ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ
ಚೆನ್ನೈ : ತಮಿಳುನಾಡಿನ ಸರ್ಕಾರ ಸರ್ಕಾರಿ ನೌಕರಿ ಮಾಡುಲು ಬಯಸುವವರಿಗೆ ಹೊಸ ಕಂಡೀಷನ್ ಹಾಕಿ ಆದೇಶ ಹೊರಡಿಸಿದೆ.. ಈ ಆದೇಶದಂತೆ ಇನ್ಮುಂದೆ ತಮಿಳುನಾಡಿನಲ್ಲಿ ಸರ್ಕಾರಿ ನೌಕರಿಗೆ ಸೇರಬೇಕೆಂದರೆ ತಮಿಳು ಭಾಷಾ ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ಸೂಚಿಸಿದೆ.
ರಾಜ್ಯದ ಸರ್ಕಾರಿ ನೌಕರರಿಗೆ ತಮಿಳು ಜ್ಞಾನ ಇರಬೇಕು, ಜನರಿಗೆ ಮಾತೃಭಾಷೆಯಲ್ಲಿ ಸರ್ಕಾರಿ ಸೇವೆಗಳು ದೊರಕಬೇಕು ಮತ್ತು ತಮಿಳು ಭಾಷಿಕರಿಗೇ ಸ್ಥಳೀಯ ಉದ್ಯೋಗಗಳು ಸಿಗಬೇಕು ಎಂಬ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಎಲ್ಲಾ ಸರ್ಕಾರಿ ನೌಕರರಿಗೆ ತಮಿಳು ಭಾಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತಮಿಳುನಾಡು ಲೋಕಸೇವಾ ಆಯೋಗ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10ನೇ ತರಗತಿಯ ತಮಿಳು ಪ್ರಶ್ನೆಪತ್ರಿಕೆಯ ಮೌಲ್ಯ ಮಾಪನ ಮಾಡಲಾಗುತ್ತದೆ ಇರುತ್ತದೆ.
ಅದರಲ್ಲಿ ಕನಿಷ್ಟ 40 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದರಷ್ಟೇ ಅಭ್ಯರ್ಥಿಯು ಟಿಎನ್ಪಿಎಸ್ಸಿ ಪರೀಕ್ಷೆಯಲ್ಲಿ ಬರೆದ ಇನ್ನಿತರ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲಾಗುತ್ತದೆ . ಈ ನಿಯಮ ತಕ್ಷಣ ದಿಂದಲೇ ಜಾರಿಗೆ ಬರಲಿದೆ. ಡಿ.1ರಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಇದೇ ನಿಯಮ ರಾಜ್ಯ ಶಿಕ್ಷಕರ ನೇಮಕಾತಿ ಪರೀಕ್ಷೆ, ವೈದ್ಯಕೀಯ ನೇಮಕಾತಿ ಪರೀಕ್ಷೆ, ಯೂನಿಫಾರ್ಮ್ಡ್ ರಿಕ್ರೂಟ್ಮೆಂಟ್ ಬೋರ್ಡ್, ತಮಿಳುನಾಡು ಅರಣ್ಯ ಸೇವೆ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಳಿಗೂ ಅನ್ವಯಿಸಲಿದೆ.