RCB ಗೆ ಇಂಚೂರಿ ಸಮಸ್ಯೆ..? ಪ್ಲೇಯಿಂಗ್ ನಲ್ಲಿ ಬದಲಾವಣೆ
ಇಂಡಿಯನ್ ಪ್ರಿಮಿಯರ್ ಲೀಗ್ ನ 35 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಇದು ಒಂದು ರೀತಿ ಕರ್ನಾಟಕದ ಬಿಸಿಬೇಳೆ ಪಾತ್ ವರ್ಸಸ್ ಹೈದರಾಬಾದ್ ಬಿರಿಯಾನಿ ಕಾಳಗ ಅಂತಾನೇ ಹೇಳಬಹುದು.
ಆರ್ ಸಿ ಬಿ ಮತ್ತು ಎಸ್ ಆರ್ ಹೆಚ್ ಸದ್ಯ ಸೂಪರ್ ಫಾರ್ಮ್ ನಲ್ಲಿವೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಬ್ಯಾಕ್ ಟು ಬ್ಯಾಕ್ ನಾಲ್ಕು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿದೆ.
ಇತ್ತ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿರುವ ಆರ್ ಸಿಬಿ ಗೆಲುವಿನ ಯಾತ್ರೆ ಮುಂದುವರೆಸುವ ಪ್ಲಾನ್ ಮಾಡಿಕೊಂಡಿದೆ.
ಈ ಬಾರಿಯ ಆವೃತ್ತಿಯಲ್ಲಿ ಆರ್ ಸಿಬಿ ಏಳು ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತಿದೆ.
ಸನ್ ರೈಸರ್ಸ್ ಏಳು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಎರಡರಲ್ಲಿ ಸೋತಿದೆ.
ಉಭಯ ತಂಡಗಳ ಸ್ಟ್ರೆಂಥ್ ವೀಕ್ನೆಸ್ ಬಗ್ಗೆ ಹೇಳೋದಾದ್ರೆ
ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸಾಂಘೀಕ ಆಟವೇ ಬಲವಾಗಿದೆ.
ಬ್ಯಾಟಿಂಗ್ ನಲ್ಲಿ ಒಂದಿಷ್ಟು ಸಮಸ್ಯೆ ಇದ್ದರೂ ಬಿಗ್ ಸ್ಕೋರ್ ಕಲೆಹಾಕುವುದರಲ್ಲಿ ಬೆಂಗಳೂರು ತಂಡ ಹಿಂದೆ ಬಿದ್ದಿಲ್ಲ.
ಆರ್ ಸಿಬಿಗೆ ಟಾಪ್ ಆರ್ಡರ್ ಸಮಸ್ಯೆ ಕಾಣುತ್ತಿದೆ. ಅನೂಜ್ ರಾವತ್, ವಿರಾಟ್ ಕೊಹ್ಲಿ ಸ್ಥಿರ ಆಟದ ಪ್ರದರ್ಶನ ನೀಡಬೇಕಿದೆ.

ಸುಯಾಶ್ ಪ್ರಭುದೇಸಾಯಿ ಅಸಲಿ ಆಟವಾಡಬೇಕಿದೆ. ಇನ್ನುಳಿದಂತೆ ಫಾಫ್, ಗ್ಲೇನ್ ಮ್ಯಾಕ್ ವೆಲ್, ದಿನೇಶ್ ಕಾರ್ತಿಕ್, ಶಹಬ್ಬಾಸ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಬೌಲಿಂಗ್ ನಲ್ಲಿ ಜೋಷ್ ಹೆಜಲ್ ವುಡ್ ತಂಡಕ್ಕೆ ಜೋಷ್ ತಂದಿದ್ದಾರೆ. ಹರ್ಷಲ್, ಸಿರಾಜ್ ರನ್ ಗಳಿಗೆ ಕಡಿವಾಣ ಹಾಕಬೇಕಿದೆ. ಹಸರಂಗ ಮತ್ತಷ್ಟು ಮಿಂಚಬೇಕಿದೆ.
ಇಂದಿನ ಪಂದ್ಯದಲ್ಲಿ ಆರ್ ಸಿಬಿಯಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆಗಳಿವೆ.ಪ್ರಾಕ್ಟೀಸ್ ವೇಳೆ ವಿರಾಟ್, ಹಸರಂಗ ಗಾಯಗೊಂಡಿದ್ದಾರೆಂಬ ವದಂತಿಗಳು ಹಬ್ಬಿವೆ.
ಆದ್ರೆ ಈ ಆಟಗಾರರು ಪ್ಲೇಯಿಂಗ್ ಇಲೆವೆಲ್ ನಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಪಕ್ಕಾ. ಆದ್ರೂ ಅನೂಜ್ ರಾವತ್ ಪ್ಲೇಸ್ ನಲ್ಲಿ ವಿರಾಟ್ ಇನ್ನಿಂಗ್ಸ್ ಆರಂಭಿಸಬಹುದು.
ಅನೂಜ್ ಒನ್ ಡೌನ್ ಅಥವಾ ಮಹಿಪಾಲ್ ಪ್ಲೇಯಿಂಗ್ 11 ನಲ್ಲಿ ಚಾನ್ಸ್ ಪಡೆಯಬಹುದು.
ಇನ್ನುಳಿದಂತೆ ಆರ್ ಸಿಬಿ ತಂಡ ಹೀಗಿರಲಿದೆ : ಫಾಫ್ ಡುಪ್ಲಸಿಸ್, ವಿರಾಟ್ ಕೊಹ್ಲಿ, ಅನೂಜ್ ಅಥವಾ ಮಹಿಪಾಲ್, ಮ್ಯಾಕ್ಸ್ ವೆಲ್, ಶಹಬ್ಬಾಸ್, ಸುಯಾಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್, ಜೋಷ್ ಹೆಜಲ್ ವುಡ್, ಸಿರಾಜ್
ಹೈದರಾಬಾದ್ ತಂಡದ ಗೆಲುವು ನಿಂತಿರೋದು ಬೌಲಿಂಗ್ ಶಕ್ತಿ ಮೇಲೆ. ಹೈದರಾಬಾದ್ ತಂಡದಲ್ಲಿ ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ನಟರಾಜನ್ ಎದುರಾಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಇನ್ನುಳಿದಂತೆ ಕೇನ್ ವಿಲಿಯಂ ಸನ್, ಅಭಿಶೇಕ್, ರಾಹುಲ್ ತ್ರಿಪಾಟಿ, ಪೂರನ್ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. TATA IPL 2022 RCB New Playing X1 Aganist Srh








