T20 World cup | ಇಂದಿನಿಂದ ಅಸಲಿ ಕಾಳಗ-ಮೊದಲ ದಿನವೇ ಡಬಲ್ ಧಮಾಕಾ
T20ವಿಶ್ವಕಪ್ನಲ್ಲಿ ರಿಯಲ್ ಫೈಟ್- ಆಸ್ಟ್ರೇಲಿಯಾಕ್ಕೆ ಸೌತ್ ಆಫ್ರಿಕಾ ಸವಾಲ್, ವಿಂಡೀಸ್ಗೆ ಇಂಗ್ಲೆಂಡ್ ಚಾಲೆಂಜ್..!- ಮೊದಲ ದಿನವೇ ಡಬಲ್ ಧಮಾಕಾ
ಟಿ20 ವಿಶ್ವಕಪ್ ನಲ್ಲಿ ಇಂದಿನಿಂದ ರಿಯಲ್ ಫೈಟ್ ಆರಂಭವಾಗಲಿದೆ. ಸೂಪರ್ 12ನಲ್ಲಿ ಮೊದಲ ಪಂದ್ಯ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವೆ ನಡೆಯಲಿದೆ.
ಅಬುಧಾಬಿಯ ಶೇಖ್ ಝಹೀದ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ ಬಾರಿಗೆ ಟಿ20 ಚಾಂಪಿಯನ್ ಆಗಲು ಈ ತಂಡಗಳು ತಯಾರಿ ಮಾಡಿಕೊಳ್ಳುತ್ತಿವೆ.
ಕ್ಯಾಪ್ಟನ್ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್, ಮ್ಯಾಕ್ಸ್ವೆಲ್, ಸ್ಮಿತ್, ಮತ್ತು ಸ್ಟೋಯ್ನಿಸ್ ಕಾಂಗರೂ ಬ್ಯಾಟಿಂಗ್ ಲೈನ್ ಅಪ್ ನ ಟ್ರಂಪ್ ಕಾರ್ಡ್. ಸ್ಟಾರ್ಕ್, ಹ್ಯಾಝಲ್ವುಡ್ ಮತ್ತು ಝಂಪಾ ಬೌಲಿಂಗ್ನ ಪ್ರಮುಖ ಅಸ್ತ್ರಗಳು.
ದಕ್ಷಿಣ ಆಫ್ರಕಾಕ್ಕೆ ಕ್ವಿಂಟಾನ್ ಡಿಕಾಕ್, ಏಡಿಯನ್ ಮಾರ್ಕ್ ರಾಂ, ರಾಸಿ ವಾಂಡರ್ ಡ್ಯುಸನ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಬಲವಾದರೆ, ರಬಾಡಾ, ನೋರ್ಟ್ಜೆ ಮತ್ತು ತಬ್ರೇಜ್ ಶಂಶಿ ಪ್ರಮುಖ ಬೌಲರ್ಗಳು. ಅಬಿಧಾಭಿ ಪಿಚ್ ಬ್ಯಾಟಿಂಗ್ ಪ್ರೆಂಡ್ಲಿ ಆಗಿರುವುದರಿಂದ ಬ್ಯಾಟಿಂಗ್ ಶಕ್ತಿ ಪ್ರದರ್ಶನಕ್ಕೆ ಬರಲಿದೆ.
ಗ್ರೂಪ್ ಎ ನ ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಮಾಜಿ ಚಾಂಪಿಯನ್ ಇಂಗ್ಲೆಂಡ್ ನಡುವೆ ಫೈಟ್ ನಡೆಯಲಿದೆ.
ದುಬೈನಲ್ಲಿ ನಡೆಯುವ ಈ ಪಂದ್ಯ ರೋಚಕತೆ ಹೆಚ್ಚಿಸಿದೆ. ಇಂಗ್ಲೆಂಡ್ ಜೇಸನ್ ರಾಯ್, ಜೋಸ್ ಬಟ್ಲರ್, ಜಾನಿ ಬೇರ್ ಸ್ಟೋವ್ ಮತ್ತು ಇಯಾನ್ ಮೊರ್ಗಾನ್ ಬ್ಯಾಟಿಂಗ್ ಮೇಲೆ ನಂಬಿಕೆ ಇಟ್ಟಿದೆ.
ಮೊಯಿನ್ ಅಲಿ ಮತ್ತು ಲಿಯಂ ಲಿವಿಂಗ್ ಸ್ಟೋನ್ ಆಲ್ರೌಂಡರ್ ಜವಾಬ್ದಾರಿ ಹೊರಲಿದ್ದಾರೆ. ಕ್ರಿಸ್ವೋಕ್ಸ್, ಜೋರ್ಡಾನ್ ಮತ್ತು ಮಾರ್ಕ್ವುಡ್ ಬೌಲಿಂಗ್ ರೆಸ್ಪಾನ್ಸಿಬಿಲಿಟಿ ಹೊರಲಿದ್ದಾರೆ.
ವೆಸ್ಟ್ ಇಂಡೀಸ್ ಲೆವಿಸ್, ಸಿಮನ್ಸ್, ಗೇಲ್, ಪೂರನ್ ಮತ್ತು ಹೆಟ್ಮಯರ್ ರಂತಹ ಅದ್ಭುತ ಟಿ20 ಬ್ಯಾಟ್ಸ್ ಮನ್ ಗಳನ್ನು ಹೊಂದಿದೆ.
ಪೊಲ್ಲಾರ್ಡ್, ರಸೆಲ್ ಮತ್ತು ಬ್ರಾವೋ ರಂತಹ ಆಲ್ರೌಂಡರ್ ಗಳು ಯಾವುದೇ ತಂಡಕ್ಕೂ ಡೇಂಜರಸ್, ರವಿ ರಾಂಪಾಲ್. ಓಶೇನ್ ಥಾಮಸ್ ಬೌಲಿಂಗ್ ಜವಾಬ್ದಾರಿಯ ಹೊರಲಿದ್ದಾರೆ. ದುಬೈ ಪಿಚ್ ನಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಹೈ ಸ್ಕೋರಿಂಗ್ ಗೇಮ್ ಗ್ಯಾರೆಂಟಿ.