T20 World Cup | ಗೆದ್ದವರಿಗೆ ಸಿಕ್ಕ ಹಣವೆಷ್ಟು..?

1 min read
T20 World Cup saaksha tv

ಐಸಿಸಿ ಟಿ20 ವಿಶ್ವಕಪ್ ಗೆದ್ದವರಿಗೆ ಸಿಕ್ಕ ಹಣವೆಷ್ಟು..? ಗ್ರೂಪ್ನಲ್ಲಿ ಹೊರಬಿದ್ದರೂ ಕೋಟಿ ಬಾಚಿದ ಟೀಮ್ ಇಂಡಿಯಾ..!

ಟೀಮ್ ಇಂಡಿಯಾದ ಕ್ರಿಕೆಟಿಗರಿಗೆ ದುಡ್ಡು ಹೊಸತಲ್ಲ. ರಣಜಿ ಟ್ರೋಫಿ ಆಡಿದವರೇ ಕೋಟಿ ವೀರರಾಗಿ ಬಿಟ್ಟಿದ್ದಾರೆ. ಐಪಿಎಲ್ ಆಡಿದರಂತೂ ಮುಗಿದೇ ಹೋಯಿತು.

ಹಲವು ತಲೆಮಾರಿಗಾಗುವಷ್ಟು ದುಡ್ಡು ಸಂಪಾದನೆ ಮಾಡಿ ಬಿಡುತ್ತಾರೆ. ಆದರೆ ಐಸಿಸಿ ಟೂರ್ನಿಯಲ್ಲಿ ದುಡ್ಡಿಗಿಂತ ಗೆಲುವೇ ಮುಖ್ಯ.

ಇಲ್ಲಿ ದುಡ್ಡು ಮಾತನಾಡದೇ ಇದ್ದರೂ ಟ್ರೋಫಿ ಮಾತನಾಡುತ್ತದೆ.

ಅಂದಹಾಗೇ ದುಬೈನಲ್ಲಿ ಮುಕ್ತಾಯ ಕಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದು ಬೀಗಿದೆ.

ಫೆವರೀಟ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾ ಗ್ರೂಪ್ ತಂಡದಲ್ಲೇ ಹೊರ ಬಿದ್ದು ನಿರಾಸೆ ಅನುಭವಿಸಿತ್ತು.

ಕೊನೆಯ ಮೂರು ಪಂದ್ಯಗಳಲ್ಲಿ ಗೆದ್ದರೂ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಸೋತಿದ್ದು ವಿರಾಟ್ ಬಳಗಕ್ಕೆ ದುಬಅರಿ ಆಗಿತ್ತು.

ಇಷ್ಟಾದರೂ ಟೀಮ್ ಇಂಡಿಯಾ ವಿಶ್ವಕಪ್ನಿಂದ ಬರುವಾಗ ಕೋಟಿ ದುಡ್ಡು ಗೆದ್ದುಕೊಂಡು ಬಂದಿದೆ.

ಈ ಬಾರಿಯ ವಿಶ್ವಕಪ್ನಲ್ಲಿ ಐಸಿಸಿ ಸುಮಾರು 42 ಕೋಟಿ ರೂಪಾಯಿ ಪ್ರಶಸ್ತಿ ಘೋಷಿಸಿತ್ತು.

ಚಾಂಪಿಯನ್ ಆಸ್ಟ್ರೇಲಿಯಾ ತಂಡ ಸುಮಾರು 11.89 ಕೋಟಿ ಗೆದ್ದುಕೊಂಡು ಬಿಟ್ಟಿದೆ.

ಗ್ರೂಪ್ ಹಾಗೂ ಸೆಮಿಫೈನಲ್ ಸೇರಿ ಒಟ್ಟು 6 ಪಂದ್ಯಗಳನ್ನು ಗೆದ್ದಿದೆ. ಪ್ರತೀ ಪಂದ್ಯ ಗೆದ್ದ ತಂಡ 29.3 ಲಕ್ಷ ರೂಪಾಯಿ ಪಡೆಯಲಿದೆ.

ಹೀಗಾಗಿ ಆಸ್ಟ್ರೇಲಿಯಾ ಸುಮಾರು 16 ಕೋಟಿ ರೂಪಾಯಿ ಪ್ರಶಸ್ತಿಯನ್ನು ಹೊತ್ತುಕೊಂಡು ತವರಿಗೆ ಹೋಗಲಿದೆ.

ರನ್ನರ್ ಅಪ್ ನ್ಯೂಜಿಲೆಂಡ್ ಕೂಡ ಸುಮಾರು 6 ಕೋಟಿ ರೂಪಾಯಿ ಬಹುಮಾನವನ್ನು ಫೈನಲ್ನಲ್ಲಿ ಗೆದ್ದಿದೆ.

T20 World Cup saaksha tv

ಆಸ್ಟ್ರೇಲಿಯಾದಂತೆ ಕಿವೀಸ್ ಕೂಡ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳನ್ನು ಗೆದ್ದಿದೆ.

ಹೀಗಾಗಿ ಕಿವೀಸ್ ತಂಡ ಕೂಡ ಸುಮಾರು 10 ಕೋಟಿ ರೂಪಾಯಿ ಸಂಪಾದನೆ ಮಾಡಿ ತವರಿಗೆ ತೆರಳಲಿದೆ.

ಸೂಪರ್-12 ಹಂತದಲ್ಲಿ ಆಡಿದ ತಂಡಗಳಿಗೂ ಸುಮಾರು 52 ಲಕ್ಷ ರೂ ಸಂಭಾವನೆಯನ್ನು ನಿಗದಿ ಮಾಡಲಾಗಿತ್ತು.

ಜೊತೆಗೆ ಗೆದ್ದ ಪಂದ್ಯಗಳಿಗೂ ಇಂತಿಷ್ಟು ಸಂಭಾವನೆ ನೀಡಲಾಗುತ್ತದೆ. ಅದರಂತೆ ಭಾರತ ತಂಡಕ್ಕೆ 52 ಲಕ್ಷ ರೂ. ಸಿಕ್ಕಿದೆ.

ಜೊತೆಗೆ ಅಫ್ಘಾನಿಸ್ತಾನ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ದ ಗೆದ್ದಿರುವ ಪಂದ್ಯಗಳಿಗಾಗಿ ಪ್ರತಿ ಪಂದ್ಯಕ್ಕೆ 29.73 ಲಕ್ಷ ರೂ. ನೀಡಲಾಗುತ್ತದೆ.

ಅಂದರೆ ಟೀಮ್ ಇಂಡಿಯಾಗೆ 52 ಲಕ್ಷ ರೂ. ಜೊತೆಗೆ ಮೂರು ಗೆದ್ದ ಪಂದ್ಯಗಳಿಂದ 89.19 ಲಕ್ಷ ರೂ ಸಂಪಾದನೆ ಆಗಿದೆ.

ಹೀಗಾಗಿ ಟೀಮ್ ಇಂಡಿಯಾ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 1.41 ಕೋಟಿ ರೂಪಾಯಿ ಪಡೆಯಲಿದೆ. ಒಟ್ಟಿನಲ್ಲಿ ಕ್ರಿಕೆಟ್ನಲ್ಲಿ ಎಲ್ಲವೂ ದುಡ್ಡಿನ ಮೂಲಕವೇ ಅಳೆಯಲಾಗುತ್ತಿರುವುದು ಕ್ರೀಡೆಯ ಶ್ರೀಮಂತಿಕೆಯನ್ನು ತೋರಿಸುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd