South Cinemas : ಮಿಲ್ಕಿ ಬ್ಯೂಟಿ ತಮನ್ನಾ ಮದುವೆ ಯಾವಾಗ ಗೊತ್ತಾ..??
ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರಾದ ತಮನ್ನಾ ಇತ್ತೀಚೆಗೆ ಹೆದಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿಲ್ಲ.. ತಮನ್ನಾ ಫಿಟ್ ನೆಸ್ ಫ್ರೀಕ್ ಜೊತೆಗೆ ಮಿಲ್ಕಿ ಬ್ಯೂಟಿ ಅಂತಲೇ ಫೇಮಸ್.. ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ..
ಇದೀಗ ತಮನ್ನಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.. ಆದ್ರೆ ಯಾವುದೋ ಸಿನಿಮಾ ವಿಚಾರಕ್ಕಂತೂ ಅಲ್ಲ.. ಬದಲಾಗಿ ತಮ್ಮ ಮದುವೆ ವಿಚಾರಕ್ಕೆ.. ಹೌದು ತಮನ್ನಾ ಭಾಟಿಯ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ..
ಇನ್ನೂ ಎರಡು ವರ್ಷಗಳ ಬಳಿಕ ಮದುವೆ ಆಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂದ್ಹಾಗೆ ಅವರ ಈ ಕಾನ್ಫಿಡೆಂಟ್ ಹೇಳಿಕೆ ಅನೇನ ಅನುಮಾಗಳನ್ನೂ ಹುಟ್ಟಿಹಾಕಿದೆ.. ಈಗಾಗಲೇ ತಮನ್ನಾ ಮದುವೆಯಾಗುವ ವರ ಕೂಡ ಫಿಕ್ಸ್ ಆಗಿದ್ದಾರೆ ಎಂದೇ ಹೇಳಲಾಗ್ತಿದೆ. ತಮನ್ನಾ ಸದ್ಯ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದು , ಅವುಗಳನ್ನ ಮುಗಿಸಿದ ನಂತರ ಅಂದ್ರೆ 2 ವರ್ಷಗಳಾದ ನಂತರ ಮದುವೆಯಾಗೋದಾಗಿ ತಿಳಿಸಿದ್ದಾರೆ. ತಮನ್ನಾ ಅಭಿನಯದ F3 ಸಿನಿಮಾ ರಿಲೀಸ್ ಗೆ ರೆಡಿಯಿದ್ದು , ಚಿರಂಜೀವಿ ಜೊತೆಗೆ ಭೋಲಶಂಕರ್ ನಟಿಸುತ್ತಿದ್ದಾರೆ..
ಅಬ್ಬಬ್ಬಾ ಬಾಲಿವುಡ್ ಇಲ್ಲ…ಇನ್ನೇನಿದ್ರು ಸೌತ್ ಸಿನಿಮಾಗಳದ್ದೇ ಅಬ್ಬರ..!! ಯಾಕಂತೀರಾ…???
ಕೆಜಿಎಫ್ ಸಿನಿಮಾದಲ್ಲಿ ಕನ್ನಡದಲ್ಲಿ ಜೋಕೆ ಜೋಕೆ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ತಮನ್ನಾ ಇದೀಗ ಕನ್ನಡದ ಬಹುನಿರೀಕ್ಷಿತ ಸಿನಿಮಾ ಉಪ್ಪಿ ಅಭಿನಯದ ಕಬ್ಜದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ಈಗಾಗಲೇ ಕಬ್ಜ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ತಮನ್ನಾ ತೆಲುಗು ಸಿನಿಮಾಗಳನ್ನ ಮುಗಿಸಿ ಕಬ್ಜ ಸಿನಿಮಾದ ತಮ್ಮ ಭಾಗದ ಶೂಟಿಂಗ್ ಮುಗಿಸಬೇಕಿದೆ. ಆದ್ರೆ ತಮನ್ನಾ ತಾವು ಮದುವೆಯಾಗುವ ವರನ ಬಗ್ಗೆ ಮಾತ್ರ ಯಾವುದೇ ಕ್ಯೂರಿಯಾಸಿಟಿ ಬಿಟ್ಟುಕೊಟ್ಟಿಲ್ಲ..