ಟಾಟಾ ಸಫಾರಿ ಹೊಸ ಎಸ್ ಯುವಿ ಭಾರತದಲ್ಲಿ ಬಿಡುಗಡೆ..!
ಟಾಟಾ ಸಫಾರಿಯನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಟಾಟಾ ಮೋಟರ್ಸ್ ಕಂಪನಿಯು ಮಾರುಕಟ್ಟೆಗೆ ಪುನಃ ಬಿಡುಗಡೆ ಮಾಡಿರುವ ಸಫಾರಿ ಎಸ್‌ಯುವಿ ಬೆಲೆಯನ್ನು ಬಹಿರಂಗಪಡಿಸಿದೆ. ಈ ವಾಹನದ ಆರಂಭಿಕ ಮಾದರಿಯ ಎಕ್ಸ್‌ಷೋರೂಂ ಬೆಲೆ 14.69 ಲಕ್ಷ ರೂಪಾಯಿ ಇದೆ.
ಟಾಟಾ ಸಫಾರಿ ಅಡ್ವೆಂಚರ್ ಎಡಿಷನ್ ಮಾದರಿಯ ವಾಹನಗಳ ಬೆಲೆಯನ್ನೂ ಕಂಪನಿ ಬಹಿರಂಗಪಡಿಸಿದೆ. ಇದರ ಬೆಲೆ 20.20 ಲಕ್ಷ ರೂಪಾಯಿಂದ. ಆರಂಭವಾಗಿ, 21.45 ಲಕ್ಷ ರೂಪಾಯಿಯವರೆಗೂ ಇದೆ. ಮ್ಯಾನುವಲ್ ಟ್ರಾನ್ಸ್‌ಮಿಷನ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಕಂಪನಿ ನೀಡಿದೆ. ಆಸಕ್ತ ಖರೀದಿದಾರರು 30,000 ರೂಪಾಯಿ ಪಾವತಿಸಿ ಹೊಸ ಸಫಾರಿ ಬುಕ್ ಮಾಡಬಹುದು.
ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ಗುಡ್ ನ್ಯೂಸ್ : ‘ಕಾಲ್ ಆಫ್ ಡ್ಯೂಟಿ’ ಲಾಂಚ್ ..!
ಹೊಸ ಮಾದರಿಯಲ್ಲಿ ಹಾಗೂ ಹೊಸ ವಿನ್ಯಾಸದೊಂದಿಗೆ ಮತ್ತು ಬಲಿಷ್ಠ ಎಂಜಿನ್ ಸಾಮರ್ಥ್ಯದ ಎಸ್‌ಯುವಿಯನ್ನು ಟಾಟಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆಗೊಳಿಸಿದೆ. 2021ರ ಸಫಾರಿ ಆವೃತ್ತಿಯು ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ.
ಬಳಕೆದಾರರಿಗೆ ಪ್ರೈವೆಸಿ ನೀತಿ ಸ್ವೀಕರಿಸಲು ಡೆಡ್ ಲೈನ್ ಕೊಟ್ಟ ವಾಟ್ಸಾಪ್..!
ಈ ಕಾರನ್ನು ಆರು ವಿಭಿನ್ನ ಟ್ರಿಮ್‌ಗಳಲ್ಲಿ ಮತ್ತು ಒಟ್ಟು 11 ರೂಪಾಂತರಗಳಲ್ಲಿ ನೀಡಲಾಗುವುದು. ರಾಯಲ್ ಬ್ಲೂ, ಓರ್ಕಸ್ ವೈಟ್ ಮತ್ತು ಡೇಟೋನಾ ಗ್ರೇ ಅನ್ನು ಒಳಗೊಂಡಿರುವ ಸ್ಟ್ಯಾಂಡರ್ಡ್ ರೂಪಾಂತರಕ್ಕಾಗಿ ಈ ಕಾರನ್ನು ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.