T20 wc 2022 | ಹಾರ್ದಿಕ್ ಅಬ್ಬರ.. ಇಂಗ್ಲೆಂಡ್ 169 ರನ್ ಗುರಿ
ಟಿ 20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 168 ರನ್ ಗಳಿಸಿದೆ. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ 169 ರನ್ ಗಳ ಗುರಿಯನ್ನ ನೀಡಿದೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಟೀಂ ಇಂಡಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು.
ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಗೆ ಕ್ರಿಸ್ ಹೋಕ್ಸ್ ಶಾಕ್ ನೀಡಿದರು. ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ಐದು ರನ್ ಗಳಿಸಿ ಔಟ್ ಆದರು.
ಇದಾದ ಬಳಿಕ ಮಿಂಚುವ ಸೂಚನೆ ನೀಡಿದ್ದ ರೋಹಿತ್ ಶರ್ಮಾ ಆಟ 27 ರನ್ ಗಳಿಗೆ ಅಂತ್ಯವಾಯಿತು.
ಇನ್ನೂ ಟೀಂ ಇಂಡಿಯಾದ ಸೂಪರ್ ಮ್ಯಾನ್ ಸೂರ್ಯ ಕುಮಾರ್ ಯಾದವ್ ಗೆ ಆಂಗ್ಲರು ಬೇಗ ಖೆಡ್ಡಾ ತೋಡಿದರು. ಸೂರ್ಯ 14 ರನ್ ಗಳಿಸಿ ರಶೀದ್ ಗೆ ವಿಕೆಟ್ ನೀಡಿದರು.
ಈ ಸಂಕಷ್ಟದ ಸ್ಥಿತಿಯಲ್ಲಿ ವಿರಾಟ್ ಕೊಹ್ಲಿ –ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಗೆ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಪೂರೈಸಿದರು.
40 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 50 ರನ್ ಗಳಿಸಿ ಔಟ್ ಆದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಗೇರ್ ಚೇಂಜ್ ಮಾಡಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶ ನೀಡಿದರು. 33 ಎಸೆತಗಳಲ್ಲಿ 63 ರನ್ ಚಚ್ಚಿದರು.
ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದೆ.