T 20 World Cup | ಸೆಮಿಫೈನಲ್ನಲ್ಲಿ ಹೊರಬಿದ್ದ ಏಕದಿನ ಚಾಂಪಿಯನ್

1 min read
T 20 World Cup saaksha tv

ಸೇಡು ತೀರಿಸಿಕೊಂಡ ಕಿವೀಸ್- ಸೆಮಿಫೈನಲ್ನಲ್ಲಿ ಹೊರಬಿದ್ದ ಏಕದಿನ ಚಾಂಪಿಯನ್- ನ್ಯೂಜಿಲೆಂಡ್ ವಿರುದ್ಧ ಸೋತ ಇಂಗ್ಲೆಂಡ್

ನ್ಯೂಜಿಲೆಂಡ್ ತಂಡವನ್ನು ಯಾರೂ ದ್ವೇಷ ಮಾಡಲು ಸಾಧ್ಯವೇ ಇಲ್ಲ. ಆಟ ಹಾಗೂ ನಡತೆಯಲ್ಲಿ ಗೌರವವನ್ನು ಪಡೆದಿರುವ ನ್ಯೂಜಿಲೆಂಡ್ ಈಗ ಟಿ20 ವಿಶ್ವಕಪ್ನ ಫೈನಲ್ ಪ್ರವೇಶಿಸಿದೆ. 2019ರ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿದೆ.

ಅಬುದಾಭಿಯ ಶೇಕ್ ಝಹೀದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಉತ್ತಮ ಮೊತ್ತವನ್ನು ಪೇರಿಸಿತು. ಜೋಸ್ ಬಟ್ಲರ್ (24 ಎಸೆತ 29 ರನ್) ಮತ್ತು ಜಾನಿ ಬೇರ್ ಸ್ಟೋವ್ (17 ಎಸೆತ 13 ರನ್) ಉತ್ತಮ ಆರಂಭ ತಂದುಕೊಡಲಿಲ್ಲ. ಆದರೆ ಡೆವಿಡ್ ಮಲಾನ್ (30 ಎಸೆತ 41 ರನ್) ಮತ್ತು ಮೊಯಿನ್ ಅಲಿ (51 ರನ್, 37 ಎಸೆತ) ಉತ್ತಮ ಆಟವಾಡಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಮೊತ್ತ ತಂದುಕೊಟ್ಟರು. 20 ಓವರುಗಳಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 166 ರನ್ಗಳಿಸಿತ್ತು.

T 20 World Cup saaksha tv

ಗುರಿ ಬೆನ್ನಟ್ಟ ಹೊರಟ ಕಿವೀಸ್ಗೆ ಆರಂಭದಲ್ಲೇ ಶಾಕ್ನ ಮಾರ್ಟಿನ್ ಗಪ್ಟಿಲ್ 4 ರನ್ ಮತ್ತು ಕೇನ್ ವಿಲಿಯಮ್ಸನ್ 5 ರನ್ಗಳಿಸಿ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ಕಡೆ ಡೆರಿಲ್ ಮಿಚೆಲ್ ಗಟ್ಟಿಯಾಗಿ ಕ್ರೀಸ್ ಕಚ್ಚಕೊಂಡಿದ್ದರು. ಡೆವೊನ್ ಕಾನ್ವೆ (46 ರನ್, 38 ಎಸೆತ) ಉತ್ತಮ ಸಾಥ್ ನೀಡಿದರು.

ಆದರೆ ಲಿವಿಂಗ್ ಸ್ಟೋನ್ ಕಾನ್ವೆ ಮತ್ತು ಗ್ಲೆನ್ ಫಿಲಿಫ್ಸ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಕ್ರೀಸ್ಗಳಿದ ಜೇಮ್ಸ್ ನಿಶಾಮ್ ಕೇವಲ 11 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 1 ಫೋರ್ ಮೂಲಕ ಅಬ್ಬರದ 27 ರನ್ಗಳಿಸಿ ಪಂದ್ಯದ ಸ್ಥಿತಿ ಬದಲಾಯಿಸಿದರು. 19ನೇ ಓವರ್ನಲ್ಲಿ ಮಿಚೆಲ್ ಪಂದ್ಯ ಮುಗಿಸಿದರು. ಮಿಚೆಲ್ ಕೇವಲ 47 ಎಸೆತಗಳಲ್ಲಿ 4 ಫೋರ್ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 72 ರನ್ಗಳಿಸಿ ಗೆಲುವಿನ ರೂವಾರಿ ಯಾದರು. 6 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿದ ನ್ಯೂಜಿಲೆಂಡ್ ಟಿ20 ವಿಶ್ವಕಪ್ನ ಫೈನಲ್ ತಲುಪಿತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd