ಟಿ-20 ಪಟ್ಟಕ್ಕಾಗಿ ಫೈಟ್ – ನ್ಯೂಜಿಲೆಂಡ್ – ಆಸ್ಟ್ರೇಲಿಯಾ ಕಾದಾಟ.. ಗೆಲ್ಲೋರು ಯಾರು ?

1 min read
aron finch kane williamson saakshatv t-20 wolrdcup2021

ಟಿ-20 ಪಟ್ಟಕ್ಕಾಗಿ ಫೈಟ್ – ನ್ಯೂಜಿಲೆಂಡ್ – ಆಸ್ಟ್ರೇಲಿಯಾ ಕಾದಾಟ.. ಗೆಲ್ಲೋರು ಯಾರು ?

aron finch kane williamson saakshatv t-20 wolrdcup2021ಇದು ಟಿ20 ವಿಶ್ವಕಪ್ನ ಕಟ್ಟಕಡೆಯ ಪಂದ್ಯ. ಚಾಂಪಿಯನ್ ಯಾರಾಗ್ತಾರೆ ಅನ್ನುವುದನ್ನು ದುಬೈನಲ್ಲಿ ನಡೆಯುವ ಈ ಪಂದ್ಯ ನಿರ್ಧಾರ ಮಾಡಲಿದೆ. ನೆರಹೊರೆಯ ದೇಶಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಪಟ್ಟಕ್ಕಾಗಿ ಫೈಟ್ ಮಾಡಲಿವೆ. ಯಾರೇ ಗೆದ್ದರೂ ಮೊದಲ ಬಾರಿಗೆ ಕಪ್ ಗೆದ್ದ ಸಂಭ್ರಮ ಇರಲಿದೆ.
ಎರಡೂ ತಂಡಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲೂ ಸೂಪರ್ ಆಗಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ಗೆ ಮುನ್ನ ತಲಾ ಒಂದೊಂದು ಸೋಲು ಕಂಡಿದ್ದವು. ಸೆಮಿಫೈನಲ್ನಲ್ಲಿ ಎರಡೂ ತಂಡಗಳು ಹಾಟ್ ಫೆವರೀಟ್ ತಂಡಗಳನ್ನೇ ಸೋಲಿಸಿದ್ದವು. ಆಸ್ಟ್ರೇಲಿಯಾದ ಅಬ್ಬರಕ್ಕೆ ಪಾಕ್ ಮನೆಗೆ ಹೋದ್ರೆ, ನ್ಯೂಜಿಲೆಂಡ್ ಇಂಗ್ಲೆಂಡ್ ತಂಡವನ್ನು ತವರಿಗೆ ಕಳುಹಿಸಿತ್ತು.
ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ ಮಿಚೆಲ್ ಮಾರ್ಷ್, ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾದ ಅಬ್ಬರದ ಬ್ಯಾಟಿಂಗ್ಗೆ ಆಧಾರ ಸ್ಥಂಭಗಳು. ಸ್ಟೋಯ್ನಿಸ್ ಮತ್ತು ವೇಡ್ ಫಿನಿಷ್ ಮಾಡಬಲ್ಲರು. ಸ್ಟೀವನ್ ಸ್ಮಿತ್ ಆಪತ್ಬಾಂಧವ. ಬೌಲಿಂಗ್ನಲ್ಲಿ ಸ್ಟಾರ್ಕ್, ಕಮಿನ್ಸ್ ಮತ್ತು ಹ್ಯಾಜಲ್ವುಡ್ ವೇಗದ ಬೌಲರ್ಗಳು. ಆ್ಯಡಂ ಜಂಪಾ ಸ್ಪಿನ್ ಸಖತ್ ಆಗಿ ಪಂದ್ಯಕ್ಕೆ ತಿರುವು ನೀಡಿದೆ
ನ್ಯೂಜಿಲೆಂಡ್ ತಂಡಕ್ಕೂ ಏನೂ ಕೊರತೆ ಇಲ್ಲ. ಗಪ್ಟಿಲ್, ಮಿಚೆಲ್ ಆಟಕ್ಕೆ ವಿಲಿಯಮ್ಸನ್ ಸಾಥ್ ನೀಡಬಲ್ಲರು. ಟಿಮ್ ಸಿಫರ್ಟ್ ಗಾಯಗೊಂಡಿರುವ ಡೆವೊನ್ ಕಾನ್ವೆ ಜಾಗದಲ್ಲಿ ಆಡಲಿದ್ದಾರೆ. ಫಿಲಿಪ್ಸ್, ನಿಶಾಮ್ ಮತ್ತು ಸ್ಯಾಂಟ್ನರ್ ಆಲ್ರೌಂಡರ್ಗಳು. ಬೋಲ್ಟ್, ಸೌಥಿ ಮತ್ತು ಮಿಲ್ನೆ ಫಾಸ್ಟ್ ಬೌಲಿಂಗ್ ನೋಡಿಕೊಂಡರೆ, ಸೋಧಿ ಟ್ರಂಪ್ ಕಾರ್ಡ್ ಸ್ಪಿನ್ನರ್.
ದುಬೈನಲ್ಲಿ ಟಾಸ್ ಗೆದ್ದವನೇ ಬಾಸ್ ಅನ್ನುವ ಮಾತಿದೆ. ಹೀಗಾಗಿ ಫೈನಲ್ ಪಂದ್ಯಕ್ಕೂ ಮುನ್ನ ಟಾಸ್ ಬಗ್ಗೆ ಹೆಚ್ಚು ಗಮನವಿದೆ. ಒಟ್ಟಿನಲ್ಲಿ ಎರಡೂ ಬಲಿಷ್ಠ ತಂಡಗಳು ವಿಶ್ವಕಪ್ಗಾಗಿ ಫೈಟ್ ಮಾಡುತ್ತಿವೆ ಅನ್ನುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಆಸ್ಟ್ರೇಲಿಯಾ
1. ಆ್ಯರೊನ್ ಫಿಂಚ್, 2. ಡೇವಿಡ್ ವಾರ್ನರ್, 3. ಮಿಚೆಲ್ ಮಾರ್ಷ್, 4. ಗ್ಲೆನ್ ಮ್ಯಾಕ್ಸ್ವೆಲ್, 5. ಸ್ಟೀವನ್ ಸ್ಮಿತ್, 6. ಮಾರ್ಕಸ್ ಸ್ಟೋಯ್ನಿಸ್, 7. ಮ್ಯಾಥ್ಯೂ ವೇಡ್. 8. ಪ್ಯಾಟ್ ಕಮಿನ್ಸ್, 9. ಮಿಚೆಲ್ ಸ್ಟಾರ್ಕ್, 10. ಜೋಶ್ ಹ್ಯಾಜಲ್ವುಡ್, 11. ಆ್ಯಡಂ ಜಂಪಾ
ನ್ಯೂಜಿಲೆಂಡ್
1. ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, 3. ಕೇನ್ ವಿಲಿಯಮ್ಸನ್, 4. ಟಿಮ್ ಸೀಫರ್ಟ್, 5. ಗ್ಲೆನ್ ಫಿಲಿಫ್ಸ್, 6. ಜೇಮಿ ನಿಶಾಮ್ 7. ಮಿಚೆಲ್ ಸ್ಯಾಂಟ್ನರ್, 8. ಟಿಮ್ ಸೌಥಿ, 9. ಟ್ರೆಂಟ್ ಬೋಲ್ಟ್, 10. ಆ್ಯಡಂ ಮಿಲ್ನೆ, 11. ಈಶ್ ಸೋಧಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd