ಭಾರತ -ಇಂಗ್ಲೆಂಡ್ ಮೊದಲ ಟಿ-ಟ್ವೆಂಟಿ- ಟೀಮ್ ಇಂಡಿಯಾದ ಹನ್ನೊಂದರ ಬಳಗದಲ್ಲಿ ಯಾರಿರಬೇಕು… !
teamindia england t-20cricket
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ-ಟ್ವೆಂಟಿ ಪಂದ್ಯ ಮಾರ್ಚ್ 12 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಟೆಸ್ಟ್ ಸರಣಿಯನ್ನು ಗೆದ್ದಿರುವ ಟೀಮ್ ಇಂಡಿಯಾ ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಆದ್ರೆ ಇಂಗ್ಲೆಂಡ್ ಪರಿಸ್ಥಿತಿ ಭಿನ್ನವಾಗಿದೆ. ಟೆಸ್ಟ್ ಸರಣಿಯ ಹೀನಾಯ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳುವ ಉಮೇದಿನಲ್ಲಿದೆ ಇಂಗ್ಲೆಂಡ್ ತಂಡ.
ಇಯಾನ್ ಮೊರ್ಗಾನ್ ಸಾರಥ್ಯದ ಇಂಗ್ಲೆಂಡ್ ತಂಡ ಸದ್ಯ ವಿಶ್ವದ ನಂಬರ್ ವನ್ ಟಿ-ಟ್ವೆಂಟಿ ತಂಡವಾಗಿದೆ. ಹಾಗೇ ಟೀಮ್ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಟಿ-ಟ್ವೆಂಟಿ ಸರಣಿ ವಿಶ್ವದ ಎರಡು ಬಲಿಷ್ಠ ತಂಡಗಳ ಪ್ರತಿಷ್ಠೆಯ ಪಣವಾಗಿದೆ. ಈ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ 40 ಸಾವಿರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.
ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಜೊತೆ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸುವುದು ಪಕ್ಕಾ ಆಗಿದೆ. ಮೊದಲ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಆನಂತರ ಶ್ರೇಯಸ್ ಅಯ್ಯರ್, ಹಾಗೇ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಥಾಕೂರ್, ಅಕ್ಸರ್ ಪಟೇಲ್/ಯುಜುವೇಂದ್ರ ಚಾಹಲ್, ನಟರಾಜನ್, ಭುವನೇಶ್ವರ್ ಕುಮಾರ್ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಬಹುದು.
ಇನ್ನು ಇಂಗ್ಲೆಂಡ್ ತಂಡದಲ್ಲಿ ಇಯಾನ್ ಮೊರ್ಗಾನ್, ಡೇವಿಡ್ ಮಲಾನ್, ಜೋಸ್ ಬಟ್ಲರ್, ಜೋನಿ ಬೇರ್ ಸ್ಟೋವ್, ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕುರನ್, ಮೊಯಿನ್ ಆಲಿ, ಟಾಮ್ ಕುರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚೆರ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಟೀಮ್ ಇಂಡಿಯಾ – ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಇಶಾನ್ ಕಿಶನ್, ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ಟೇವಾಟಿಯಾ, ಟಿ. ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ನವದೀಪ್ ಸೈನಿ, ಶಾರ್ದೂಲ್ ಥಾಕೂರ್.
ಇಂಗ್ಲೆಂಡ್ ತಂಡ
ಇಯಾನ್ ಮೊರ್ಗಾನ್, ಮೊಯಿನ್ ಆಲಿ, ಜೋಫ್ರಾ ಆರ್ಚೆರ್.ಜೋನಿ ಬೇರ್ ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಟಾಮ್ ಕುರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‍ಸ್ಟೋನ್, ಡೇವಿಡ್ ಮಲಾನ್, ಆದೀಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸಿ ಟೊಪ್ಲೆ, ಮಾರ್ಕ್ ವುಡ್.
#teamindia #england #t-20cricket #narendramodistadium#india-england #saakshatv