‘ನರರಾಕ್ಷಸ’ರಿಗೆ ಶಾಕ್ ಕೊಟ್ಟ ವಿಶ್ವ ಬ್ಯಾಂಕ್ – ಅಫ್ಗಾನ್ ಗೆ ಹಣಕಾಸು ನೆರವು ಸ್ಥಗಿತ..!
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಆದ್ರೆ ಇಂತಹ ನರರಾಕ್ಷಸರಿಗೆ ಇದೀಗ ವಿಶ್ವ ಬ್ಯಾಂಕ್ ದೊಡ್ಡ ಆಘಾತವನ್ನೇ ನೀಡಿದೆ. ಅಫ್ಗಾನ್ ವಶಕ್ಕೆ ಪಡೆದು ರಾಜಬಾರ ನಡೆಸುವ ತವಕದಲ್ಲಿರುವ ತಾಲಿಬಾನಿಗಳಿಗೆ ಸಾಕ್ ಕೊಟ್ಟಿರುವ ವಿಶ್ವ ಬ್ಯಾಂಕ್ ಅಫ್ಗಾನ್ ಗೆ ಹಣಕಾಸಿನ ನೆರವನ್ನ ಸ್ಥಗಿತಗೊಳಿಸಿದೆ.
ಈಗಾಗಲೇ ಐಎಂಎಫ್ ಅಫ್ಘಾನಿಸ್ತಾನಕ್ಕೆ ಹಣಕಾಸಿನ ಸಹಾಯ ಸ್ಥಗಿತಗೊಳಿಸಿದ್ದು, ಈಗ ವಿಶ್ವ ಬ್ಯಾಂಕ್ ಸಹ ಇದೇ ಹಾದಿ ಹಿಡಿದಿದೆ. ಅಫ್ಘಾನಿಸ್ಥಾನಕ್ಕೆ ಹಣಕಾಸು ನೆರವು ಸ್ಥಗಿತಗೊಳಿಸಿರುವುದಾಗಿ ವಿಶ್ವ ಬ್ಯಾಂಕ್ ತಿಳಿಸಿದೆ. ಅಫ್ಘಾನಿಸ್ಥಾನದ ಹಣ ಅಮೆರಿಕಾ ಬ್ಯಾಂಕ್ ಗಳಲ್ಲಿ ಜಫ್ತಿಯಾಗಿದ್ದು, ತಾಲಿಬಾನಿಗಳು ಆಡಳಿತ ಹಿಡಿದರೂ ಸಹ ಹಣವಿಲ್ಲದೆ ಪರಿತಪಿಸುತ್ತಿದ್ದಾರೆ.
ಅಫ್ಗಾನ್ ನಿಂದ ಭಾರತಕ್ಕೆ ಬಂದ 16 ಜನರಲ್ಲಿ ಕೊರೊನಾ ಪಾಸಿಟಿವ್..!