INDO VS PAK Match | ಸೂಪರ್ ಸಂಡೇಯ ಸೂಪರ್ ಮ್ಯಾಚ್ – ಹೇಗಿರಲಿದೆ ಪ್ಲೇಯಿಂಗ್ XI
ಇದು ವಿಶ್ವಕಪ್ ನ ಫೈನಲ್ ಮ್ಯಾಚ್ಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಅಭಿಮಾನಿಗಳಿಗೆ ಫೈನಲ್ ಪಂದ್ಯ ಸೋತರೂ ಹೆಚ್ಚು ನೋವಾಗುವುದಿಲ್ಲ, ಆದರೆ ಇಂಡೋ-ಪಾಕ್ ಪಂದ್ಯದ ಸೋಲನ್ನು ಅರಗಿಸಿಕೊಳ್ಳಲು ಆಗುವುದಿಲ್ಲ.
ಭಾರತವಂತೂ ಟಿ20 ವಿಶ್ವಕಪ್ ನಲ್ಲಿ ಪಾಕ್ ತಂಡವನ್ನು 5 ಬಾರಿ ಮಣಿಸಿದೆ. ಈಗ 5ನೇ ಬಾರಿಯೂ ಅಜೇಯ ದಾಖಲೆಯನ್ನು ಮುಂದುವರೆಸುವ ಕನಸು ಕಾಣುತ್ತಿದೆ.
ಇನ್ನೊಂದೆಡೆ ಪಾಕ್ ತಂಡವೂ ಅಷ್ಟೇ.. ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಗೆಲುವಿಲ್ಲದ ದಾಖಲೆಯನ್ನು ಅಳಿಸುವ ಪ್ರಯತ್ನ ಮಾಡಲು ಸಿದ್ಧವಾಗಿದೆ.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಕಡುಬದ್ಧವೈರಿಗಳ ನಡುವಿನ ಕದನ ನಡೆಯಲಿದೆ. ಟೀಮ್ ಇಂಡಿಯಾ 2 ಅಭ್ಯಾಸ ಪಂದ್ಯಗಳನ್ನು ಗೆದ್ದಿರುವುದರಿಂದ ವಿಶ್ವಾಸ ದುಪ್ಪಟ್ಟಾಗಿದೆ.
ಅಷ್ಟೇ ಅಲ್ಲ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಿದರೆ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಟಾಪ್ ಆರ್ಡರ್ ಟ್ರಂಪ್ ಕಾರ್ಡ್ ಗಳು.
ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಫಿನಿಷಿಂಗ್ ಕೆಲಸ ಮುಗಿಸಿ ಬಿಡ್ತಾರೆ. ಹಾರ್ದಿಕ್ ಪಾಂಡ್ಯಾ ಅಥವಾ ಶಾರ್ದೂಲ್ ಥಾಕೂರ್ ಇಬ್ಬರಲ್ಲಿ ಒಬ್ಬರು 6ನೇ ಬೌಲರ್ ಕಾರ್ಯದ ಜೊತೆಗೆ ಸ್ಪೋಟಕ ಬ್ಯಾಟಿಂಗ್ ಮಾಡಲೇಬೇಕು.
ಅಶ್ವಿನ್, ಜಡೇಜಾ ಜೊತೆ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಜಸ್ ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇನ್ನಿಂಗ್ಸ್ನ ಆರಂಭ ಮತ್ತು ಅಂತ್ಯದಲ್ಲಿ ಬೌಲಿಂಗ್ ಮಾಡಬೇಕು. ಭುವನೇಶ್ವರ್ ಕುಮಾರ್ ಹೊಸ ಚೆಂಡಿನಲ್ಲಿ ದಾಳಿಗಿಳಿಯಬಹುದು.
ಪಾಕಿಸ್ತಾನದ ವಿಚಾರಕ್ಕೆ ಬಂದ್ರೆ ಸೇಡು ಮೈ ತುಂಬ ತುಂಬಿದೆ. ಆದರೆ ಗೆಲುವು ಅಷ್ಟು ಸುಲಭವಲ್ಲ ಅನ್ನುವುದು ಗೊತ್ತಿದೆ. ಬಾಬರ್, ರಿಜ್ವಾನ್, ಫಖರ್ ಬ್ಯಾಟಿಂಗ್ ಜೊತೆಗೆ ಮೊಹ್ಮದ್ ಹಫೀಜ್ ಮತ್ತು ಶೋಯೆಬ್ ಮಲಿಕ್ ಆಲ್ರೌಂಡರ್ ಆಟ ಆಡಬೇಕಿದೆ.
ಹೈದರ್ ಅಲಿಮ ಇಮಾದ್ ವಾಸಿಂ ಮತ್ತು ಶದಾಬ್ ಖಾನ್ ಕೂಡ ಪರಿಪೂರ್ಣ ಆಟ ಆಡಿದ್ರೆ ತಂಡಕ್ಕೆ ಬೋನಸ್, ಹ್ಯಾರಿಸ್ ರೌಫ್, ಹಸನ್ ಅಲಿ ಮತ್ತು ಶಹೀನ್ ಷಾ ಅಫ್ರಿದಿ ಆರಂಭದಲ್ಲೇ ವಿಕೆಟ್ ಪಡೆದರೆ ಟೀಮ್ ಇಂಡಿಯಾ ಮೇಲೆ ಒತ್ತಡ ಹಾಕಬಹುದು,
ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಿಚ್ ಮೇಲೆ ಕುತೂಹಲವಿದೆ. ಟಾಸ್ ಮೇಲೆ ಎಲ್ಲರ ಗಮನ ಇರಲಿದೆ. ಒಟ್ಟಿನಲ್ಲಿ ಮರುಭೂಮಿಯಲ್ಲಿ ಬದ್ಧ ವೈರಿಗಳ ರಣರೋಚಕ ಕದನ ಕುತೂಹಲ ಕೆರಳಿಸಿದೆ.
ಸಂಭಾವ್ಯ XI
ಭಾರತ
1. ರೋಹಿತ್ ಶರ್ಮಾ, 2. ಕೆ.ಎಲ್.ರಾಹುಲ್, 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ರಿಷಭ್ ಪಂತ್, 6. ರವೀಂದ್ರ ಜಡೇಜಾ, 7. ಶಾರ್ದೂಲ್ ಥಾಕೂರ್/ ಹಾರ್ದಿಕ್ ಪಾಂಡ್ಯ, 8. ರವಿಚಂದ್ರನ್ ಅಶ್ವಿನ್, 9. ಜಸ್ ಪ್ರಿತ್ ಬುಮ್ರಾ, 10. ಮೊಹಮ್ಮದ್ ಶಮಿ, 11. ಭುವನೇಶ್ವರ್ ಕುಮಾರ್
ಪಾಕಿಸ್ತಾನ:
1. ಬಾಬರ್ ಅಜಮ್ 2. ಮೊಹಮ್ಮದ್ ರಿಜ್ವಾನ್, 3. ಫಖರ್ ಝಮನ್, 4. ಮೊಹ್ಮದ್ ಹಫೀಝ್, 5. ಶೋಯೆಬ್ ಮಲಿಕ್, 6. ಹೈದರ್ ಅಲಿ, 7. ಇಮಾದ್ ವಾಸಿಂ, 8.ಶದಾಬ್ ಖಾನ್, 9. ಹ್ಯಾರಿಸ್ ರೌಫ್, 10. ಹಸನ್ ಅಲಿ, 11. ಶಹೀನ್ ಷಾ ಅಫ್ರಿಧಿ