ಟಿ-20 ವಿಶ್ವಕಪ್ T20 World Cup ಸಂಗ್ರಾಮಕ್ಕೆ ಮುಹೂರ್ತ ಫಿಕ್ಸ್
ಬೆಂಗಳೂರು : ಕೊನೆಗೂ ಐಸಿಸಿ ಟಿ 20 ವಿಶ್ವಕಪ್ ಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ.
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ನಿನ್ನೆ ಬಿಸಿಸಿಐ ಈ ವರ್ಷದ ಐಸಿಸಿ ಪುರುಷರ ಟಿ20 ವಿಶ್ವಕಪ್’ನ್ನ ಯುಎಇದಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿತ್ತು. ಇನ್ನು ಪಂದ್ಯಗಳ ದಿನಾಂಕಗಳನ್ನ ಐಸಿಸಿ ನಿರ್ಧರಿಸಲಿದೆ’ ಎಂದು ಬಿಸಿಸಿಐ ಹೇಳಿತ್ತು. ಇದೀಗ ಟೂರ್ನಿಗೆ ದಿನಾಂಕ ನಿಗದಿ ಮಾಡಿ ಐಸಿಸಿ ಟ್ವೀಟ್ ಮಾಡಿದೆ.
ಈ ಬಾರಿ ಟಿ20 ವಿಶ್ವಕಪ್ ನಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ. ಟಿ20 ಕ್ರಿಕೆಟ್ ನಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಎಂಟು ದೇಶಗಳು ನೇರವಾಗಿ ಸೂಪರ್ 12 ಹಂತ ಪ್ರವೇಶ ಪಡೆಯಲಿವೆ. ಅಂದರೆ, ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಫ್ಘನಿಸ್ತಾನ ತಂಡಗಳು ನೇರವಾಗಿ ಸೂಪರ್ 12 ಹಂತದಿಂದ ಟಿ20 ಅಭಿಯಾನ ಆರಂಭಿಸುತ್ತವೆ.