ಟೇಸ್ಟಿ – ಟೇಸ್ಟಿ ಎಗ್ ಸುಕ್ಕಾ ಮನೆಯಲ್ಲೇ ಮಾಡಿ … ರೆಸಿಪಿ ನೋಡಿ…!!
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ – 4
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಹಸಿ ಮೆಣಸಿನ ಕಾಯಿ – 2
ಜೀರಿಗೆ – 1 ಚಮಚ
ತುರಿದ ತೆಂಗಿನಕಾಯಿ – 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಹುಣಸೆ ರಸ ಅಗತ್ಯವಿರುವಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ- 3 ಚಮಚ
ಮಾಡುವ ವಿಧಾನ :
ಮೊದಲು ಮೊಟ್ಟೆಗಳನ್ನು ಬೇಯಿಸಿ ಎರಡು ತುಂಡುಗಳಾಗಿ ಕತ್ತರಿಸಿ. ಈಗ ಕಡಾಯಿ ಬಿಸಿ ಮಾಡಿ ತುರಿದ ತೆಂಗಿನಕಾಯಿಯನ್ನು ಹುರಿದು ಪಕ್ಕಕ್ಕೆ ಇರಿಸಿ. ನಂತರ ಕಡಾಯಿಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ ತುಂಡುಗಳನ್ನು ಹುರಿದು ಇಟ್ಟುಕೊಳ್ಳಿ. ಈಗ ಕಡಾಯಿಗೆ ಎರಡು ಚಮಚ ಎಣ್ಣೆ ಸೇರಿಸಿ, ಜೀರಿಗೆ ಹುರಿಯಿರಿ. ಇದಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಸೇರಿಸಿ ಹುರಿಯಿರಿ.
ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಮೆಣಸಿನ ಪುಡಿ, ಧನಿಯಾ ಪುಡಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ಹುಣಸೆ ರಸ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಹುರಿದ ಈರುಳ್ಳಿ ಮತ್ತು ಹುರಿದ ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿ ಕಲಸಿ. ಬಳಿಕ ಕತ್ತರಿಸಿದ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರಣವನ್ನು ಸರಿಯಾಗಿ ಬೆರೆಸಿ. ಈಗ ಬಿಸಿ ಬಿಸಿಯಾದ ರುಚಿಕರವಾದ ಎಗ್ ಸುಕ್ಕಾ ಸವಿಯಲು ರೆಡಿಯಾಗಿದೆ.