T20 World Cup 2022: ಲಂಕಾ ಮಣಿಸಿ ಅಗ್ರಸ್ಥಾನಕ್ಕೇರಿದ ಕಿವೀಸ್…
ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು 65 ರನ್ಗಳಿಂದ ಸೋಲಿಸಿ ಗ್ರೂಪ್ 1 ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದರು.
ಗ್ಲೆನ್ ಫಿಲಿಪ್ಸ್ 64 ಎಸೆತಗಳಲ್ಲಿ 104 ರನ್ ಗಳಿಸಿ ಈ ವಿಶ್ವಕಪ್ ನ ಎರಡನೇ ಶತಕ ದಾಖಲಿಸಿದರು. 10 ಬೌಂಡರಿ ಹಾಗೂ 4 ಸಿಕ್ಸರ್ಗಳನ್ನು ಬಾರಿಸಿದರು. ಸ್ಟ್ರೈಕ್ ರೇಟ್ 162.50 ಆಗಿತ್ತು. ಇದು ಈ ವಿಶ್ವಕಪ್ನಲ್ಲಿ ಎರಡನೇ ಶತಕವಾಗಿದೆ. ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾದ ರಿಲೆ ರುಸ್ಸೋ ಮೊದಲ ಶತಕ ದಾಖಲಿಸಿದರು. ಶ್ರೀಲಂಕಾ ಪರ ಕಸೂನ್ ರಜಿತಾ ಗರಿಷ್ಠ 2 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಮಹೇಶ್ ತೀಕ್ಷಣ, ಧನಂಜಯ್ ಡಿ ಸಿಲ್ವಾ, ಹಸ್ರಂಗ ಮತ್ತು ಲಹಿರು ಕುಮಾರ ತಲಾ ಒಂದೊಂದು ಯಶಸ್ಸು ಪಡೆದರು
ಉತ್ತರವಾಗಿ ಶ್ರೀಲಂಕಾ 19.2 ಓವರ್ಗಳಲ್ಲಿ 102 ರನ್ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಅದೇ ವೇಳೆ ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರು. ಟಿಮ್ ಸೌಥಿ, ಇಶ್ ಸೋಧಿ ಮತ್ತು ಲಾಕಿ ಫರ್ಗುಸನ್ 1-1 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 5 ಅಂಕಗಳನ್ನು ಪಡೆದು ತನ್ನ ಗುಂಪಿನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಶ್ರೀಲಂಕಾ ತಂಡ ಕೇವಲ 2 ಅಂಕಗಳನ್ನ ಪಡೆದು ಸೆಮಿಫೈನಲ್ನ ರೇಸ್ನಿಂದ ಬಹುತೇಕ ಹೊರಗುಳಿದಿದ್ದಾರೆ.
T20 World Cup 2022: New Zealand beat Sri lanka by 65 runs