ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಲಗ್ಗೆ ಇಟ್ಟ ಹೆಬ್ಬುಲಿಗಳು

1 min read
team india saakshatv

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಲಗ್ಗೆ ಇಟ್ಟ ಹೆಬ್ಬುಲಿಗಳು

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಭಾರತದ ಹೆಬ್ಬುಲಿಗಳು ಘರ್ಜಿಸಿವೆ. ಟೀಂ ಇಂಡಿಯಾದ ಯಂಗ್ ಫ್ಯಾಂಟರ್ ಗಳ ಆರ್ಭಟಕ್ಕೆ ಪತರುಗುಟ್ಟಿದ ಇಂಗ್ಲೆಂಡ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿ ಮಂಡಿಯೂರಿದ್ದಾರೆ.

ಅಂತಿನ ಪಂದ್ಯದ ಆರಂಭದಿಂದಲೂ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ ಟೀಂ ಇಂಡಿಯಾ ಅಂತಿಮವಾಗಿ ಇನ್ನಿಂಗ್ ಹಾಗೂ 25 ರನ್ ಗಳೊಂದಿಗೆ ಪಂದ್ಯವನ್ನ ಗೆದ್ದು ಬೀಗಿದೆ. ಇದರೊಂದಿಗೆ ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‍ಶಿಪ್ ಫೈನಲ್ ತಲುಪಿದೆ.

ಹೌದು..! ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ಪಕ್ಕಾ ಆಗಬೇಕಿದ್ದರೇ ನಾಲ್ಕನೇ ಟೆಸ್ಟ್ ಪಂದ್ಯವನ್ನ ಭಾರತ ಗೆಲ್ಲಲೇಬೇಕಿತ್ತು. ಟೆಸ್ಟ್ ಚಾಂಪಿಯನ್ ಶಿಪ್ ಅನ್ನು ಗಮನದಲ್ಲಿಟ್ಟು ಸರಣಿಗೆ ಸಜ್ಜಾಗಿದ್ದ ಭಾರತಕ್ಕೆ ಮೊದಲ ಪಂದ್ಯದಲ್ಲಿ ಆಂಗ್ಲರು ಮುಟ್ಟಿ ನೋಡಿಕೊಳ್ಳುವಂತಹ ಸೋಲನ್ನುಣಿಸಿದ್ದರು.

Team India

ಈ ಪಂದ್ಯದಲ್ಲಿ ಭಾತರದ ಆಟ ನೋಡಿದ ಎಲ್ಲರು ಟೀಂ ಇಂಡಿಯಾ ಕಥೆ ಮುಗೀತು. ಇಂಗ್ಲೆಂಡ್ ವಿರುದ್ಧ ಕೊಹ್ಲಿ ಹುಡುಗರು ಗೆಲುವು ಸಾಧಿಸಲಾರರು. ಭಾರತ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಹೋಗೋದು ಡೌಟು ಅಂತಾ ಅಭಿಪ್ರಾಯಪಟ್ಟಿದ್ದರು.

ಗ್ರೇಟ್ ಕಂಬ್ಯಾಕ್ ಮಾಡಿದ ಹೆಬ್ಬುಲಿಗಳು

ಹುಲಿ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿದೆ ಅಂದ್ರೆ ಅದು ಹೆದರಿದೆ ಅಂತಾ ಅರ್ಥ ಅಲ್ಲ. ಬೇಟೆಗೆ ರೆಡಿಯಾಗಿದೆ ಅಂತರ್ಥ, ಅನ್ನೋ ರೀತಿ ಟೀ ಇಂಡಿಯಾ ಹೆಬ್ಬುಲಿಗಳು ಎರಡನೇ ಪಂದ್ಯದಲ್ಲಿ ಆಂಗ್ಲರಿಗೆ ಟಕ್ಕರ್ ನೀಡಿದ್ರು. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ರಣರೋಚಕ ಗೆಲುವು ಸಾಧಿಸಿ, ಸರಣಿಯಲ್ಲಿ ಸಮಬಲ ಸಾಧಿಸಿತ್ತು.

ಇದಾದ ಬಳಿಕ ಮೋದಿ ಅಂಗಳದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಪರಾಕ್ರಮ ಮೆರೆದ ಕೊಹ್ಲಿ ಹುಡುಗರು ಎರಡೇ ದಿನದಲ್ಲಿ ಇಂಗ್ಲೆಂಡ್ ಸೋಲುಣಿಸಿದ್ರು. ಇನ್ನು ಅಂತಿಮ ಪಂದ್ಯದಲ್ಲೂ ಕೂಡ ಇಂಗ್ಲೆಂಡ್ ಗೆ ಕಡಿವಾಣ ಹಾಕಿದ ಟೀಂ ಇಂಡಿಯಾ ಇನ್ನಿಂಗ್ಸ್ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೆ ಪ್ರವೇಶಿಸಿದೆ. ಫೈನಲ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd