ಪುರುಸೊತ್ತು ಇಲ್ಲದೆ ಕ್ರಿಕೆಟ್ ಆಡಬೇಕಿದೆ ಟೀಮ್ ಇಂಡಿಯಾ

1 min read
INDIA VS ENGLAND

ಟೀಮ್ ಇಂಡಿಯಾ ಮುಂದಿದೆ ಸಾಲು ಸಾಲು ಕ್ರಿಕೆಟ್ ಸರಣಿ

ಐಸಿಸಿ ವಿಶ್ವಕಪ್ಗೆ ಫೆವರೀಟ್ ಆಗಿ ಎಂಟ್ರಿಕೊಟ್ಟ ಟೀಮ್ ಇಂಡಿಯಾ ಕನಿಷ್ಠ ಸೆಮಿಫೈನಲ್ಗೇರುವ ಕನಸಿನಲ್ಲಿತ್ತು. ಆದರೆ ಎಲ್ಲವೂ ಉಲ್ಟಾ ಆಗಿದೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಮೊದಲೆರಡು ಪಂದ್ಯ ಸೋತ ಮೇಲೆ ಟೀಮ್ ಇಂಡಿಯಾದ ಕಪ್ ಆಸೆಗೆ ಮೋಡ ಕವಿದಿತ್ತು.

ಕೊನೆಯ ಮೂರು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದರೂ, ಅಂಕಗಳ ಆಧಾರದಲ್ಲಿ ಟೂರ್ನಿಯಿಂದ ಹೊರಬಿತ್ತು.

ಆದರೆ ಟೀಮ್ ಇಂಡಿಯಾ ವಿಶ್ವಕಪ್ನ ಕಹಿ ನೆನಪನ್ನು ಬೇಗನೆ ಮರೆಯಬಹುದು. ಆದರೆ ಹೊಸ ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ಎಂಟ್ರಿಕೊಡುತ್ತಿದ್ದಾರೆ.

ಇದರ ಜೊತೆಗೆ ಸಾಲು ಸಾಲು ಕ್ರಿಕೆಟ್ ಸರಣಿಗಳು ಟೀಮ್ ಇಂಡಿಯಾದ ಮುಂದಿದೆ.

Team India saaksha tv

ಪುರುಸೊತ್ತು ಇಲ್ಲದ ಹಾಗೇ ಟೀಮ್ ಇಂಡಿಯಾ ಕ್ರಿಕೆಟ್ ಆಡಬೇಕಿದೆ.

ಟೀಮ್ ಇಂಡಿಯಾ ನವೆಂಬರ್ 2021 ರಿಂದ ಜುಲೈ 2022 ರವರೆಗೆ ಆರು ಸರಣಿಗಳಲ್ಲಿ 6 ಟೆಸ್ಟ್, 9 ಏಕದಿನ ಮತ್ತು 21 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ.

ಇದರಲ್ಲಿ 4 ಸರಣಿ ಭಾರತದಲ್ಲಿ ನಡೆಯಲಿದ್ದು, 2 ಸರಣಿ ವಿದೇಶದಲ್ಲಿ ಜರುಗಲಿದೆ. ಇದರ ಜೊತೆಗೆ 10 ತಂಡಗಳನ್ನು ಒಳಗೊಂಡ ಐಪಿಎಲ್ ಕೂಡ ನಡೆಯಲಿದೆ.

ಟೀಮ್ ಇಂಡಿಯಾ ಶೆಡ್ಯೂಲ್

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿ
1 ನೇ T20I ಪಂದ್ಯ – 17 ನವೆಂಬರ್, ಜೈಪುರ
2 ನೇ T20I ಪಂದ್ಯ – 19 ನವೆಂಬರ್, ರಾಂಚಿ
3 ನೇ T20I ಪಂದ್ಯ – 21 ನವೆಂಬರ್, ಕೋಲ್ಕತ್ತಾ
1 ನೇ ಟೆಸ್ಟ್ – 25 ರಿಂದ 29 ನವೆಂಬರ್, ಕಾನ್ಪುರ
2 ನೇ ಟೆಸ್ಟ್ – 3 ರಿಂದ 7 ಡಿಸೆಂಬರ್, ಮುಂಬೈ

ಇಂಡಿಯಾ ಟೂರ್ ಆಫ್ ಸೌತ್ ಆಫ್ರಿಕಾ
1 ನೇ ಟೆಸ್ಟ್ – ಡಿಸೆಂಬರ್ 17 ರಿಂದ 21, ಜೋಹಾನ್ಸ್ಬರ್ಗ್
2 ನೇ ಟೆಸ್ಟ್ – ಡಿಸೆಂಬರ್ 26 ರಿಂದ 30, ಸೆಂಚುರಿಯನ್
3 ನೇ ಟೆಸ್ಟ್ – ಜನವರಿ 3 ರಿಂದ 7, ಕೇಪ್ ಟೌನ್
1 ನೇ ODI – 11 ನೇ ಜನವರಿ, ಪಾರ್ಲಿ
2 ನೇ ODI – 14 ನೇ ಜನವರಿ, ಕೇಪ್ ಟೌನ್
3 ನೇ ODI – 16 ಜನವರಿ, ಕೇಪ್ ಟೌನ್
1 ನೇ T20I – 19 ಜನವರಿ, ಕೇಪ್ ಟೌನ್
2 ನೇ T20I – 21 ಜನವರಿ, ಕೇಪ್ ಟೌನ್
3 ನೇ T20I – 23 ಜನವರಿ, ಕೇಪ್ ಟೌನ್
4 ನೇ T20I – 26 ಜನವರಿ, ಪಾರ್ಲಿ

ವೆಸ್ಟ್ಇಂಡೀಸ್ ತಂಡದ ಭಾರತ ಪ್ರವಾಸ
1 ನೇ ODI – 6 ಫೆಬ್ರವರಿ, ಅಹಮದಾಬಾದ್
2 ನೇ ODI – 9 ಫೆಬ್ರವರಿ, ಜೈಪುರ
3 ನೇ ODI – 12 ಫೆಬ್ರವರಿ, ಕೋಲ್ಕತ್ತಾ
1 ನೇ T20I- 15 ಫೆಬ್ರವರಿ, ಕಟಕ್
2 ನೇ T20I- 18 ಫೆಬ್ರವರಿ, ವಿಶಾಖಪಟ್ಟಣಂ
3 ನೇ T20I- 20 ಫೆಬ್ರವರಿ ತಿರುವನಂತಪುರ

ಶ್ರೀಲಂಕಾ ತಂಡದ ಭಾರತ ಪ್ರವಾಸ
1 ನೇ ಟೆಸ್ಟ್ – 25 ಫೆಬ್ರವರಿಯಿಂದ ಮಾರ್ಚ್ 1, ಬೆಂಗಳೂರು
2 ನೇ ಟೆಸ್ಟ್ – ಮಾರ್ಚ್ 5 ರಿಂದ 9, ಮೊಹಾಲಿ
1 ನೇ T20I- 13 ಮಾರ್ಚ್, ಮೊಹಾಲಿ
2 ನೇ T20I- 15 ಮಾರ್ಚ್, ಧರ್ಮಶಾಲಾ
3 ನೇ T20I- 18 ಮಾರ್ಚ್, ಲಕ್ನೋ

IPL 2022
ಏಪ್ರಿಲ್-ಮೇ 2022 (ತಾತ್ಕಾಲಿಕ ವೇಳಾಪಟ್ಟಿ)

ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸ
1ನೇ ಟಿ20 – ಜೂನ್ 9, ಚೆನ್ನೈ
2ನೇ ಟಿ20 – ಜೂನ್ 12, ಬೆಂಗಳೂರು
3ನೇ ಟಿ20- ಜೂನ್ 14, ನಾಗ್ಪುರ
4ನೇ ಟಿ20- ಜೂನ್ 17, ರಾಜ್ಕೋಟ್
5ನೇ ಟಿ20- ಜೂನ್ 19, ದೆಹಲಿ

ಇಂಡಿಯಾ ಟೂರ್ ಆಫ್ ಇಂಗ್ಲೆಂಡ್

ಟೆಸ್ಟ್ (ಮರು ನಿಗದಿಪಡಿಸಲಾದ ಪಂದ್ಯ) – ಜುಲೈ 1-5, ಬರ್ಮಿಂಗ್ಹ್ಯಾಮ್
1 ನೇ T20I- 7 ಜುಲೈ, ಸೌತಾಂಪ್ಟನ್
2 ನೇ T20I- 9 ಜುಲೈ, ಬರ್ಮಿಂಗ್ಹ್ಯಾಮ್
3 ನೇ T20I- 10 ಜುಲೈ, ನಾಟಿಂಗ್ಹ್ಯಾಮ್
1 ನೇ ODI- 12 ಜುಲೈ, ಲಂಡನ್
2ನೇ ODI- ಜುಲೈ 14 ಲಂಡನ್
3ನೇ ODI – ಜುಲೈ 17, ಮ್ಯಾಂಚೆಸ್ಟರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd