ತೈವಾನ್ ಬೇಕೆಂಬ ಹಟಕ್ಕೆ ಬಿದ್ದಿರುವ ಚೀನಾಗೆ ತೈವಾನ್ ಅಧ್ಯಕ್ಷೆ ತಿರುಗೇಟು

1 min read

ತೈವಾನ್ ಬೇಕೆಂಬ ಹಟಕ್ಕೆ ಬಿದ್ದಿರುವ ಚೀನಾಗೆ ತೈವಾನ್ ಅಧ್ಯಕ್ಷೆ ತಿರುಗೇಟು

ಚೀನಾ ಆಗ್ಲೀ ಪಾಕಿಸ್ತಾನ ಆಗ್ಲೀ ಈ ಎರೆಡೂ ದೇಶಗಳಿಗೂ ಬೇರೆ ದೇಶಗಳ ಬಾಗಗಳನ್ನ ತಮ್ಮದು ಅಂತ ಹೇಳಿಕೊಳ್ಳುವುದು , ಅವನ್ನ ಕಸಿದುಕೊಳ್ಳಲು ಏನಾದ್ರೂ ಮಾಡುವ ಚಟವಿದೆ. ಎರೆಡೂ ಕಪಟಿಗಳೇ ಅನ್ನೋದು ಗೊತ್ತಿದೆ. ಅದ್ರಲ್ಲೂ ಮಹಾ ಕಪಟಿ ಚೀನಾ ಭಾರತದ ಲಡಾಕ್ , ಸೇರಿದಂತೆ ಇನ್ನೂ ಸಾಕಷ್ಟು ದೇಶಗಳ ಗಡಿ ಭಾಗಗಳ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಇಡೀ ತೈವಾನ್ ದ್ವೀಪರಾಷ್ಟ್ರವನ್ನೇ ತನ್ನ ವಶಕ್ಕೆ ಪಡೆಯುವ ಹುಚ್ಚು ಹಟಕ್ಕೆ ಬಿದ್ದಿರೋ ಚೀನಾ ಇತ್ತೀಚಗೆ ತೈವಾನ್ ನಮ್ಮ ದೇಶದ ಭಾಗ ಬಲವಂತವಾಗಿಯಾದ್ರೂ, ಬಲಪ್ರಯೋಗದಿಂದಾದ್ರೂ ಅದನ್ನ ವಶಪಡಿಸಿಕೊಳ್ತೇವೆ ಎಂದು ಪ್ರತಿಪಾದಿಸಿತ್ತು.

ಇದಕ್ಕೆ ತೈವಾನ್ ಅಧ್ಯಕ್ಷೆ ಅಧ್ಯಕ್ಷೆ ಸೈ ಇಂಗ್ ವೆನ್‌ ಅವರು ತಿರುಗೇಟು ನೀಡಿದ್ದಾರೆ. ತೈವಾನ್ ರಾಷ್ಟ್ರೀಯ ದಿನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು  ನಾವು ಸಾಧನೆ ಮಾಡಿದಷ್ಟೂ ಚೀನಾದ ಒತ್ತಡ ಹೆಚ್ಚಲಿದೆ. ಚೀನಾದ ಮಾರ್ಗದಲ್ಲಿಯೇ ಸಾಗಬೇಕು ಎಂದು ನಮ್ಮ ಮೇಲೆ ಒತ್ತಡ ಹೇರಲಾಗದು ಎಂದೂ ಪ್ರತಿಪಾದಿಸಿದರು.

ಚೀನಾದ ಯುದ್ಧ ವಿಮಾನಗಳು ತೈವಾನ್ ವಾಯುಗಡಿ ಪ್ರವೇಶಿಸಿವೆ ಎಂಬ ವರದಿಗಳ ಬೆನ್ನಲ್ಲೇ ತೈವಾನ್ ಅಧ್ಯಕ್ಷೆ ಈ ಹೇಳಿಕೆ ನೀಡಿದ್ದಾರೆ. ತೈವಾನ್‌ ರಕ್ಷಣಾ ಸಚಿವಾಲಯದ ಪ್ರಕಾರ 2 ಯುದ್ಧ ವಿಮಾನ ಸೇರಿದಂತೆ 3 ವಿಮಾನಗಳು ತೈವಾನ್‌ ವಾಯುಗಡಿಯನ್ನು ಪ್ರವೇಶಿಸಿವೆ. ಚೀನಾ ಜೊತೆಗಿನ ಗೊಂದಲವು ಬಗೆಹರಿಯುವ ವಿಶ್ವಾಸವಿದೆ. ಆದರೆ ತೈವಾನ್‌ ನಾಗರಿಕರು ಒತ್ತಡಕ್ಕೆ ಮಣಿಯುತ್ತಾರೆ ಎಂಬ ಭ್ರಮೆ ಬೇಡ. ತೈವಾನ್‌ ರಕ್ಷಣೆಗೆ ಮೊದಲ ಆದ್ಯತೆ ನೀಡಲಿದೆ ಎಂದು ಇದೇ ವೇಳೆ ಚೀನಾಗೆ ಎಚ್ಚರಿಸಿದ್ದಾರೆ.

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸ್ಕೆಚ್ – 700 ಹೈಬ್ರೀಡ್ ಉಗ್ರರು ವಶಕ್ಕೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd