ಟಿ-20 ಸರಣಿಗೆ ನ್ಯೂಜಿಲೆಂಡ್ ತಂಡಕ್ಕೆ ಟೀಮ್ ಸೌಥಿ ನಾಯಕ
ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ-20 ಪಂದ್ಯ ನವೆಂಬರ್ 17ರಂದು ಜೈಪುರದಲ್ಲಿ ನಡೆಯಲಿದೆ.
ಆದ್ರೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮನ್ಸ್ ಅವರು ಟಿ-ಟ್ವೆಂಟಿ ಸರಣಿಯಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಟೆಸ್ಟ್ ಸರಣಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನಲೆಯಲ್ಲಿ ವಿಲಿಯಮ್ಸನ್ ಅವರು ಚುಟುಕು ಕ್ರಿಕೆಟ್ ಗೆ ವಿಶ್ರಾಂತಿ ಬಯಸಿದ್ದಾರೆ.
ಹೀಗಾಗಿ ನ್ಯೂಜಿಲೆಂಡ್ ತಂಡವನ್ನು ವೇಗಿ ಟೀಮ್ ಸೌಥಿ ಅವರು ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಮೂರು ಟಿ- 20 ಪಂದ್ಯ ಗಳ ಸರಣಿ ನಡೆಯಲಿದೆ. ಬಳಿಕ ಟೆಸ್ಟ್ ಸರಣಿ ನಡೆಯಲಿದೆ.
ನವೆಂಬರ್ 25ರಿಂದ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಟೀಮ್ ಸೌಥಿ, ಕೈಲ್ ಜಾಮಿನ್ಸನ್, ಡೆರಿಲ್ ಮಿಟ್ಚೆಲ್, ಗ್ಲೇನ್ ಫಿಲಿಪ್ಸ್ ಅವರು ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಟೆಸ್ಟ್ ತಂಡದಲ್ಲಿ ರಾಸ್ ಟೇಲರ್, ಟಾಮ್ ಲಾಥಮ್ ಮತ್ತು ನೇಲ್ ವಾಗ್ನೆರ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ನಲ್ಲಿ ಆಡತ್ತಿಲ್ಲ.
ಡಿಸೆಂಬರ್ 3ರಿಂದ ಮುಂಬೈ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ.
ಜೊತೆಗೆ ತಂಡದ ಸಾರಥ್ಯವನ್ನು ಕೂಡ ವಹಿಸಿಕೊಳ್ಳಲಿದ್ದಾರೆ.
ಈ ನಡುವೆ, ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಜಸ್ಪ್ರಿತ್ ಬೂಮ್ರಾ ಅವರಿಗೆ ಟೆಸ್ಟ್ ಸರಣಿಗೆ ವಿಶ್ರಾಂತಿ ನೀಡಲಾಗಿದೆ.









