suryakumar ಐಸಿಸಿ ಟಿ 20 ರ್ಯಾಂಕಿಂಗ್ – ಎರಡನೇ ಸ್ಥಾನದಲ್ಲಿ ಸೂರ್ಯ ಭಾಯ್
ಐಸಿಸಿ ಟಿ 20 ರ್ಯಾಂಕಿಂಗ್ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದು, ಬ್ಯಾಟರ್ ಗಳ ವಿಭಾಗದಲ್ಲಿ ಸೂರ್ಯ ಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಮೊದಲ ಸ್ಥಾನದಲ್ಲಿ 861 ಅಂಕಗಳೊಂದಿಗೆ ಮೊಹ್ಮದ್ ರಿಜ್ವಾನ್ ಇದ್ದು, 838 ಅಂಕಗಳೊಂದಿಗೆ ಸೂರ್ಯ ಕುಮಾರ್ ಯಾದವ್, ಮೂರನೇ ಸ್ಥಾನದಲ್ಲಿ 808 ಅಂಕಗಳೊಂದಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಇದ್ದಾರೆ. ನಂತರದ ಸ್ಥಾನಗಳಲ್ಲಿ ಮಾರ್ಕ್ರಾಂ, ಡೆವಾನ್ ಕಾನ್ವೆ, ಡೆವಿಡ್ ಮಲಾನ್, ಫಿಂಚ್, ನಿಸ್ಸಂಕ, ಮೊಹ್ಮದ್ ವಸಿಮ್, ಗ್ಲೆನ್ ಫಿಲಿಪ್ಸ್ ಇದ್ದಾರೆ.
ಬೌಲರ್ ಗಳ ವಿಭಾಗದಲ್ಲಿ ಟಾಪ್ 10 ರಲ್ಲಿ ಎರಡು ಬದಲಾವಣೆಗಳಾಗಿವೆ. ಅಫ್ಘಾನ್ ಸ್ಪಿನ್ನರ್ ಮುಜಿಬ್ ಉರ್ ರೆಹ್ಮಾನ್ ಎರಡು ಸ್ಥಾನಗಳು ಮೇಲೇರಿ ಐದನೇ ಸ್ಥಾನದಲ್ಲಿದ್ದಾರೆ.
ಸೌಥ್ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ಎಂಟನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಆಸೀಸ್ ಬೌಲರ್ ಹೆಜಲ್ ವುಡ್, ರಶೀದ್ ಖಾನ್, ಹಸರಂಗ, ಶಂಶಿ ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ 12 ನೇ ಸ್ಥಾನದಲ್ಲಿ ಅಶ್ವಿನ್, ಅಕ್ಷರ್ ಸತತವಾಗಿ 22, 23 ಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶ ಕ್ಯಾಪ್ಟನ್ ಶಕಿಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ.