ಸೆಲೆಬ್ರೆಟ್ ಮಾಡದ ಜೇಮ್ಸ್ ನಿಶಾಮ್ : ಫೋಟೋ ವೈರಲ್

1 min read
james-neesham saaksha tv

ಸೆಲೆಬ್ರೆಟ್ ಮಾಡದ ಜಿಮ್ಮಿ ನಿಶಾಮ್ : ಫೋಟೋ ವೈರಲ್

ನ್ಯೂಜಿಲೆಂಡ್ ನ ಕನಸು ನನಸಾಗಿಸುವಲ್ಲಿ ಜೇಮ್ಸ್ ನೀಶಮ್ ಪ್ರಮುಖ ಪಾತ್ರ ವಹಿಸಿದ್ದರು.

2007ರ ಟಿ20 ವಿಶ್ವಕಪ್ ಯಿಂದ ಈವರೆಗೂ ಒಮ್ಮೆಯೂ ಫೈನಲ್ ತಲುಪಿಲ್ಲ ಎಂಬ ಅಪಖ್ಯಾತಿಯನ್ನು ಅಳಿಸಿ ಹಾಕುವಲ್ಲಿ ಸ್ಟಾರ್ ಆಲ್ ರೌಂಡರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಟಿ20 ವಿಶ್ವಕಪ್-2021ರ ಅಂಗವಾಗಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಗೆದ್ದು ಫೈನಲ್‍ಗೆ ಅರ್ಹತೆ ಪಡೆದಿದೆ.

ವಾಸ್ತವವಾಗಿ, ಪಂದ್ಯದ 16 ನೇ ಓವರ್ ವರೆಗೆ ಇಂಗ್ಲೆಂಡ್ ಮುನ್ನಡೆ ಸಾಧಿಸಿತ್ತು.

ಆದರೆ ನಂತರ ನಿಶಾಮ್ ಪ್ರವೇಶವು ಮಾರ್ಗನ್ ತಂಡಕ್ಕೆ ಸರಿಪಡಿಸಲಾಗದ ಹೊಡೆತವನ್ನು ನೀಡಿತು.

james-neesham saaksha tv

ನಿಶಾಮ್ 11 ಎಸೆತಗಳಲ್ಲಿ 27 ರನ್ ಚಚ್ಚಿದರ ಭಾಗವಾಗಿ ನ್ಯೂಜಿಲೆಂಡ್ ನಿರಾಯಸವಾಗಿ ಗುರಿಯನ್ನು ಮುಟ್ಟಿತು.

ಇದು ವಿಲಿಯಮ್ಸನ್ ಹುಡುಗರ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿತ್ತು.

ಡಗೌಟ್‍ನಲ್ಲಿ ಕುಳಿತಿದ್ದ ಆಟಗಾರರು ಮತ್ತು ಸಿಬ್ಬಂದಿ ಒಮ್ಮೆಲೇ ಕುಣಿದಾಡಿದರು.

ಆದರೆ, ರಣ ರೋಚಕ ಇನಿಂಗ್ಸ್ ಆಡಿದ ಜೇಮ್ಸ್ ನೀಶಮ್ ಸೀರಿಯಸ್ ಆಗಿ ನೋಡುತ್ತಾ ಸೀಟ್ ನಲ್ಲಿ ಕುಳಿತುಕೊಂಡಿರುವ ಫೋಟೋ ಈಗ ವೈರಲ್ ಆಗಿದೆ.

ಈ ಅನುಕ್ರಮದಲ್ಲಿ ಈಎಸ್‍ಕ್ರಿಕ್‍ಇನ್ಫೋ ಈ ಫೋಟೋವನ್ನು ಶೇರ್ ಮಾಡಿದೆ.. ಜಿಮ್ಮಿ ನೀಶಮ್ ಮಾತ್ರ ಕುಣಿಯಲಿಲ್ಲ ಎಂದು ಶಿರ್ಷಿಕೆ ಕೊಟ್ಟಿದೆ.

ಇನ್ನು ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd