ಟೀಂ ಇಂಡಿಯಾದಲ್ಲಿ ‘ರಾರಾ’ ಜಿಸುತ್ತಿದೆ ಕನ್ನಡ K L Rahul Rahul dravid saaksha tv
ಕಾಲ ಒಂದಿತ್ತು. ಆಗ ಟೀಂ ಇಂಡಿಯಾದಲ್ಲಿ ಕನ್ನಡಿಗರದ್ದೇ ಅಬ್ಬರ, ಆರ್ಭಟ. 11 ಜನರ ತಂಡದಲ್ಲಿ ಕನಿಷ್ಠ ಐದಾರು ಮಂದಿ ಕನ್ನಡಿಗರೇ ಕಾಣಿಸಿಕೊಳ್ಳುತ್ತಿದ್ದರು.
ಬ್ಯಾಟಿಂಗ್, ಬೌಲಿಂಗ್, ಆಲ್ ರೌಂಡರ್ ವಿಭಾಗದಲ್ಲಿ ಕನ್ನಡಿಗರು ಟೀಂ ಇಂಡಿಯಾದ ಬೆನ್ನೆಲುಬಾಗಿದ್ದರು. ಹಾಗೇ ಟೀಂ ಇಂಡಿಯಾವನ್ನು ಕೂಡ ಮುನ್ನಡೆಸಿದ್ದಾರೆ.
ಬ್ಯಾಟಿಂಗ್ ನಲ್ಲಿ ರಾಹುಲ್ ದ್ರಾವಿಡ್ ದಿಗ್ಗಜರಾಗಿ ನಿಂತರೇ ಬೌಲಿಂಗ್ ನಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಟೀಂ ಇಂಡಿಯಾದ ದಂತಕಥೆಗಳಾಗಿದ್ದಾರೆ.
ಇದಾದ ಬಳಿಕ ಬ್ಯಾಟಿಂಗ್ ನಲ್ಲಿ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಗಳಾಗಿ ರಾಬಿನ್ ಉತ್ತಪ್ಪ ಬಂದರೂ ಮಿಂಚಲು ವಿಫಲರಾದರು.
ಇನ್ನು ಬೌಲಿಂಗ್ ವಿಭಾಗದಲ್ಲಿ ವಿನಯ್ ಕುಮಾರ್ ತುಸು ಕಾಲ ಟೀಂ ಇಂಡಿಯಾದಲ್ಲಿ ಶೈನ್ ಆದರು. ಆ ನಂತರ ಕೆಲ ವರ್ಷಗಳು ಟೀಂ ಇಂಡಿಯಾದಲ್ಲಿ ಕನ್ನಡರ ಸದ್ದು ಕೇಳಿಸಲಿಲ್ಲ.
ಆದ್ರೆ ಇದೀಗ.. ಮತ್ತೆ ಭಾರತೀಯ ಕ್ರಿಕೆಟ್ ನಲ್ಲಿ ಕನ್ನಡ ರಾರಾಜಿಸುತ್ತಿದೆ. ಹಲವು ವರ್ಷಗಳ ಬಳಿಕ ಟೀಂ ಇಂಡಿಯಾ ಗರ್ಭಗುಡಿಯಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ.
ಕನ್ನಡಿಗರು ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಟೆಸ್ಟ್, ಏಕದಿನ, ಟಿ 20 ಕ್ರಿಕೆಟ್ ನಲ್ಲಿ ಸದ್ಯ ಕನ್ನಡಿರಗರು ಮಿನುಗಲಾರಂಭಿಸಿದ್ದಾರೆ.
ರಾಕಿಂಗ್ ಸ್ಟಾರ್ ಕೆ.ಎಲ್.ರಾಹುಲ್ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಆಧಾರ ಸ್ತಂಭವಾಗಿದ್ದಾರೆ.
ವಿರಾಟ್, ರೋಹಿತ್ ಬಳಿಕ ಕೆ.ಎಲ್. ರಾಹುಲ್ ಟೀಂ ಇಂಡಿಯಾದ ಬ್ಯಾಟಿಂಗ್ ಬ್ರಹ್ಮಾಸ್ತ್ರವಾಗಿ ರೂಪುಗೊಂಡಿದ್ದಾರೆ.
ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಂಚಿದ್ದ ರಾಹುಲ್ ಬಳಿಕ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲೂ ಶೈನ್ ಆದರು.
ಸದ್ಯ ಟೀಂ ಇಂಡಿಯಾದಲ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲಿ ರಾಹುಲ್ ಟ್ರಂಪ್ ಕಾರ್ಡ್ ಆಗಿದ್ದಾರೆ. ಇನ್ನು ಟೆಸ್ಟ್ ನಲ್ಲಿ ಮಯಾಂಕ್ ಅಗರ್ ವಾಲ್ ಕಾಣಿಸಿಕೊಳ್ಳುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ವೇಗಿ ಪ್ರಸಿದ್ಧ್ ಕೃಷ್ಣ ಆಯ್ಕೆ ಆಗಿದ್ದಾರೆ,
ಇನ್ನು ಸದ್ಯ ಟೆಸ್ಟ್ ತಂಡದ ವೈಸ್ ಕ್ಯಾಪ್ಟನ್ ಆಗಿರುವ ಕೆ.ಎಲ್.ರಾಹುಲ್ ಗೆ ಹೊಸ ವರ್ಷ ಅದೃಷ್ಠ ತಂದಿದ್ದು, ಏಕದಿನ ಕ್ರಿಕೆಟ್ ನ ನಾಯಕರಾಗಿ ನೇಮಕಗೊಂಡಿದ್ದಾರೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 108 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ರಾಹುಲ್, ಅನಿರೀಕ್ಷಿತ ಬೆಳವಣಿಗೆಗಳಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಆಗಿದ್ದಾರೆ.
ಇದಲ್ಲದೇ ಸದ್ಯ ಟೀಂ ಇಂಡಿಯಾಗೆ ಕನ್ನಡಿಗರಾದ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾರೆ. ಇದು ಕೂಡ ಕನ್ನಡಿಗರಿಗೆ ಖುಷಿ ಕೊಟ್ಟಿದೆ.
ಒಟ್ಟಾರೆ ರಾಹುಲ್ ದ್ರಾವಿಡ್ ಮಾರ್ಗದರ್ಶದಲ್ಲಿ ಕೆ.ಎಲ್. ರಾಹುಲ್ ಟೀಂ ಇಂಡಿಯಾವನ್ನು ಲೀಡ್ ಮಾಡೋದನ್ನ ನೋಡಲು ಕನ್ನಡಿಗರು ಖಾತರರಾಗಿದ್ದಾರೆ.