Team india | ವಿಶ್ವಕಪ್ ಗೂ ಮುನ್ನಾ ಟೀಂ ಇಂಡಿಯಾ ಶೆಡ್ಯೂಲ್ ಹೇಗಿದೆ ಗೊತ್ತಾ ?
ಇಂದು ಏಷ್ಯಾಕಪ್ ನಲ್ಲಿ ತನ್ನ ಕೊನೆಯ ಪಂದ್ಯವನ್ನಾಡಲಿರುವ ಟೀಂ ಇಂಡಿಯಾ, ಇದಾದ ಬಳಿಕ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧ ಸೆಣಸಲಿದೆ.
ಇದಕ್ಕೆ ಸಂಬಂಧ ಪಟ್ಟ ಶೆಡ್ಯೂಲ್ ಬಿಡುಗಡೆಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯ :
ಭಾರತ ಆಸೀಸ್ ವಿರುದ್ಧ 3 ಪಂದ್ಯಗಳನ್ನು ಆಡಲಿದೆ.
ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಮೂರು ಟಿ 20 ಪಂದ್ಯಗಳನ್ನಾಡಲಿದೆ.

ಆಸೀಸ್ ಶೆಡ್ಯೂಲ್
ಸೆಪ್ಟಂಬರ್ 20: ಮೊಹಾಲಿ
ಸೆಪ್ಟಂಬರ್ 23- ನಾಗ್ಪುರ
ಸೆಪ್ಟಂಬರ್ 25- ಹೈದ್ರಾಬಾದ್
ಈ ಸರಣಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ ಸೆಪ್ಟಂಬರ್ 28 ರಂದು ನಡೆಯಲಿದೆ.
ಅಕ್ಟೋಬರ್ 02 ರಂದು 2ನೇ ಹಾಗೂ ಅಕ್ಟೋಬರ್ 04 ರಂದು ಅಂತಿಮ ಟಿ20 ಪಂದ್ಯ ನಡೆಯಲಿದೆ.