ಶ್ರೀಲಂಕಾ ವಿರುದ್ಧವೂ ಸೋತ ವೆಸ್ಟ್ಇಂಡೀಸ್- ಗ್ರೂಪ್ ಹಂತದಲ್ಲೇ ಟೂರ್ನಿಗೆ ಗುಡ್ ಬೈ ಹೇಳಿದ ಹಾಲಿ ಚಾಂಪಿಯನ್ಸ್..!
ಟಿ20 ಕ್ರಿಕೆಟ್ನ ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ಇಂಡೀಸ್ ತಿರುಗಿ ಬೀಳಬಹುದು ಅನ್ನುವ ಲೆಕ್ಕಾಚಾರವಿತ್ತು.
ಆದರೆ ಶ್ರೀಲಂಕಾ ವಿರುದ್ಧವೂ ವಿಂಡೀಸ್ನ ಯಾವುದೇ ಆಟ ನಡೆಯಲಿಲ್ಲ.
ಅಷ್ಟೇ ಅಲ್ಲ 20 ರನ್ಗಳ ಸೋಲು ಕೆರಿಬಿಯರನ್ನು ಟೂರ್ನಿಯಿಂದಲೇ ಹೊರಬೀಳುವಂತೆ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಉತ್ತಮ ಮೊತ್ತ ಕಲೆ ಹಾಕಿತು.
ಕುಸಾಲ್ ಪೆರಾರ 21 ರನ್ಗಳಿಸಿದರೆ, ನಿಸ್ಸಾಂಕ 51 ರನ್ ಸಿಡಿಸಿದರು.
ಅಸಲಂಕ ಬಿರುಸಿನ 68 ರನ್ಗಳಿಸಿದರೆ ನಾಯಕ ದಸುನ್ ಶನಕ ಅಜೇಯ 25 ರನ್ ಸಿಡಿಸಿದರು.
20 ಓವರುಗಳಲ್ಲಿ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತು.
ಚೇಸಿಂಗ್ಗೆ ಹೊರಟ ವೆಸ್ಟ್ಇಂಡೀಸ್ ಆರಂಭದಲ್ಲೇ ಎಡವಿತು.
ಕ್ರಿಸ್ ಗೇಲ್ 1 ರನ್ಗಳಿಸಿದರೆ, ಲೆವಿಸ್ 8 ರನ್ಗೆ ಔಟಾದರು.
ರೋಸ್ಟನ್ ಚೇಸ್ಗಳಿಸಿದ್ದು 9 ರನ್ ಮಾತ್ರ.
ನಿಕೊಲಸ್ ಪೂರನ್ ಮತ್ತು ಶಿಮ್ರನ್ ಹೆಟ್ಮಯರ್ ತಂಡವನ್ನು ಆಧರಿಸಿದರೂ ರನ್ರೇಟ್ ಹೆಚ್ಚುತ್ತಾ ಹೋಯಿತು.
ಪೂರನ್ 46 ರನ್ಗಳಿಸಿ ಔಟಾಗುತ್ತಿದ್ದಂತೆಯೇ ವಿಂಡೀಸ್ ಕುಸಿತ ಮತ್ತೆ ಆರಂಭವಾಯಿತು.
ಆಂಡ್ರೆ ರಸೆಲ್ 2 ರನ್ಗಳಿಸಿದರೆ, ಕೈರಾನ್ ಪೊಲ್ಲಾರ್ಡ್ ಗಳಿಕೆ ಕೇವಲ 2 ರನ್ಗಳಿಗೆ ಸೀಮಿತವಾಗಿತ್ತು.
ಜೇಸನ್ ಹೋಲ್ಡರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆದರೆ ಶಿಮ್ರನ್ ಹೆಟ್ಮಯರ್ ಮಾತ್ರ ಅಜೇಯ 81 ರನ್ಗಳಿಸಿದರು.
ಇಷ್ಟಾದರೂ ವೆಸ್ಟ್ಇಂಡೀಸ್ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಮಾತ್ರ ಗಳಿಸಿತ್ತು.
20 ರನ್ಗಳ ಸೋಲು ವೆಸ್ಟ್ಇಂಡೀಸ್ ತಂಡವನ್ನು ಟೂರ್ನಿಯಿಂದಲೇ ಹೊರಗಟ್ಟಿತು.