ಮುಂದಿನ ಟಿ20 ವಿಶ್ವಕಪ್ ಗೆ ರೆಡಿಯಾಗಬೇಕಿದೆ ಟೀಂ ಇಂಡಿಯಾ

1 min read
T20 World Cup saaksha tv

2022ರ ಟಿ20 ವಿಶ್ವಕಪ್ಗೆ ಉಳಿದಿರೋದು 20 ಪಂದ್ಯ, 7 ಸರಣಿಯಲ್ಲಿ ನಿರ್ಧಾರವಾಗಬೇಕಿದೆ ಕಪ್ ಗೆಲ್ಲುವ ಟೀಮ್..!

‘ಯುಎಇನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿತ್ತು.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಗ್ರೂಪ್ ಹಂತದ ಆರಂಭಿಕ ಪಂದ್ಯಗಳನ್ನು ಕಳೆದುಕೊಂಡಿದ್ದು, ಟೀಮ್ ಇಂಡಿಯಾಕ್ಕೆ ವಿಶ್ವಕಪ್ನಿಂದ ಅರಂಭದಲ್ಲೇ ಗೇಟ್ಪಾಸ್ ಸಿಗುವಂತೆ ಮಾಡಿತು.

ಕೊನೆಯ 3 ಪಂದ್ಯಗಳನ್ನು ವಿರಾಟ್ ಬಳಗ ಅಬ್ಬರಿಸಿ ಗೆದ್ದರೂ ಅದರಿಂದ ಪ್ರಯೋಜನವಾಗಲಿಲ್ಲ.

ಆದರೆ ಈಗ ಏನಿದ್ದರೂ ಮುಂದಿನ ಟಿ20 ವಿಶ್ವಕಪ್ನತ್ತ ಟೀಮ್ ಇಂಡಿಯಾ ಗಮನ ಇಟ್ಟಿದೆ.

ಇನ್ನೊಂದು ವರ್ಷದಲ್ಲೇ ವಿಶ್ವಕಪ್ ಎದುರಾಗುವುದರಿಂದ ಕಪ್ ಗೆಲ್ಲುವ ತಂಡವನ್ನು ಕಟ್ಟಬೇಕಿದೆ.

ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಲ್ಲಿ ಬದಲಾವಣೆಗಳಾಗಿವೆ. ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿ ತ್ಯಜಿಸಿ ರೋಹಿತ್ಗೆ ಜವಾಬ್ದಾರಿ ಕೊಟ್ಟಿದ್ದಾರೆ.

T20 World Cup saaksha tv

ರಾಹುಲ್ ದ್ರಾವಿಡ್ ಕೋಚ್ ಆಗಿ ತಂಡ ಸೇರಿಕೊಂಡಿದ್ದಾರೆ. ಆದರೆ ಮುಂದಿನ ಅಕ್ಟೋಬರ್ ಒಳಗೆ ಟಿ20 ವಿಶ್ವಕಪ್ ಗೆಲ್ಲುವ ತಂಡ ಸಜ್ಜಾಗಬೇಕಿದೆ.

ಟಿ20 ವಿಶ್ವಕಪ್ ಪ್ರಿಪರೇಷನ್ ಈಗಿನಿಂದಲೇ ಆರಂಭವಾಗಿದೆ. ಪ್ರತೀ ಪಂದ್ಯವೂ ಟೀಮ್ ಇಂಡಿಯಾದ ಮತ್ತು ಆಟಗಾರರ ಸಾಮರ್ಥ್ಯ ಅಳೆಯಲು ವೇದಿಕೆ ಆಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ 7 ಟಿ20 ಸರಣಿಗಳನ್ನಾಡಲಿದೆ.

ಒಟ್ಟು 21 ಪಂದ್ಯಗಳ ಪೈಕಿ ಒಂದು ಪಂದ್ಯ ಜೈಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗಿದಿದೆ. ಹೀಗಾಗಿ ಇನ್ನುಳಿದಿರುವುದು ಕೇವಲ 20 ಪಂದ್ಯ ಮಾತ್ರ.

ಇದರಲ್ಲೇ ಕಪ್ ಗೆಲ್ಲುವ ತಂಡವನ್ನು ದ್ರಾವಿಡ್ ಮತ್ತು ರೋಹಿತ್ ಆಯ್ಕೆ ಮಾಡಿಕೊಳ್ಳಬೇಕಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿಯಂತಹ ಖ್ಯಾತ ಆಟಗಾರರು ಹೊರಗುಳಿದಿದ್ದಾರೆ.

ಯುವಕರಿಗೆ ಅವಕಾಶ ಸಿಕ್ಕಿದೆ. ಆದರೆ ಈ ಖ್ಯಾತನಾಮರು ತಂಡಕ್ಕೆ ವಾಪಾಸಾದ ಮೇಲೆ ಆಡುವ ತಂಡದ ಆಯ್ಕೆ ಹೇಗಿರಲಿದೆ ಅನ್ನುವುದು ಕುತೂಹಲ ಮೂಡಿಸಿದೆ.

ಯಾಕಂದರೆ ಯಾವ ಆಟಗಾರನ ಪಾತ್ರ ಏನು ಅನ್ನುವುದನ್ನು ಕೋಚ್ ಹಾಗೂ ಕ್ಯಾಪ್ಟನ್ ವಿವರಿಸಬೇಕಾಗುತ್ತದೆ.

ಈ ನಡುವೆ ಅವಕಾಶ ಸಿಕ್ಕಾಗಲೆಲ್ಲಾ ಮಿಂಚು ಹರಿಸುವ ಯುವ ಆಟಗಾರರು ಖ್ಯಾತ ಆಟಗಾರರು ತಂಡಕ್ಕೆ ವಾಪಾಸ್ ಆದಮೇಲೆ ಸ್ಥಾನ ಕಳೆದುಕೊಳ್ಳುತ್ತಾರೆ.

ಇದು ಅವರ ಆತ್ಮವಿಶ್ವಾದ ಮೇಲೆ ಪೆಟ್ಟುಕೊಡುತ್ತಿದೆ. ಹೀಗಾಗಿ ಯುವ ಆಟಗಾರರನ್ನು ಸೂಕ್ತವಾಗಿ ನೋಡಿಕೊಳ್ಳಬೇಕದ ಜವಾಬ್ದಾರಿ ಕೋಚ್ ಮೇಲಿದೆ.

ಒಟ್ಟಿನಲ್ಲಿ ಮುಂದಿರುವ 11 ತಿಂಗಳಲ್ಲಿ ದ್ರಾವಿಡ್ ಮತ್ತು ರೋಹಿತ್ ಜುಗಲ್ಬಂಧಿ ಹೇಗೆ ಕೆಲಸ ಮಾಡಲಿದೆ ಅನ್ನುವುದು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd