ಅಲ್ಲು ಅರ್ಜುನ್ 100 ಕೋಟಿ ಸಂಭಾವನೆ ಚಿತ್ರಕ್ಕೆ ನಿರ್ದೇಶಕ ಫಿಕ್ಸ್!
ಪುಷ್ಪಾ ಚಿತ್ರ ಹಿಟ್ ಆಗಿದ್ದೇ ಆಗಿದ್ದು , ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ನಿಯವ್ವ ತಗ್ಗೆದೆ ಲೇ ಅಂತ ಮುನ್ನುಗ್ಗುತ್ತಿದ್ದಾರೆ. ಚಿತ್ರ ಯಾವ ಮಟ್ಟಿಗೆ ಸಕ್ಸಸ್ ಕಂಡಿದೆ ಎಂಬುದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಸಿಗುವ ರೀಲ್ಸ್ ಗಳೆ ಸಾಕ್ಷಿ …
ಇಂಥ ಸ್ಟಾರ್ ನಟ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಟಾಲಿವುಡ್ ಸಹ ನಟರಾದ ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್, ಚಿರಂಜೀವಿ ಅವರನ್ನೆಲ್ಲ ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಂಬರ್ 1 ನಟ ಎನಿಸಿಕೊಂಡಿದ್ದಾರೆ.
ನಟ ಅಲ್ಲು ಅರ್ಜುನ್ ಸದ್ಯ ಟಾಪ್ ಗೇರ್ ನಲ್ಲಿದ್ದಾರೆ ಪುಷ್ಪ ಸಿನಿಮಾದ ನಂತರ ಅಲ್ಲು ಅರ್ಜುನ್ ಅವರಿಗೆ ಇರುವ ಬೇಡಿಕೆ ಹೆಚ್ಚಾಗಿದೆ. ಅವರ ಸಿನಿಮಾಗಳ ಮಾರ್ಕೆಟ್ ಕೂಡ ದೊಡ್ಡದಾಗಿದೆ. ಆದರೆ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಗೆ ತೆಗೆದುಕೊಳ್ಳುವ ಸಂಭಾವನೆ ಕುರಿತು ಹಲವು ಸುದ್ದಿಗಳು ಹರಡುತ್ತಿವೆ. ಮುಂದಿನ ಸಿನಿಮಾ ಒಂದಕ್ಕಾಗಿ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ. ಆ ಚಿತ್ರ ಯಾವುದು, ನಿರ್ದೇಶಕರು ಯಾರು ಅನ್ನುವುದನ್ನ ನಾವು ಈಗ ರಿವೀಲ್ ಮಾಡ್ತೀವಿ…
ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್!
ನಟ ಅಲ್ಲು ಅರ್ಜುನ್ಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ ತಮಿಳಿನ ನಿರ್ದೇಶಕ ಅಟ್ಲಿ. ಹೌದು ಹೀಗೊಂದು ಸುದ್ದಿ ತೆಲುಗು ಚಿತ್ರ ರಂಗದಲ್ಲಿ ಹರಿದಾಡುತ್ತಿದೆ. ತಮಿಳಿನ ಹಿಟ್ ನಿರ್ದೇಶಕ ಅಟ್ಲಿ ಅಲ್ಲು ಅರ್ಜುನ್ಗಾಗಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಇಬ್ಬರ ಹೆಸರುಗಳಿಗೇನೆ ಒಂದು ತೂಕ ಇದೆ. ಯಾಕೆಂದರೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಇಬ್ಬರೂ ಕೂಡ ಸಾಲು ಸಾಲು ಹಿಟ್ ಕೊಟ್ಟವರು. ಇಬ್ಬರಿಗೂ ಈಗ ಹೆಚ್ಚಿನ ಬೇಡಿಕೆ ಇದೆ. ಇವರ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿಯೇ ಅವರ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡುವ ವಿಚಾರ.
ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಒಂದಾದ ಅಲ್ಲು ಅರ್ಜುನ್- ಅಟ್ಲಿ!
ಪುಷ್ಪ ಚಿತ್ರದ ಬಳಿಕ ಅಲ್ಲು ಅರ್ಜುನ್ ಪುಷ್ಪ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಮೊದಲೇ ಗೊತ್ತಾಗಿರುವ ಸಮಾಚಾರ. ಆದರೆ ಪುಷ್ಪ 2 ಬಳಿಕ ಅಲ್ಲು ಅರ್ಜುನ್ ಚಿತ್ರಕ್ಕೆ ನಿರ್ದೇಶಕ ಬೊಯಪಾಟಿ ಶ್ರೀನು ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅದಕ್ಕೀಗ ಬ್ರೇಕ್ ಬಿಟ್ಟಿದೆ. ಪುಷ್ಪ ಸರಣಿಯ ಬಳಿಕ ಅಲ್ಲು ಅರ್ಜುನ್ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ದೊಡ್ಡದಾಗಿ ಹಬ್ಬಿದೆ. ಇನ್ನೂ ಈ ಚಿತ್ರಕ್ಕಾಗಿಯೇ ಅಲ್ಲು ಅರ್ಜುನ್ 100 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಜೊತೆಗೆ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಕನ್ನಡದಲ್ಲೂ ಸಿನಿಮಾ ತೆರೆ ಕಾಣಲಿದೆ.
ಹಿಟ್ ನಿರ್ದೇಶಕ ಅಟ್ಲಿ ತೆಲುಗಿಗೆ!
ನಿರ್ದೇಶಕ ಅಟ್ಲಿ ಒಬ್ಬ ಯಶಸ್ವಿ ನಿರ್ದೇಶಕ. ತಮಿಳಿನಲ್ಲಿ ಇಲ್ಲಿ ತನಕ ನಾಲ್ಕು ಸಿನಿಮಾಗಳನ್ನು ಅಟ್ಲಿ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ಆ ನಾಲ್ಕು ಚಿತ್ರಗಳು ಕೂಡ ಹಿಟ್ ಲಿಸ್ಟ್ ಸೇರಿವೆ. ರಾಜಾ-ರಾಣಿ ಚಿತ್ರದ ಮೂಲಕ ನಿರ್ದೇಶಕನಾಗಿ ಅಟ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಂತರ ತೆರಿ, ಮೆರ್ಸಲ್, ಬಿಗಿಲ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಕೊನೆಯ ಮೂರೂ ಚಿತ್ರಗಳನ್ನು ತಮಿಳು ನಟ ವಿಜಯ್ಗಾಗಿಯೇ ಮಾಡಿದ್ದಾರೆ. ಈಗ ವಿಜಯ್ ನಿರ್ದೇಶಕ ಅಲ್ಲು ಅರ್ಜುನ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿದ್ದಾರೆ.
ಶಾರುಕ್ ಖಾನ್ ಜೊತೆ ಅಟ್ಲಿ, ಪುಷ್ಪ 2ನಲ್ಲಿ ಅಲ್ಲು ಅರ್ಜುನ್!
ನಿರ್ದೇಶಕ ಅಟ್ಲಿ ಸದ್ಯ ಶಾರುಕ್ ಖಾನ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಕೂಡ ಆರಂಭ ಆಗಿವೆ. ತಮಿಳಿನಲ್ಲಿ ಸತತ ಮೂರು ಸಿನಿಮಾಗನ್ನು ವಿಜಯ್ಗೆ ನಿರ್ದೇಶನ ಮಾಡಿದ್ದ ಅಟ್ಲಿಗೆ ಬಾಲಿವುಡ್ನಿಂದ ಬಂಪರ್ ಆಫರ್ ಬಂದಿದೆ. ಸದ್ಯ ಶಾರುಕ್ ಸಿನಿಮಾ ಮಾಡುತ್ತಿದ್ದಾರೆ ಅಟ್ಲಿ. ಇತ್ತ ಅಲ್ಲು ಅರ್ಜುನ್ ಪುಷ್ಪ ಭಾಗ 2 ಸಿನಿಮಾ ಮಾಡಬೇಕಾಗಿದೆ. ಸದ್ಯದಲ್ಲಿಯೇ ಪುಷ್ಪ 2 ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಈ ಎರಡು ಚಿತ್ರಗಳ ಬಳಿಕ ಅಲ್ಲು ಅರ್ಜುನ್ ಮತ್ತು ಒಂದಾಗಿ ಸಿನಿಮಾ ಮಾಡಲಿದ್ದಾರೆ.