ADVERTISEMENT
Wednesday, January 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಾಡ್ರ್ಸ್ ಟೆಸ್ಟ್ – ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿಗೆ ಬಾಲಂಗೋಚಿಗಳೇ ಕಾರಣ…!

admin by admin
August 17, 2021
in Newsbeat, Sports, ಕ್ರೀಡೆ
mohammad siraj saakshatv team india
Share on FacebookShare on TwitterShare on WhatsappShare on Telegram

ಲಾಡ್ರ್ಸ್ ಟೆಸ್ಟ್ – ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿಗೆ ಬಾಲಂಗೋಚಿಗಳೇ ಕಾರಣ…!

mohammad siraj team  india saakshatvಕೆಲವೊಂದು ಬಾರಿ ಟೀಮ್ ಇಂಡಿಯಾದ ಬಾಲಗೊಂಚಿಗಳು ಚಮತ್ಕಾರವನ್ನೇ ಮಾಡುತ್ತಾರೆ. ಸ್ಟಾರ್ ಬ್ಯಾಟ್ಸ್ ಮೆನ್ ಗಳುನ ಕೈಕೊಟ್ಟಾಗ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ತಂಡಕ್ಕೆ ಆಧಾರವಾಗಿ ನಿಲ್ಲುತ್ತಾರೆ. ಇಂತಹ ಸನ್ನಿವೇಶಗಳು ಟೀಮ್ ಇಂಡಿಯಾದಲ್ಲಿ ಕಾಣುವುದು ತೀರಾ ಅಪರೂಪ. ಅದನ್ನು ಚಮತ್ಕಾರ ಅನ್ನಬೇಕೋ… ಪವಾಡ ಅನ್ನೋಬೇಕೋ. ಅಥವಾ ಅದೃಷ್ಟ ಅನ್ನಬೇಕೋ…
ಅದೇನೇ ಇರಲಿ.. ಲಾಡ್ರ್ಸ್ ಟೆಸ್ಟ್ ನಲ್ಲಿ ಆಗಿದ್ದು ಅದೇ… ಮೊದಲ ಇನಿಂಗ್ಸ್ ನಲ್ಲಿ ಕೆ.ಎಲ್. ರಾಹುಲ್ ಆಕರ್ಷಕ ಶತಕ, ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕ.. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಅಜಿಂಕ್ಯಾ ರಹಾನೆಯ ಅಮೂಲ್ಯ ಅರ್ಧಶತಕ ಮತ್ತು ಚೇತೇಶ್ವರ ಪೂಜಾರ ಅವರ ಆಮೆಗತಿಯ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ರೂ ಕೂಡ ಟೀಮ್ ಇಂಡಿಯಾ ಲಾಡ್ರ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸೂಚನೆ ಏನು ಇರಲಿಲ್ಲ.
ಯಾಕಂದ್ರೆ ಟೀಮ್ ಇಂಡಿಯಾದ ಎರಡನೇ ಇನಿಂಗ್ಸ್ ನಲ್ಲಿ ಅತಿರಥ ಮಹಾರಥ ಬ್ಯಾಟ್ಸ್ ಮೆನ್ ಗಳು ಅಲ್ಪ ಮೊತ್ತ ದಾಖಲಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಕೂಡ ಹೋರಾಟ ಮುಗಿಸಿದ್ದರು. ಇನ್ನೇನೂ ಪಂದ್ಯ ಡ್ರಾ ಮಾಡಿಕೊಳ್ಳಬೇಕು ಅನ್ನೋ ಮನಸ್ಥಿತಿ ಟೀಮ್ ಇಂಡಿಯಾದ್ದು ಆಗಿದ್ರೆ ಇಂಗ್ಲೆಂಡ್ ಗೆಲುವಿನ ಕನಸು ಕಾಣುತ್ತಿತ್ತು. \
ಆದ್ರೆ ಕ್ರಿಕೆಟ್ ಕಾಶಿಯಲ್ಲಿ ನಡೆದಿದ್ದೇ ಬೇರೆ. ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಶಮಿ ಬ್ಯಾಟಿಂಗ್ ಮಾಡಿದ್ದರು. 9ನೇ ವಿಕೆಟ್ ಗೆ ಶಮಿ ಮತ್ತು ಬೂಮ್ರಾ ಅಜೇಯ 89 ರನ್ ಗಳ ಜೊತೆಯಾಟವನ್ನು ಆಡಿದ್ದರು. ಮಹಮ್ಮದ್ ಶಮಿ ಅಜೇಯ 56 ರನ್ ಗಳಿಸಿದ್ರೆ, ಬೂಮ್ರಾ ಅಜೇಯ 34 ರನ್ ಸಿಡಿಸಿದ್ರು. ಪರಿಣಾಮ ಇಂಗ್ಲೆಂಡ್ ಗೆ ಗೆಲ್ಲಲು ಬೇಕಾಗಿದ್ದು 272 ರನ್.
ಈ ಸವಾಲು ತುಸು ಕಷ್ಟವಾದ್ರೂ ತವರು ನೆಲದ ಲಾಭವನ್ನು ಪಡೆದುಕೊಂಡು ಆಂಗ್ಲರು ಗೆಲುವು ದಾಖಲಿಸುವ ಯೋಚನೆಯಲ್ಲಿದ್ರು. ಹಾಗಂತ ಇದು ಸುಲಭವೇನೂ ಆಗಿರಲಿಲ್ಲ. ಅಂತಿಮ ದಿನ ಬ್ಯಾಟಿಂಗ್ ಮಾಡೋದು ಕಷ್ಟ.. ಆದ್ರೂ ಟೀಮ್ ಇಂಡಿಯಾಗೆ ಚಮಕ್ ಕೊಡುವ ಇರಾದೆಯಲ್ಲಿದ್ದರು ಇಂಗ್ಲೀಷರು. ಈ ನಡುವೆ ಗೆಲ್ಲಲು ಸಾಧ್ಯವಾಗದೇ ಇದ್ರೂ ಕನಿಷ್ಠ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಯೋಜನೆ ಇಂಗ್ಲೆಂಡ್ ತಂಡದ್ದಾಗಿತ್ತು.

Related posts

ನಿತಿನ್ ನಬಿನ್ ನನ್ನ ಬಾಸ್‌ – ನಾನು ಬಿಜೆಪಿಯ ಕಾರ್ಯಕರ್ತ: ಪ್ರಧಾನಿ ಮೋದಿ

ನಿತಿನ್ ನಬಿನ್ ನನ್ನ ಬಾಸ್‌ – ನಾನು ಬಿಜೆಪಿಯ ಕಾರ್ಯಕರ್ತ: ಪ್ರಧಾನಿ ಮೋದಿ

January 21, 2026
ನಿಮ್ಮ ಯೋಗ ಮುಗಿಯುವ ಕಾಲ ಬಂದಿದೆ: ರಾಯರ ಫೋಟೋ ತಿರಸ್ಕರಿಸಿದ ಸಿಎಂ ವಿರುದ್ಧ ಜಗ್ಗೇಶ್ ಕಿಡಿ

ನಿಮ್ಮ ಯೋಗ ಮುಗಿಯುವ ಕಾಲ ಬಂದಿದೆ: ರಾಯರ ಫೋಟೋ ತಿರಸ್ಕರಿಸಿದ ಸಿಎಂ ವಿರುದ್ಧ ಜಗ್ಗೇಶ್ ಕಿಡಿ

January 21, 2026

jasprith bumrh team india saakshatvಆದ್ರೆ ಇಂಗ್ಲೆಂಡ್ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದು ಟೀಮ್ ಇಂಡಿಯಾದ ನಾಲ್ವರು ವೇಗಿಗಳು. ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ ನೀಡಿದ್ದು ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಶಮಿ. ಖಾತೆ ತೆರೆಯುವ ಮುನ್ನವೇ ಇಂಗ್ಲೆಂಡ್ ನ ಆರಂಭಿಕರಾದ ರೋರಿ ಬನ್ರ್ಸ್ ಮತ್ತು ಡಾಮಿನಿಕ್ ಸಿಬ್ಲೆ ಕ್ರಮವಾಗಿ ಬೂಮ್ರಾ ಮತ್ತು ಶಮಿಗೆ ಬಲಿಯಾದ್ರು.
ನಂತರ ಹಸೀಬ್ ಹಮೀದ್ (9 ರನ್) ಮತ್ತು ಜಾನಿ ಬೇರ್ ಸ್ಟೋವ್ (2 ರನ್) ಇಶಾಂತ್ ಅವರ ಎಲ್ ಬಿ ಬಲೆಗೆ ಬಿದ್ರು. ಇನ್ನೊಂದೆಡೆ ಅಪಾಯಕಾರಿ ಇಂಗ್ಲೆಂಡ್ ನಾಯಕ ಜಾಯ್ ರೂಟ್ (33 ರನ್) ಅವರಿಗೆ ಬೂಮ್ರಾ ಪೆವಿಲಿಯನ್ ದಾರಿ ತೋರಿಸಿದ್ರು. ಅಲ್ಲಿಗೆ ಇಂಗ್ಲೆಂಡ್ ಸೋಲಿನ ದವಡೆಗೆ ಸಿಲುಕಿತ್ತು.
ಬಳಿಕ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಯುವ ವೇಗಿ ಮಹಮ್ಮದ್ ಸೀರಾಜ್. ಮೊದಲು ಮೋಯಿನ್ ಆಲಿ (13 ರನ್), ಸ್ಯಾಮ್ ಕುರನ್ (0) ಪೆವಿಲಿಯನ್ ಸೇರಿಕೊಳ್ಳುವಂತೆ ಮಾಡಿದ್ದರು ಸೀರಾಜ್. ಇನ್ನೊಂದೆಡೆ ಒಲಿಯ್ ರಾಬಿನ್ಸನ್ (9) ಅವರನ್ನು ಬೂಮ್ರಾ ಬಲಿ ಪಡೆದುಕೊಂಡ್ರು.
ಇನ್ನೊಂದೆಡೆ ಕ್ರೀಸ್ ಗೆ ಅಂಟಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಜೋಸ್ ಬಟ್ಲರ್ (25 ರನ್) ಸೀರಾಜ್ ಗೆ ಮೂರನೇ ಬಲಿಯಾದ್ರು. ಅಂತಿಮವಾಗಿ ಅನುಭವಿ ಹಾಗೂ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರಿಗೆ ಮಹಮ್ಮದ್ ಸೀರಾಜ್ ಖಾತೆ ತೆರೆಯಲು ಕೂಡ ಅವಕಾಶ ನೀಡಲಿಲ್ಲ. ಅಲ್ಲಿಗೆ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ ನಲ್ಲಿ 120 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 151 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು.
ಟೀಮ್ ಇಂಡಿಯಾ ಪರ ಮಹಮ್ಮದ್ ಸೀರಾಜ್ ನಾಲ್ಕು ವಿಕೆಟ್ ಪಡೆದ್ರೆ, ಬೂಮ್ರಾ ಮೂರು ವಿಕೆಟ್ ಉರುಳಿಸಿದ್ರು. ಶಮಿ ಒಂದು ವಿಕೆಟ್ ಪಡೆದ್ರು. ಇಶಾಂತ್ ಶರ್ಮಾ ಎರಡು ವಿಕೆಟ್ ಕಬಳಿಸಿದ್ರು.
team india lords england saakshatvಇನ್ನು ಮಹಮ್ಮದ್ ಸೀರಾಜ್ ಮೊದಲ ಇನಿಂಗ್ಸ್ ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸಿದ್ರು. ಮೊದಲ ಇನಿಂಗ್ಸ್ ನಲ್ಲೂ ಸಿರಾಜ್ ನಾಲ್ಕು ವಿಕೆಟ್ ಪಡೆದ್ರೆ, ಇಶಾಂತ್ ಮೂರು ವಿಕೆಟ್ ಉರುಳಿಸಿದ್ರು. ಶಮಿ ಎರಡು ವಿಕೆಟ್ ಗಿಟ್ಟಿಸಿಕೊಂಡಿದ್ದರು.
ಒಟ್ಟಿನಲ್ಲಿ ಮಹಮ್ಮದ್ ಸೀರಾಜ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು ಎಂಟು ವಿಕೆಟ್ ಪಡೆದುಕೊಂಡು ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Tags: #saakshatvAjinkya RahaneCricketEnglandishanth sharmajasprith bumrahKL RahuLmohammad shamiMohammad Sirajrohith sharmateam indiatest cricketvirat kohli
ShareTweetSendShare
Join us on:

Related Posts

ನಿತಿನ್ ನಬಿನ್ ನನ್ನ ಬಾಸ್‌ – ನಾನು ಬಿಜೆಪಿಯ ಕಾರ್ಯಕರ್ತ: ಪ್ರಧಾನಿ ಮೋದಿ

ನಿತಿನ್ ನಬಿನ್ ನನ್ನ ಬಾಸ್‌ – ನಾನು ಬಿಜೆಪಿಯ ಕಾರ್ಯಕರ್ತ: ಪ್ರಧಾನಿ ಮೋದಿ

by Shwetha
January 21, 2026
0

ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಿತಿನ್ ನಬಿನ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗಳೊಂದಿಗೆ ಶ್ಲಾಘಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ...

ನಿಮ್ಮ ಯೋಗ ಮುಗಿಯುವ ಕಾಲ ಬಂದಿದೆ: ರಾಯರ ಫೋಟೋ ತಿರಸ್ಕರಿಸಿದ ಸಿಎಂ ವಿರುದ್ಧ ಜಗ್ಗೇಶ್ ಕಿಡಿ

ನಿಮ್ಮ ಯೋಗ ಮುಗಿಯುವ ಕಾಲ ಬಂದಿದೆ: ರಾಯರ ಫೋಟೋ ತಿರಸ್ಕರಿಸಿದ ಸಿಎಂ ವಿರುದ್ಧ ಜಗ್ಗೇಶ್ ಕಿಡಿ

by Shwetha
January 21, 2026
0

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಸ್ವೀಕರಿಸಲು ನಿರಾಕರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು...

ಕಾಂಗ್ರೆಸ್ ಗೆ ಈಗ ಆ ಶಕ್ತಿಯಿಲ್ಲ, 20 ವರ್ಷಗಳ ಹಿಂದಿನ ಮತದಾರರು ನಮ್ಮೊಂದಿಗಿಲ್ಲ: ಕೈ ನಾಯಕನಿಂದಲೇ ಕಟು ಸತ್ಯ ಬಹಿರಂಗ

ಕಾಂಗ್ರೆಸ್ ಗೆ ಈಗ ಆ ಶಕ್ತಿಯಿಲ್ಲ, 20 ವರ್ಷಗಳ ಹಿಂದಿನ ಮತದಾರರು ನಮ್ಮೊಂದಿಗಿಲ್ಲ: ಕೈ ನಾಯಕನಿಂದಲೇ ಕಟು ಸತ್ಯ ಬಹಿರಂಗ

by Shwetha
January 21, 2026
0

ನವದೆಹಲಿ: ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷವು ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ ಎಂಬ ಚರ್ಚೆಗಳ ನಡುವೆಯೇ, ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್...

ಮಾತು ತಪ್ಪುವ ಜಾಯಮಾನ ನಮ್ಮದಲ್ಲ, ಈಗ ಒಪ್ಪಿ ಮುಂದೆ ಉಲ್ಟಾ ಹೊಡೆಯುವವರಿಗೆ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ

ಮಾತು ತಪ್ಪುವ ಜಾಯಮಾನ ನಮ್ಮದಲ್ಲ, ಈಗ ಒಪ್ಪಿ ಮುಂದೆ ಉಲ್ಟಾ ಹೊಡೆಯುವವರಿಗೆ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ

by Shwetha
January 21, 2026
0

ಕನಕಪುರ: ರಾಜಕಾರಣದಲ್ಲಿ ಮಾತಿಗೆ ತಪ್ಪುವುದು, ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವುದು ಕೆಲವರಿಗೆ ರೂಢಿಯಾಗಿರಬಹುದು. ಆದರೆ, ಕೊಟ್ಟ ಮಾತು ಉಳಿಸಿಕೊಳ್ಳುವುದು ಕನಕಪುರದ ಮಣ್ಣಿನ ಗುಣ. ಇಲ್ಲಿ ಒಮ್ಮೆ ಮಾತು...

ದಿನ ಭವಿಷ್ಯ (04-01-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
January 21, 2026
0

ದಿನ ಭವಿಷ್ಯ: 21-01-2026 ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚುವ ದಿನವಾಗಿದೆ. ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram