ಇಂಗ್ಲೆಂಡ್ ಮೊದಲು ಬೌಲಿಂಗ್ನಲ್ಲಿ ಮಿಂಚಿತು. ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳನ್ನು ರನ್ಗಳಿಸಲು ಪರದಾಡುವಂತೆ ಮಾಡಿ 124 ರನ್ಗಳಿಗೆ ಕಟ್ಟಿಹಾಕಿತು.
ನಂತರ ಚೇಸಿಂಗ್ನಲ್ಲಿ ವೇಗವಾಗಿ ಬ್ಯಾಟ್ಬೀಸಿ ರನ್ರೇಟ್ ಹೆಚ್ಚಿಸಿಕೊಂಡಿತು. ಗ್ರೂಪ್ 1ರಲ್ಲಿ ಸತತ 2ನೇ ಜಯ ದಾಖಲಿಸಿದ ಇಂಗ್ಲೆಂಡ್ ಸೆಮಿಫೈನಲ್ಗೆ ಮತ್ತಷ್ಟು ಹತ್ತಿರವಾಯಿತು.
ಅಬುದಾಭಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಈ ನಿರ್ಧಾರ ತಪ್ಪು ಎಂದು ಸಾಭೀತಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ.
3ನೇ ಓವರ್ನಲ್ಲಿ ಮೊಯಿನ್ ಅಲಿ ಲಿಟನ್ ದಾಸ್ (9ರನ್) ಮತ್ತು ನಯೀಮ್(5 ರನ್) ವಿಕೆಟ್ ಕಬಳಿಸಿದರು. ಶಕೀಬ್ (4ರನ್) ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ.
ಮುಷ್ಫಿಕರ್ ರಹೀಮ್ (29 ರನ್) ಮತ್ತು ಮೊಹಮ್ಮದುಲ್ಲಾ (19ರನ್) ಕೊಂಚ ಹೋರಾಡಿದರೂ ಹೆಚ್ಚು ರನ್ ಬರಲಿಲ್ಲ.
ಇಂಗ್ಲೆಂಡ್ ಬಿಗಿದಾಳಿ ನಡೆಸಿ ವಿಕೆಟ್ ಮೇಲೆ ವಿಕೆಟ್ ಪಡೆಯಿತು. 20 ಓವರುಗಳಲ್ಲಿ ಬಾಂಗ್ಲಾ 9 ವಿಕೆಟ್ ಕಳೆದುಕೊಂಡು 124ರನ್ಗಳಿಸಿತು.
ತೈಮಲ್ ಮಿಲ್ಸ್ 3 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟ ಹೊರಟ ಇಂಗ್ಲೆಂಡ್ಗೆ ಬಿರುಸಿನ ಆರಂಭ ಸಿಕ್ಕಿತ್ತು. ಜೋಸ್ ಬಟ್ಲರ್ 18 ರನ್ಗಳಿಸಿ ಔಟಾದರೂ ಜೇಸನ್ ರಾಯ್ 38 ಎಸೆತಗಳಲ್ಲಿ 61 ರನ್ ಸಿಡಿಸಿದರು.
ಡೇವಿಡ್ ಮಲಾನ್ ಅಜೇಯ 28 ರನ್ಗಳಿಸಿತು. ಇಂಗ್ಲೆಂಡ್ 14.1 ಓವರುಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಭರ್ಜರಿ ಜಯದಾಖಲಿಸಿತು.