ಹಾರ್ದಿಕ್ ಪಾಂಡ್ಯ ಫುಲ್ ಪಿಟ್
ದುಬೈ : ನಾಳೆ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಇಡೀ ಜಗತ್ತೇ ಜಾತಕ ಪಕ್ಷಿಯಂತೆ ಕಾದು ಕುಳಿತಿದೆ. ಮೆನ್ ಇನ್ ಗ್ರೀನ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾದ ಬ್ಲೂ ಪ್ಯಾಂಥರ್ಸ್ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ಎರಡೂ ವಾರ್ಮ್ ಅಪ್ ಮ್ಯಾಚ್ ಗಳನ್ನ ಗೆದ್ದಿರುವ ಟೀಂ ಇಂಡಿಯಾ ಮೇಲ್ನೋಟಕ್ಕೆ ಸಾಲಿಡ್ ಆಗಿ ಕಾಣಿಸುತ್ತಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದೆ
ಆದ್ರೆ ಪಾಕಿಸ್ತಾನದ ವಿರುದ್ಧ ಟೀಂ ಕಾಂಬಿನೇಷನ್ ಹೇಗಿರಲಿದೆ ಅನ್ನೋದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇದಕ್ಕೆ ಕಾರಣ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ.
ಹೌದು..! ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರು. ತಮ್ಮ ವಿಸ್ಫೋಟಕ ಬ್ಯಾಟಿಂಗ್ ನಿಂದಲೇ ಪಂದ್ಯದ ಗತಿಯನ್ನ ಬದಲಿಸಬಲ್ಲ ಆಟಗಾರ. ಸೋಲೋ ಪಂದ್ಯಗಳನ್ನು ಒಂಟಿ ಕೈಯಲ್ಲಿ ಗೆಲ್ಲಿಸಿಕೊಡುವ ತಾಕತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಸಾಮಥ್ರ್ಯಕ್ಕಿದೆ. ಜೊತೆಗೆ ಇವರ ಬೌಲಿಂಗ್ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್.
ಆದ್ರೆ ಹಾರ್ದಿಕ್ ಪಾಂಡ್ಯ ಕೆಲ ದಿನಗಳಿಂದ ಇಂಜ್ಯೂರಿ ಸಮಸ್ಯೆಯಿಂದ ಬಳಲುತ್ತಿದ್ದು, ಬೌಲಿಂಗ್ ಮಾಡುತ್ತಿಲ್ಲ. ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚುತ್ತಿಲ್ಲ. ಹೀಗಾಗಿ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರೋ ಇಲ್ವೋ ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು.
ಇದೀಗ ಈ ಬಗ್ಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಸ್ಪಷ್ಟನೆ ನೀಡಿದ್ದು, ಹಾರ್ದಿಕ್ ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಈಗ ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ಹಾರ್ದಿಕ್ ಎರಡು ಓವರ್ ಬೌಲ್ ಮಾಡಬಹುದು ಎಂದಿದ್ದಾರೆ. ಆ ಮೂಲಕ ತಂಡದಲ್ಲಿ ಹಾರ್ದಿಕ್ ಸ್ಥಾನ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.