ಮಂಗಳೂರು: ಶಾಂತವಾಗಿದ್ದ ಕರಾವಳಿಯಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದೆ. ಮಂಗಳೂರಿನ ಫಳ್ನೀರ್ ಬಳಿ ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ತಲ್ವಾರ್‍ನಿಂದ ದಾಳಿ ಮಾಡಲಾಗಿದ್ದು, ದಾಳಿಯ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕುಟುಂಬದವರ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ನೌಷಾದ್ (30) ಎಂಬಾತನ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದಿಂದ ತಲ್ವಾರ್‍ನಿಂದ ದಾಳಿ ಮಾಡಲಾಗಿದೆ. ಗಂಭೀರ ಗಾಯಗೊಂಡ ನೌಷಾದ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಲ್ವಾರ್ ದಾಳಿಗೆ ಒಳಗಾದ ನೌಷಾದ್, ನ.15 ರಂದು ಕೊಲೆಯತ್ನಕ್ಕೆ ಒಳಗಾದ ಅಬ್ದುಲ್ ಅಜೀಜ್ ಎಂಬುವರ ಅಳಿಯ. ಗುರುಪುರದ ಕೈಕಂಬ ಬಳಿಯ ಕಂದಾವರ ಮಸೀದಿಯಲ್ಲಿ ಅಬ್ದುಲ್ ಅಜೀಜ್ ಮೇಲೆ ದಾಳಿ ನಡೆದಿತ್ತು.
ಮಸೀದಿಯ ಕಮಿಟಿ ವಿಚಾರದಲ್ಲಿ ನಡೆದಿದ್ದ ಮೂವರು ಯುವಕರಿಂದ ಅಂದು ಅಜೀಜ್ ಕೊಲೆಗೆ ಯತ್ನ ನಡೆದಿತ್ತು. ಇದೇ ವಿಚಾರದ ಮೇರೆಗೆ ನೌಷಾದ್ ಮೇಲೂ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








