ಕೋವಿಡ್ ಲಸಿಕೆ ಪಡೆದ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ…!

1 min read
India Head Coach Ravi Shastri

ಕೋವಿಡ್ ಲಸಿಕೆ ಪಡೆದ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ…!

India Head Coach Ravi Shastri  saakshatvರವಿಶಾಸ್ತ್ರಿ.. ಟೀಮ್ ಇಂಡಿಯಾದ ಹೆಡ್ ಕೋಚ್. ಶಾಸ್ತ್ರಿ ಗರಡಿಯಲ್ಲಿ ಪಳಗುತ್ತಿರುವ ಟೀಮ್ ಇಂಡಿಯಾ ಹುಡುಗರು ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಈಗಾಗಲೇ 2-1ರಿಂದ ಮುನ್ನಡೆ ಸಾಧಿಸಿದೆ. ಅದ್ರಲ್ಲೂ ಮೂರನೇ ಟೆಸ್ಟ್ ಪಂದ್ಯದ ಗೆಲುವು ಟೀಮ್ ಇಂಡಿಯಾಗೆ ಇನ್ನಿಲ್ಲದ ಪ್ರೇರಣೆ ನೀಡಿದೆ. ಅಷ್ಟೇ ಆತ್ಮವಿಶ್ವಾಸದಿಂದಲೂ ಬೀಗುತ್ತಿದೆ. ಐದು ದಿನಗಳ ಟೆಸ್ಟ್ ಪಂದ್ಯವನ್ನು ಎರಡೇ ದಿನದಲ್ಲಿ ಮುಗಿಸಿ ಆಂಗ್ಲರಿಗೆ ಆಘಾತ ನೀಡಿದೆ.
ಇದೀಗ ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ ಶುರುವಾಗಲಿದೆ. ಈಗಾಗಲೇ ಟೀಮ್ ಇಂಡಿಯಾ ವಿಶ್ರಾಂತಿ ಮೂಡ್ ನಿಂದ ಹೊರಬಂದು ಕಠಿಣ ತಾಲೀಮು ನಡೆಸುತ್ತಿದೆ.
ಇದ್ರ ಬೆನ್ನಲ್ಲೇ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ರವಿಶಾಸ್ತ್ರಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಅಹಮದಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ರವಿಶಾಸ್ತ್ರಿ ಅವರು ಕೋವಿಡ್ ಲಸಿಕೆ ಪಡೆದುಕೊಂಡು ಟ್ವಿಟ್ ಕೂಡ ಮಾಡಿದ್ದಾರೆ.
ಕೊವಿಡ್ ಲಸಿಕೆ ಪಡೆದುಕೊಂಡಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಕೊವಿಡ್ ಮಹಾಮಾರಿ ವಿರುದ್ಧ ವೈದ್ಯಕೀಯ ಕ್ಷೇತ್ರದ ತಜ್ಞರು ಮತ್ತು ವಿಜ್ಞಾನಿಗಳು ಪರಿಶ್ರಮದಿಂದ ಭಾರತ ಉತ್ತುಂಗಕ್ಕೇರುವಂತೆ ಮಾಡಿದ್ದಾರೆ ಅಪೊಲೋ ಆಸ್ಪತ್ರೆಯ ಸಿಬ್ಬಂದಿಗಳಿಗೆ ಧನ್ಯವಾದ ಎಂದು ರವಿಶಾಸ್ತ್ರಿ ಟ್ವಿಟ್ ಮಾಡಿದ್ದಾರೆ.
India Head Coach Ravi Shastri ಮುಂದಿನ ಮಾರ್ಚ್ 27ಕ್ಕೆ ರವಿಶಾಸ್ತ್ರಿ ಅವರು 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಾರ್ಚ್1ರಿಂದ ದೇಶಾದ್ಯಂತ 60 ವರ್ಷ ಮತ್ತು 45 ವರ್ಷ ಮೆಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಬಹುದಾಗಿದೆ.
ಈ ನಡುವೆ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಕೊವಿಡ್ ಲಸಿಕೆ ಪಡೆದುಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಗವಾಸ್ಕರ್ ಅವರು ಮಾರ್ಚ್ 6ರಂದು 71ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಒಟ್ಟಿನಲ್ಲಿ ಭಾರತದಲ್ಲಿ ಕೊವಿಡ್ ಲಸಿಕೆ ಪಡೆದ ಮೊದಲ ಕ್ರಿಕೆಟಿಗ ಎಂಬುದಕ್ಕೆ ರವಿಶಾಸ್ತ್ರಿ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd