T20 world cup: ಭಾರತ ಮತ್ತು ನ್ಯೂಜಿಲೆಂಡ್ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ…
T 20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಬುಧವಾರ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಮುಖಾಮುಖಿಯಾಗಲಿವೆ. ಆದರೆ ಪಂದ್ಯ ಮಳೆಯಿಂದ ವಾಶ್ ಔಟ್ ಆಗುವ ಭೀತಿ ಎದುರಾಗಿದೆ. ಬ್ರಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ಮಳೆಯಾಗುತ್ತಿದ್ದು ಪಂದ್ಯಕ್ಕೆ ಅಡಚಣೆ ಉಂಟು ಮಾಡಿದೆ.
ಮಳೆಯಿಂದಾಗಿ ನಿಗದಿತ ಸಮಯಕ್ಕೆ ಟಾಸ್ ನಡೆಸದೆ ಮುಂದೂಡಲಾಗಿದೆ. ಮಳೆ ನಿಂತರೆ ಭಾರತೀಯ ಕಾಲಮಾನ ಸಂಜೆ 4.15 ಕ್ಕೆ ಪಂದ್ಯ ಆರಂಭವಾದರೆ 5-5 ಓವರ್‌ಗಳನ್ನ ಆಡಿಸಬಹುದು ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಇದಕ್ಕೂ ಮುನ್ನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅಫ್ಘಾನಿಸ್ತಾನ ತಂಡ ಸಂಪೂರ್ಣ 20 ಓವರ್‌ಗಳನ್ನು ಬ್ಯಾಟ್ ಮಾಡಿತ್ತು. ಆದರೆ ಪಾಕಿಸ್ತಾನ ತಂಡ ಕೇವಲ 2.2 ಓವರ್‌ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು.
ಕಳೆದ ಅಭ್ಯಾಸ ಪಂದ್ಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಕೊನೆ ಕ್ಷಣದಲ್ಲಿ ರೋಚಕ ಜಯ ಸಾಧಿಸಿತ್ತು. ಟೀಂ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಹೈ ವೋಲ್ಟೇಜ್ ಪಂದ್ಯವನ್ನು ಆಡಬೇಕಾಗಿದೆ ಅದಕ್ಕಾಗಿ ಭಾರತ ತಯಾರಿ ನಡೆಸುತ್ತಿದೆ.
T20 world cup: India and New Zealand warm-up match interrupted by rain