Tamilnadu : ದೇವರ ಉತ್ಸವದ ವೇಳೆ ಕುಸಿದ ಕ್ರೇನ್ ನಾಲ್ವರು ಸಾವು 9 ಮಂದಿ ಗಾಯ…
ದೇವರ ಉತ್ಸವದಲ್ಲಿ ಕ್ರೇನ್ ಕುಸಿದು ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು 9 ಮಂದಿ ಗಂಭೀರ ವಾಗಿ ಗಾಯಗೊಂಡಿರುವ ಘಟನೆ ತಮಿಳು ನಾಡಿನ ಅರಕ್ಕೋಣಂನಲ್ಲಿ ನಡೆದಿದೆ.
ಕಿಲ್ವೀಧೀ ಗ್ರಾಮದಲ್ಲಿ ದ್ರೌಪತಿ ಅಮ್ಮನ್ ಉತ್ಸವದ ವೇಳೆ ಕ್ರೇನ್ ಕುಸಿದು ಈ ಅವಘಡ ಸಂಬಂಧಿಸಿದೆ. ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿವೆ. ಅಪಘಾತದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉತ್ಸವದಲ್ಲ ಕ್ರೇನ್ ಬಳಸಲು ಅನುಮತಿ ಇರಲಿಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ತಮಿಳು ನಾಡಿನಲ್ಲಿ ಪ್ರತಿವರ್ಷ ಪೊಂಗಲ್ ನಂತರ ದೇವಸ್ಥಾನ್ ಉತ್ಸವ ನಡೆಯುತ್ತದೆ. ಕ್ರೇನ್ ಮೂಲಕ ಸಿಡಿ ಉತ್ಸವದ ಆಚರಿಸುವ ವೇಳೆ ಕ್ರೇನ್ ಕುಸಿದು ಬಿದ್ದ ಕಾರಣ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Tamilnadu: 4 dead, 9 injured in crane collapse during Deva Utsav