ಶ್ರೀಲಂಕಾ – ಭಾರತ ಏಕದಿನ ಮೊದಲ ಏಕದಿನ ಪಂದ್ಯ- ಟೀಮ್ ಇಂಡಿಯಾದ 11ರ ಬಳಗದ ಆಯ್ಕೆಯೇ ದೊಡ್ಡ ತಲೆನೋವು..!

1 min read
rahul dravid shikhar dhawan team india saakshatv

ಶ್ರೀಲಂಕಾ – ಭಾರತ ಏಕದಿನ ಮೊದಲ ಏಕದಿನ ಪಂದ್ಯ- ಟೀಮ್ ಇಂಡಿಯಾದ 11ರ ಬಳಗದ ಆಯ್ಕೆಯೇ ದೊಡ್ಡ ತಲೆನೋವು..!

team india saakshatv srilanka ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣ ರೆಡಿಯಾಗಿದೆ. ಜುಲೈ 18ರಂದು ಅಂದ್ರೆ ಇಂದು ಶಿಖರ್ ಧವನ್ ಸಾರಥ್ಯದ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನದ ಟೀಮ್ ಇಂಡಿಯಾ ಆತಿಥೆಯ ಲಂಕಾದ ಸವಾಲಿಗೆ ದಿಟ್ಟ ಉತ್ತರವನ್ನು ನೀಡಲು ಪ್ಲಾನ್ ಮಾಡಿಕೊಂಡಿದೆ.
ಟೀಮ್ ಇಂಡಿಯಾದಲ್ಲಿ ಆರು ಮಂದಿ ಹೊಸಬರಿದ್ದಾರೆ. ಪೈಕಿ ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಅನ್ನೋ ಕುತೂಹಲವೂ ಇದೆ. ಶಿಖರ್ ಧವನ್, ಪೃಥ್ವಿ ಶಾ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ನಿತೀಶ್ ರಾಣಾ, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಜೊತೆ ಮನೀಷ್ ಪಾಂಡೆ ಕೂಡ ಪೈಪೊಟಿಯಲ್ಲಿದ್ದಾರೆ. ಆದ್ರೂ ದೇವದತ್ ಪಡಿಕ್ಕಲ್, ಸೂರ್ಯಕುಮಾರ್ ಯಾದವ್ ಜೊತೆ ಮನಿಷ್ ಪಾಂಡೆಗೆ ಅವಕಾಶ ನೀಡಿದ್ರೂ ನೀಡಬಹುದು.
ಇನ್ನು ವಿಕೆಟ್ ಕೀಪಿಂಗ್ ನಲ್ಲಿ ಸಂಜು ಸಾಮ್ಸನ್ ಮತ್ತು ಇಶಾನ್ ಕಿಶಾನ್ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ಕೆ. ಗೌತಮ್ ಜೊತೆಗೆ ಅನುಭವಿ ಯುಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಪೈಕಿ ಇಬ್ಬರು ಕಣಕ್ಕಿಳಿಯಬಹುದು. ಹಾಗೇ ವರುಣ್ ಚಕ್ರವರ್ತಿ ಮತ್ತು ರಾಹುಲ್ team india saakshatv srilanka ಚಾಹರ್ ಕೂಡ ರೇಸ್ ನಲ್ಲಿದ್ದಾರೆ. ಇನ್ನು ವೇಗಿಗಳ ಪೈಕಿ ಭುವಿಗೆ ದೀಪಕ್ ಚಾಹರ್ ಸಾಥ್ ನೀಡುವ ಸಾಧ್ಯತೆಗಳೇ ಹೆಚ್ಚು. ಮೂರನೇ ವೇಗಿಯಾಗಿ ಚೇತನ್ ಸಕಾರಿಯಾ ಅವಕಾಶ ಪಡೆದ್ರೂ ಅಚ್ಚರಿ ಇಲ್ಲ. ಅಲ್ಲದೆ ನವದೀಪ್ ಸೈನಿ ಕೂಡ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಟೀಮ್ ಇಂಡಿಯಾದ ಸಂಭವನೀಯ ತಂಡ – ಶಿಖರ್ ಧವನ್, ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಇಶಾನ್ ಕಿಶಾನ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಯುಜುವೇಂದ್ರ ಚಾಹಲ್, ಕೃನಾಲ್ ಪಾಂಡ್ಯ /ಕೆ. ಗೌತಮ್.- (ರುತುರಾತ್ ಗಾಯಕ್ವಾಡ್, ನಿತೀಶ್ ರಾಣಾ, ಸಂಜು ಸಾಮ್ಸನ್, ರಾಹುಲ್ ಚಾಹರ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಚೇತನ್ ಸಕಾರಿಯಾ, ನವದೀಪ್ ಸೈನಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd