ಬೆಳಗಾವಿ : ಸವದತ್ತಿಯ ಇಂಚಲ ಗ್ರಾಮ ಇದೀಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಇಂದು ಕಾಲದಲ್ಲಿ ಮಚ್ಚುಲಾಂಗು ಅಬ್ಬರಿಸುತ್ತಿದ್ದ ಈ ಗ್ರಾಮದಲ್ಲಿ ಇದೀಗ ಶಿಕ್ಷಣದ ಕಂಪು ಪಸರಿಸಿ ಮನಗೊಬ್ಬರಂತೆ ಶಿಕ್ಷಕರಿದ್ದಾರೆ. ಹೀಗಾಗಿಯೇ ಈ ಗ್ರಾಮವನ್ನು ರಾಜ್ಯದಲ್ಲಿ ಶಿಕ್ಷಕರ ತವರೂರು ಎಂದೇ ಗುರುತಿಸಲಾಗುತ್ತಿದೆ.
ಸರಿಯಾಗಿ ನಲತ್ತೈದು ವರ್ಷದ ಹಿಂದೆ ಇಂಚಲ ಗ್ರಾಮ ರಕ್ತಸಿಕ್ತವಾಗಿತ್ತು. ಅಂದರೆ “ತೆಲುಗು ಸಿನಿಮಾಗಳಲ್ಲಿ ತೋರಿಸುವ ರಾಯಲಸೀಮೆ ಕಥೆಗಳಂತೆ” ಇಲ್ಲಿ ಕೊಲೆ ಸುಲಿಗೆ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿತ್ತು. ಲಾಂಗು ಮಚ್ಚುಗಳ ಅಬ್ಬರ ಬಿಟ್ಟರೇ ಇಲ್ಲಿ ಶಿಕ್ಷಣಕ್ಕೆ ಜಾಗವೇ ಇರಲಿಲ್ಲ. ಆದ್ರೆ ಈ ಗ್ರಾಮದಲ್ಲಿರುವ ಇಂಚಲ ಮಠದ ಮಹಾಸ್ವಾಮಿಗಳ ನಿಸ್ವಾರ್ಥದ ಸೇವೆಯಿಂದಾಗಿ ಈಗ ಮನೆಗೊಬ್ಬರಂತೆ ಶಿಕ್ಷಕರಿದ್ದಾರೆ ಎಂದರೇ ನೀವು ನಂಬಲೇಬೇಕು.
ಈ ಗ್ರಾಮದಲ್ಲಿನ ಅಕ್ರಮ ಚಟುವಟಿಕೆಗಳನ್ನು ಕಣ್ಣಾರೆ ಕಂಡ ಇಂಚಲ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಎಲ್ಲರೂ ವಿದ್ಯಾವಂತರಾದರೆ ನೆಮ್ಮದಿ ನೆಲಸಬಹುದು ಅಂದುಕೊಂಡು ಮೊದಲು ಒಂದು ಸಣ್ಣ ಶಾಲೆಯನ್ನ ಪ್ರಾರಂಭಿಸುತ್ತಾರೆ. ಹಾಗೇ 1975ರಲ್ಲಿ ಪ್ರೌಢ ಶಿಕ್ಷಣ, 1982ರಲ್ಲಿ ಪಿಯು ಕಾಲೇಜು, 1985ರಲ್ಲಿ ಡಿಎಡ್ ಕಾಲೇಜು ಆರಂಭ ಮಾಡಿ ಇಲ್ಲಿನ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ.
ಇಂಚಲ ಗ್ರಾಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಇಲ್ಲಿವರೆಗೂ ಸುಮಾರು ಒಂಬತ್ತನೂರಕ್ಕೂ ಅಧಿಕ ಶಿಕ್ಷಕರಿದ್ದು, ಎಲ್ಲರೂ ಸರ್ಕಾರಿ ಶಿಕ್ಷರೇ ಎಂಬುದು ಮತ್ತೊಂದು ವಿಶೇಷ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.








