸುತ್ತಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd