ಗೆದ್ದು ಬಾ ಅಫ್ಘಾನಿಸ್ತಾನ…! ಇದು ಭಾರತೀಯ ಅಭಿಮಾನಿಗಳ ಪ್ರಾರ್ಥನೆ..!

1 min read

ಗೆದ್ದು ಬಾ ಅಫ್ಘಾನಿಸ್ತಾನ…! ಇದು ಭಾರತೀಯ ಅಭಿಮಾನಿಗಳ ಪ್ರಾರ್ಥನೆ..!

ವಿಶ್ವಕಪ್ ಸೂಪರ್ 12ರ ಗ್ರೂಪ್ 2ರಲ್ಲಿ ರೋಚಕ ಕಾದಾಟ ನಡೆಯುತ್ತಿದೆ. ಸೆಮಿಫೈನಲ್ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಅಫ್ಘಾನಿಸ್ತಾ ಮತ್ತು ಟೀಮ್ ಇಂಡಿಯಾ ಪೈಪೋಟಿ ಮಾಡುತ್ತಿವೆ. ಆದರೆ ಟೀಮ್ ಇಂಡಿಯಾದ ಭವಿಷ್ಯ ಅಫ್ಘಾನಿಸ್ತಾನದ ಕೈಯಲ್ಲಿದೆ. ಅಫ್ಘಾನಿಸ್ತಾನ ನ್ಯೂಜಿಲೆಂಡ್ ವಿರುದ್ಧ ಗೆದ್ದರೆ ಕಿವೀಸ್ ಟೂರ್ನಿಯಿಂದ ಹೊರ ಹೋಗಲಿದೆ. ಒಂದು ವೇಳೆ ಅಫ್ಘಾನ್ ಸೋತರೆ ನಮಿಬಿಯಾ ವಿರುದ್ಧದ ಟೀಮ್ ಇಂಡಿಯಾ ಮ್ಯಾಚ್ ಸುಮ್ಮನೆ ಒಂದು ಪಂದ್ಯವಾಗಲಿದೆ. ಹೀಗಾಗಿ ಅಫ್ಘಾನಿಸ್ತಾನ ತಂಡಕ್ಕೆ ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಗೆದ್ದು ಬಾ ಎಂದು ಹಾರೈಸುತ್ತಿದ್ದಾರೆ.

ಅಬುದಾಭಿಯಲ್ಲಿ ನಡೆಯುವ ಈ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ ಗೆಲುವು ಅನಿವಾರ್ಯ. ಅಫ್ಘಾನಿಸ್ತಾನ ವಿರುದ್ಧ ಕಿವೀಸ್ ಗೆದ್ದರೆ 8 ಅಂಕ ಪಡೆಯುವ ಮೂಲಕ ಸೆಮಿಫೈನಲ್ಗೇರಲಿದೆ. ಟೀಮ್ ಇಂಡಿಯಾ 8 ಅಂಕ ಪಡೆಯುವುದು ಅಸಾಧ್ಯ. ಇನ್ನು ಅಫ್ಘಾನ್ ಗೆದ್ದರೆ ಮತ್ತು ಸೋಮವಾರ ಟೀಮ್ ಇಂಡಿಯಾ ನಮಿಬಿಯಾ ವಿರುದ್ಧ ಗೆದ್ದರೆ ರನ್ ರೇಟ್ ಲೆಕ್ಕಾಚಾರಕ್ಕೆ ಬರಲಿದೆ. ಆಗ ಟೀಮ್ ಇಂಡಿಯಾ ಸೆಮಿಫೈನಲ್ಗೇರುವ ಸಾಧ್ಯತೆ ಹೆಚ್ಚಿರುತ್ತದೆ.

ನ್ಯೂಜಿಲೆಂಡ್ ತಂಡ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್ನಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ ಉತ್ತಮ ಆರಂಭ ನೀಡುತ್ತಿದ್ದಾರೆ. ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೆ ಸ್ಥಿರ ಆಟಕ್ಕೆ ಕಾಯುತ್ತಿದ್ದಾರೆ. ಗ್ಲೆನ್ ಫಿಲಿಫ್ಸ್ ಮತ್ತು ಜೇಮಿ ನಿಶಾಮ್ ಪವರ್ ಫುಲ್ ಆಟ ಆಡಬಲ್ಲರು. ಬೌಲಿಂಗ್ನಲ್ಲೂ ಕಿವೀಸ್ಗೆ ಸಮಸ್ಯೆ ಇಲ್ಲ. ಟಿಮ್ ಸೌಥಿ, ಟ್ರೆಂಟ್ ಬೋಲ್ಟ್ ಮತ್ತು ಆ್ಯಡಂ ಮಿಲ್ನೆ ವೇಗದ ಬೌಲಿಂಗ್ ನೋಡಿಕೊಂಡರೆ, ಈಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಸ್ಪಿನ್ ವಿಭಾಗವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಇನ್ನು ಅಫ್ಘಾನಿಸ್ತಾನ ಸ್ಥಿರ ಆಟದ ಕೊರತೆ ಎದುರಿಸುತ್ತಿದೆ. ಬ್ಯಾಟಿಂಗ್ನಲ್ಲಿ ತಾಕತ್ ಇದ್ದರೂ ಬಲಿಷ್ಠ ತಂಡಗಳ ಮುಂದೆ ಅದು ಪ್ರದರ್ಶನವಾಗಿಲ್ಲ. ಮೊಹಮ್ಮದ್ ಶೆಹಜಾದ್, ಹಸರತುಲ್ಲಾ ಝಝಾಯಿ ಮತ್ತು ರೆಹಮತುಲ್ಲಾ ಗುರ್ಬಾಲ್ ಆಟವೇ ನಿರ್ಣಾಯಕ. ಮೊಹಮ್ಮದ್ ನವಿ ಮತ್ತು ಕರಿಮ್ ಜನ್ನತ್ ಕೆಳ ಸರದಿಯಲ್ಲಿ ಮಿಂಚಬಲ್ಲರು. ಬೌಲಿಂಗ್ನಲ್ಲಿ ರಶೀದ್ ಖಾನ್ ಟ್ರಂಪ್ ಕಾರ್ಡ್. ಇವರನ್ನು ಬಿಟ್ಟರೆ ಉಳಿದವರೆಲ್ಲಾ ಸೇರಿಕೊಂಡು ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಬೇಕಿದೆ. ಗ್ರೂಪ್ 2ರಲ್ಲಿ ಸೆಮಿಫೈನಲ್ ಸ್ಥಾನ ಯಾರಿಗೆ ಅನ್ನುವುದನ್ನು ಅಫ್ಘಾನಿಸ್ತಾನವೇ ನಿರ್ಧಾರ ಮಾಡಬೇಕಿರುವುದರಿಂದ ಈ ಮ್ಯಾಚ್ ಹೈ ವೋಲ್ಟೇಜ್ ಪಂದ್ಯವಾಗಿ ಬದಲಾಗಿದೆ.

ಇಂಗ್ಲೆಂಡ್ ವಿರುದ್ಧ ಗೆದ್ದರೂ ನೆಟ್ ರನ್ರೇಟ್ನಲ್ಲಿ ಸೋತ ಆಫ್ರಿಕಾ-ಮತ್ತೊಮ್ಮೆ ಚೋಕರ್ಸ್ ಆದ ಹರಿಣಗಳು..!

ಯಾವ ದಿನ ಹುಟ್ಟಿದರೆ ಏನು ಫಲ? ಅವರ ಸಂಪೂರ್ಣ ಲೈಫ್,ಗುಣ ಸ್ವಭಾವ ಹೇಗಿರುತ್ತದೆ ನೀವೆ ನೋಡಿ…!

ಉತ್ತರಪ್ರದೇಶ : ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ – ಮೂವರ ವಿರುದ್ಧ ಕೇಸ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd