t20 world cup 2022 | 10 ಓವರ್ ಗಳ ಮುಕ್ತಾಯ : ಭಾರತ 5ಕ್ಕೆ 60 ರನ್
ಟಿ 20 ವಿಶ್ವಕಪ್ ನ ಭಾಗವಾಗಿ ಪರ್ಥ್ ನಲ್ಲಿ ನಡೆಯುತ್ತಿರುವ ದಕ್ಷಿಣಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಮೊದಲ 10 ಓವರ್ ಗಳಲ್ಲಿ ಟೀಂ ಇಂಡಿಯಾ ಐದು ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪವರ್ ಪ್ಲೇನಲ್ಲಿ ಆರಂಭಿಕರನ್ನು ಕಳೆದುಕೊಳ್ತು. ಎನ್ಗಿಡಿಯ ಮೊದಲ ಔವರ್ ನಲ್ಲಿಯೇ ಆರಂಭಿಕರಾದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಪೆವಿಲಿಯನ್ ಸೇರಿಕೊಂಡರು. 14 ಎಸೆತಗಳಲ್ಲಿ ಎದುರಿಸಿದ ಕೆ.ಎಲ್.ರಾಹುಲ್ ಒಂದು ಸಿಕ್ಸ್ ನೊಂದಿಗೆ 9 ರನ್ ಗಳಿಗೆ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟ್ ನಿರಾಸೆ ಮೂಡಿಸಿದರು.

ಈ ಟೂರ್ನಿಯಲ್ಲಿ ರಾಹುಲ್ ಗೆ ಇದು ಸತತ ಮೂರನೇ ವೈಫಲ್ಯವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 14 ಎಸೆತಗಳಿಗೆ 15 ರನ್ ಗಳಿಸಿ ಔಟಾದರು.
ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ 11 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಿಡಿಸಿ 12 ರನ್ ಗಳಿಗೆ ಔಟ್ ಆಗಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಅವಕಾಶ ಪಡೆದ ದೀಪಕ್ ಹೂಡ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಪೆವಿಲಿಯನ್ ಸೇರಿಕೊಂಡರು. ಸದ್ಯ ಕ್ರೀಸ್ ನಲ್ಲಿ ಸೂರ್ಯ ಕುಮಾರ್ ಯಾದವ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಇದ್ದಾರೆ.