ಅವಳಿ ಗಂಡುಮಕ್ಕಳಿಗೆ ತಂದೆಯಾದ ಕ್ರಿಕೆಟಿಗ ದಿನೇಶ್ ಕಾರ್ತಿಕ್..!
ಭಾರತೀಯ ಕ್ರಿಕೆಟಿಗ ದಿನೇಶದ ಕಾರ್ತಿಕ್ ಹಾಗೂ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಅವಳಿ ಗಂಡುಮಕ್ಕಳಿಗೆ ತಂದೆಯಾದ ಸಂಭ್ರದಲ್ಲಿದ್ದಾರೆ. ಹೌದು ದಿನೇಶ್ ಕಾರ್ತಿಕ್ ದಂಪತಿಗೆ ಅವಳಿ ಗಂಡು ಮಕ್ಕಳು ಜನಿಸಿದ್ದು, ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಈ ವಿಚಾರವನ್ನು ದಿನೇಶ್ ಕಾರ್ತಿಕ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಿನೇಶ್ ಗೆ ಅಭಿಮಾನಿಗಳು , ಸ್ನೇಹಿತರು , ಆಪ್ತರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಫೋಟೋಗಳನ್ನ ಪೋಸ್ಟ್ ಮಾಡಿಕೊಂಡಿದ್ದಾರೆ ಕಾರ್ತಿಕ್. ಈ ಫೋಟೋದಲ್ಲಿ ದಿನೇಶ್ ಕಾರ್ತಿಕ್, ಪತ್ನಿ ಮತ್ತು ಮಕ್ಕಳೊಂದಿಗೆ ಕುಳಿತುಕೊಂಡಿದ್ದಾರೆ. ಜೊತೆಗೆ ನೋಡ ನೋಡುತ್ತಿದ್ದಂತೆ ಮೂರು ಈಗ ಐದಾಗಿದೆ. ದೀಪಿಕಾ ಮತ್ತು ನನಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಜನಿಸಿದ್ದಾರೆ.
ಕಬೀರ್ ಪಳ್ಳಿಕಲ್ ಕಾರ್ತಿಕ್, ಝಿಯಾನ್ ಪಳ್ಳಿಕಲ್ ಕಾರ್ತಿಕ್ … ಇದಕ್ಕಿಂತ ಸಂಭ್ರಮ ಸಿಗಲಾರದು ಎಂದು ಬರೆದುಕೊಂಡಿದ್ದಾರೆ. ಕಾರ್ತಿಕ್ ಅವರ ಪತ್ನಿ ದೀಪಿಕಾ ಸ್ಕ್ವಾಷ್ ಆಟಗಾರ್ತಿಯಾಗಿದ್ದಾರೆ. 2012ರಲ್ಲಿ ನಿಕಿತಾ ವಂಜಾರಾ ಅವರೊಂದಿಗೆ ಕಾರ್ತಿಕ್ ವಿಚ್ಛೇದನ ಪಡೆದ ನಂತರ 2015ರಲ್ಲಿ ದೀಪಿಕಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹೆಸರು ಲೋಗೋ ಬದಲಿಸಿದ ಫೇಸ್ಬುಕ್ . ಮೆಟಾ ಆಗಿ ಬದಲಾವಣೆ