T20 wc 2022 – ಗ್ರೂಪ್ 2 ಲೆಕ್ಕಾಚಾರ.. ಯಾರಿಗೆ ಸೆಮೀಸ್ ಹಾರ ?
ಟಿ 20 ವರ್ಲ್ಡ್ ಕಪ್ ನ ಸೂಪರ್ 12ರ ಮ್ಯಾಚ್ ಗಳು ಶುರುವಾದಾಗ ಯಾರು ಸೆಮೀಸ್ ಸೇರುತ್ತಾರೆ ಅನ್ನೋ ವಿಷಯದಲ್ಲಿ ಸ್ವಲ್ಪ ಕ್ಲಾರಿಟಿ ಇರುತ್ತಿತ್ತು.
ಆದ್ರೆ ವರುಣನ ಅವಾಂತರದಿಂದ ಕೆಲವು ತಂಡಗಳ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ. ಸದ್ಯ ಸೂಪರ್ 12ರ ಪಂದ್ಯಗಳು ಅಂತಿಮ ಘಟ್ಟಕ್ಕೆ ಬಂದಿವೆ.
ಹೀಗಾಗಿ ಸೆಮೀಸ್ ಸೇರುವ ತಂಡಗಳು ಯಾವುವು ಎಂಬ ಆಸಕ್ತಿದಾಯಕ ಪ್ರಶ್ನೆ ಹುಟ್ಟಿಕೊಂಡಿದೆ.
ಗ್ರೂಪ್ ಒಂದರಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ ನಡುವೆ ಸಾಕಷ್ಟು ಪೈಪೋಟಿ ಇದೆ.
ಗ್ರೂಪ್ ಹಂತದಲ್ಲಿ ಇನ್ನೂ ಪಂದ್ಯಗಳಿರುವ ಕಾರಣದಿಂದಾಗಿ ಆ ಗ್ರೂಪ್ ನಲ್ಲಿ ಯಾರು ಸೆಮಿಸ್ ಸೇರುತ್ತಾರೆ ಅನ್ನೋದು ಈಗಲೇ ಹೇಳುವುದು ಕಷ್ಟ ಸಾಧ್ಯ.
ಗ್ರೂಪ್ 2 ರ ಪರಿಸ್ಥಿತಿಯೂ ಅದೇ ರೀತಿಯಲ್ಲಿದೆ. ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾ ಸೆಮೀಸ್ ಸನಿಹದಲ್ಲಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
ಯಾಕೆಂದ್ರೆ ಗ್ರೂಫ್ ನಲ್ಲಿ ದಕ್ಷಿಣಾಫ್ರಿಕಾ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು ಸೆಮೀಸ್ ರೇಸ್ ನಲ್ಲಿ ಪೈಪೋಟಿಗೆ ಬಿದ್ದಿವೆ.
ಇದರಲ್ಲಿ ಪಾಕಿಸ್ಥಾನ ತಂಡಕ್ಕೆ ಅವಕಾಶಗಳು ತೀರಾ ಕಡಿಮೆ. ಆದ್ರೂ ಟಿ 20 ಕ್ರಿಕೆಟ್ ನಲ್ಲಿ ಯಾವಾಗ ಏನಾಗುತ್ತದೋ ಅಂತಾ ಹೇಳಲು ಸಾಧ್ಯವಿಲ್ಲ.
![t20-wc-2022-interesting-scenario-who-will-reach-semi-finals](http://saakshatv.com/wp-content/uploads/2022/10/team-india-4.jpg)
ಸದ್ಯದ ಲೆಕ್ಕಾಚಾರದ ಪ್ರಕಾರ..
ಟೀಂ ಇಂಡಿಯಾ ಸೇಫ್ ಜೋನ್ ನಲ್ಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲುಂಡಿದೆ.
ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನವೆಂಬರ್ ಆರರಂದು ಜಿಂಬಾಬ್ವೆ ವಿರುದ್ಧ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ರೆ ಸೆಮೀಸ್ ಪಕ್ಕಾ.
ಒಂದು ವೇಳೆ ಆ ಪಂದ್ಯದಲ್ಲಿ ಸೋಲು ಕಂಡರೇ ರನ್ ರೇಟ್ ಜೊತೆಗೆ ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಭಿತರಾಗಬೇಕಾಗುತ್ತದೆ.
ಇನ್ನು ಸೆಮೀಸ್ ರೇಸ್ ನಲ್ಲಿರುವ ಎರಡನೇ ತಂಡ ದಕ್ಷಿಣ ಆಫ್ರಿಕಾ, ಪ್ರಸ್ತುತ ಮೂರು ಪಂದ್ಯಗಳನ್ನಾಡಿದ್ದು ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಒಂದು ಪಂದ್ಯ ರದ್ದಾದ ಕಾರಣ ಐದು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಆಫ್ರಿಕಾ ತಂಡ ತನ್ನ ಮುಂದಿನ ಪಂದ್ಯಗಳನ್ನು ಪಾಕಿಸ್ತಾನ, ನೆದರ್ ಲೆಂಡ್ ವಿರುದ್ಧ ಆಡಬೇಕಾಗಿದೆ.
ಬಾಂಗ್ಲಾದೇಶ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದ್ದು, ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಪಾಕಿಸ್ಥಾನ ತಂಡ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆದ್ದಿದೆ. ಎರಡರಲ್ಲಿ ಸೋಲು ಕಂಡಿದೆ.