ಹೆಸರು ಲೋಗೋ ಬದಲಿಸಿದ ಫೇಸ್ಬುಕ್ . ಮೆಟಾ ಆಗಿ ಬದಲಾವಣೆ
ಸೊಶಿಯಲ್ ಮೀಡಿಯಾಗಳಲ್ಲಿಯೇ ದೈತ್ಯಾ ಕಂಪನಿಯಾದ ಫೇಸ್ಬುಕ್ ತನ್ನ ಹೆಸರನ್ನ 17 ವರ್ಷಗಳ ನಂತರ ಬದಲಾಯಿಸಿಕೊಂಡಿದೆ. ಇನ್ಮುಂದೆ ಮೆಟಾ ಎಂದು ಬ್ರಾಂಡ್ ಆಗಲಿದೆ.. ಈ ಬಗ್ಗೆ ಫೆಸ್ಬುಕ್ ನಲ್ಲಿ ಬರೆದಿಕೊಂಡಿರುವ ಫೇಸ್ಬುಕ್ ಸಂಸ್ಥಾಪಕ ಜುಕರ್ ಬರ್ಗ್ ಮೆಟಾವರ್ಸ್ ಡಿಜಿಟಲ್ ಜಗತ್ತನ್ನ ಮತ್ತಷ್ಟು ರಿಯಾಲಿಟಿಗೆ ತರಲಿದೆ ಎಂದು ತಿಳಿಸಿದ್ದಾರೆ.
ನಾವು ಬಳಸುವ ಫೇಸ್ಬುಕ್ ಹೆಸರು ಬದಲಾಗಲಿದೆಯಾ ? ಇಲ್ಲ ಇದು ಕೇವಲ ಕಂಪನಿಯ ಹೆಸರನ್ನಷ್ಟೆ ಬದಲಾವಣೆ ಮಾಡಿದೆ. ಅಪ್ಲಿಕೇಶನ್ ಗಳ ಹೆಸರು ಯಥಾರಿತಿ ಮುಂದುವರೆಯಲಿದೆ. ಇನ್ಸ್ಟಾಗ್ರಾಂ ಮತ್ತು ವಾಟ್ಸಪ್ ಓಪನ್ ಮಾಡುವಾಗ ಪವರ್ಡ್ ಬೈ ಫೇಸಬುಕ್ ಎಂದು ತೊರಿಸುವ ಬದಲಿಗೆ ಪವರ್ಡ್ ಬೈ ಮೆಟಾ ಎಂದು ತೋರಿಸಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಬದಾಲಾವಣೆ ಮಾಡುವ ಬಗ್ಗೆ ಈ ಬಗ್ಗೆ ಮುಂಚೆಯೇ ಮುನ್ಸೂಚನೆಯನ್ನ ಫೇಸ್ಬುಕ್ ನೀಡಿತ್ತು..