Tamilnadu : ಮಕ್ಕಳಿಗೆ ಮಧುಮೇಹ : ನದಿಗೆ ಹಾರಿ ಇಬ್ಬರು ಹೆಣ್ಣು ಮಕ್ಕಳ ಸಹಿತ ದಂಪತಿ ಆತ್ಮಹತ್ಯೆ…
ಮಧುಮೇಹದಿಂದ ಬಳಲುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ಕಾಯಿಲೆಯಿಂದ ಮನನೊಂದಿದ್ದ ದಂಪೊತಿಗಳು ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ನದಿಗೆ ಎಸೆದು ತಾವು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳು ನಾಡಿನ ಸೇಲಂ ನಲ್ಲಿ ನಡೆದಿದೆ.
ಸೇಲಂನ ಮೆಟ್ಟೂರು ಪ್ರದೇಶದಲ್ಲಿ ಕಾವೇರಿ ನದಿಯಲ್ಲಿ ನಾಲ್ಕು ಶವಗಳು ತೆಲುತ್ತಿರುವುದನ್ನ ಕಂಡ ಹಸು ಕಾಯುವವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರ ಪ್ರಕಾರ, ಯುವರಾಜ್ (41), ಅವರ ಪತ್ನಿ ವನ್ವಿಜಿ (38), ಪುತ್ರಿಯರಾದ ನಿತಿಶಾ (7) ಮತ್ತು ಅಪ್ಸರಾ (4) ಸೇಲಂ ದಡಗಪಟ್ಟಿಯ ನೇಕಾರರ ಕಾಲೋನಿ ನಿವಾಸಿಗಳಾಗಿದ್ದಾರೆ. ಯುವರಾಜ್ ಸೂರಮಂಗಲದಲ್ಲಿ ಪರ್ಸನಲ್ ಎಲೆಕ್ಟ್ರಾನಿಕ್ಸ್ ನಲ್ಲಿ ಕಾರ್ಮಿಕರಾಗಿದ್ದರೆ ಪತ್ನಿ ಖಾಸಗಿ ಟೈಲ್ಸ್ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಹಿರಿಯ ಮಗಳು ನಿತಿಶಾ ಕಳೆದ ಮೂರು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಕಿರಿಯ ಮಗಳಿಗೆ ರಕ್ತ ಪರೀಕ್ಷೆ ಮಾಡಿಸಿದಾಗ ಅವಳಿಗೂ ಇತ್ತೀಚೆಗೆ ಮಧುಮೇಹ ಇರುವುದು ಪತ್ತೆಯಾಗಿದೆ. ಇಬ್ಬರು ಮಕ್ಕಳ ಅನಾರೋಗ್ಯವನ್ನ ಅರಗಿಸಿಕೊಳ್ಳಲಾಗದೆ ಪತ್ರದಲ್ಲಿ ತನ್ನ ಕಿರಿಯ ಸಹೋದರನಿಗೆ ವಿಷಯ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಲ್ವರು ಹೊಸ ಬಟ್ಟೆ ಧರಿಸಿ ನದಿ ಬಳಿ ಹೋಗಿ ಮೊದಲು ಮಕ್ಕಳನ್ನ ನೀರಿಗೆ ಎಸೆದಿದ್ದಾರೆ ಆನಂತರ ತಾವು ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಸೇಲಂ ಅನ್ನದಾನಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tamilnadu : Couple Dies by Suicide After Throwing Minor Daughters Into River