T20-wc-2022 – ವರ್ಲ್ಡ್ ಕಪ್ ನಲ್ಲಿ ಟಾಪ್ ಸ್ಕೋರರ್.. ಟಾಪ್ ವಿಕೆಟ್ ಟೇಕರ್ ಯಾರಾಗ್ತಾರೆ
ಒಂದು ರಣ ರೋಚಕ ಪಂದ್ಯಗಳು.. ಮತ್ತೊಂದು ಕಡೆ ವರುಣಾರ್ಭಟ.. ಇದರಿಂದ ಡೇಜರ್ ಜೋನ್ ಗೆ ಹೋಗುತ್ತಿರುವ ಪಂದ್ಯಗಳು.
ಸೂಪರ್ 12 ರಲ್ಲಿ ಇಲ್ಲಿಯವರೆಗೂ ಕೆಲವು ಮ್ಯಾಚ್ ಗಳು ಮಳೆಯಿಂದ ರದ್ದಾಗಿದ್ದು, ಮಳೆರಾಯ ಯಾರಿಗೆ ಕರುಣೆ ತೋರುತ್ತಾನೋ.. ಯಾರಿಗೆ ಕರುಣೆ ತೋರುವುದಿಲ್ಲವೋ ಗೊತ್ತಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಟಿ 20 ವಿಶ್ವಕಪ್ ಟೂರ್ನಿ ಸಾಗುತ್ತಿದೆ.
ಇದು ಹೀಗಿದ್ದರೇ ಭಾರತ ಕ್ರಿಕೆಟ್ ತಂಡ ಈವರೆಗೂ ಎರಡು ಪಂದ್ಯಗಳನ್ನಾಡಿದ್ದು ಎರಡರಲ್ಲೂ ಗೆಲುವು ಸಾಧಿಸಿದೆ.
ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಬೌಲರ್ ಗಳಾದ ಅರ್ಷ್ ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಅದರಲ್ಲೂ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನವನ್ನು ಯಾರು ಮರೆಯುವಾಗೇ ಇಲ್ಲ.

ಇನ್ನು ನೆದರ್ ಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೆ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ರೆ ಸೂರ್ಯ ಕುಮಾರ್ ಯಾದವ್ ಮಿಂಚಿನ ಅರ್ಧಶತಕ ಸಿಡಿಸಿದರು.
ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ – ಭುವನೇಶ್ವರ್ ಕುಮಾರ್ ಬೊಂಬಾಟ್ ಸ್ಪೆಲ್ ಮಾಡಿದರು.
ಭುವಿ ಮೂರು ಓವರ್ ಗಳಲ್ಲಿ ಒಂಭತ್ತು ರನ್ ನೀಡಿ ಎರಡು ವಿಕೆಟ್ ಪಡೆದರು. ಅರ್ಷ್ ದೀಪ್ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವಸೀಂ ಜಾಫರ್ ವರ್ಲ್ಡ್ ಕಪ್ 2022 ಟೂರ್ನಿಯಲ್ಲಿ ಟಾಪ್ ಸ್ಕೋರರ್, ಅತ್ಯಧಿಕ ವಿಕೆಟ್ ತೆಗೆಯುವ ಆಟಗಾರರು ಯಾರು ಎಂಬುದನ್ನ ಅಂದಾಜಿಸಿದ್ದಾರೆ.
ನೆಟ್ಟಿಗನ ಪ್ರಶ್ನಿಗೆ ಉತ್ತರಿಸಿರುವ ವಸೀಂ, ವಿರಾಟ್ ಕೊಹ್ಲಿ ಟಾಪ್ ಸ್ಕೋರರ್ ಆದ್ರೆ, ಅರ್ಷ್ ದೀಪ್ ಟಾಪ್ ವಿಕೆಟ್ ಟೇಕರ್ ಗಳಾಗಿ ಟೂರ್ನಿ ಮುಗಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ 144 ರನ್ ಗಳಿಸಿದ್ದಾರೆ. ಅರ್ಷ್ ದೀಪ್ ಸಿಂಗ್ ಐದು ವಿಕೆಟ್ ಗಳನ್ನು ಪಡೆದಿದ್ದಾರೆ.