ADVERTISEMENT
Wednesday, January 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆವೆ ಮಣ್ಣಿನ ಅಂಗಣದಲ್ಲಿ ಸುರಿಯಿತ್ತು ಕಣ್ಣೀರಧಾರೆ.. ಪ್ಯಾರಿಸ್‍ನಲ್ಲಿ ಸ್ಪೇನ್ ಗೂಳಿಯ ಪ್ರೀತಿ-ಪ್ರೇಮ-ಪ್ರಣಯ..!

Tears Fell on the Muddy Courtyard… A Tale of Love, Passion, and Romance Between Spain and Paris!

Shwetha by Shwetha
May 26, 2025
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಆವೆ ಮಣ್ಣಿನ ಅಂಗಣದಲ್ಲಿ ಸುರಿಯಿತ್ತು ಕಣ್ಣೀರಧಾರೆ.. ಪ್ಯಾರಿಸ್‍ನಲ್ಲಿ ಸ್ಪೇನ್ ಗೂಳಿಯ ಪ್ರೀತಿ-ಪ್ರೇಮ-ಪ್ರಣಯ..!

ರಫೆಲ್ ನಡಾಲ್..
ಅದೇನೋ ಗೊತ್ತಿಲ್ಲ.. ಈ ಸ್ಪೇನ್ ಗೂಳಿಗೆ ಪ್ಯಾರಿಸ್‍ನ ರೋಲ್ಯಾಂಡ್ ಗ್ಯಾರೋಸ್‍ನ ಆವೆ ಮಣ್ಣಿನ ಅಂಗಣದಲ್ಲಿ ಧೂಳು ಎಬ್ಬಿಸುವುದು ಅಂದ್ರೆ ಏನೋ ಒಂಥರಾ ಖುಷಿ. ಅಷ್ಟೇ ಅಲ್ಲ, ತಾನೂ ಭಾವುಕನಾಗಿ, ತನ್ನ ಅಭಿಮಾನಿಗಳನ್ನು ಭಾವುಕರನ್ನಾಗಿಸುವುದು ಸರಿ ಸುಮಾರು 20 ವರ್ಷಗಳಿಂದ ಮಮೂಲಿಯಾಗಿಬಿಟ್ಟಿದೆ.

Related posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

January 21, 2026
ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

January 21, 2026

ಕಳೆದ ಎರಡು ದಶಕಗಳಲ್ಲಿ 14 ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು, ಕಿಂಗ್ ಆಫ್ ಕ್ಲೇ ಕೋಟ್ರ್À ಎಂದು ಬಿರುದು ಪಡೆದುಕೊಂಡಿರುವುದು ಸಹ ಈಗ ಇತಿಹಾಸ. ಒಟ್ಟು 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ರಫೆಲ್ ನಡಾಲ್, ಕಳೆದ ವರ್ಷ ತನ್ನ ವರ್ಣರಂಜಿತ ಟೆನಿಸ್ ಬದುಕಿಗೆ ವಿದಾಯ ಹೇಳಿದ್ದರು. ರಫೆಲ್ ನಡಾಲ್ ವಿದಾಯ ಹೇಳಿದಾಗ ಅವರ ಅಭಿಮಾನಿಗಳು ಕಣ್ಣೀರು ಸುರಿಸಿ ಭಾವುಕರಾಗಿದ್ದರು. ಇದೀಗ ರಫಾ, ಅಭಿಮಾನಿಗಳನ್ನು ಮತ್ತೊಮ್ಮೆ ಭಾವುಕರನ್ನಾಗಿಸಿದ್ದಾರೆ. ಆದ್ರೆ ಈ ಬಾರಿ ತನ್ನ ಆಟದಿಂದ ಅಲ್ಲ. ತನ್ನ ಉಪಸ್ಥಿತಿಯಿಂದ ಎಂಬುದು ವಿಶೇಷ.

ಹೌದು, ಈ ವರ್ಷದ ಪ್ರತಿಷ್ಠಿತ ಫ್ರೆಂಚ್ ಓಪನ್ ಟೂರ್ನಿ ಆರಂಭವಾಗಿದೆ. ಪ್ರತಿ ವರ್ಷವೂ ಟೆನಿಸ್ ಅಭಿಮಾನಿಗಳು ಪ್ಯಾರಿಸ್‍ನ ರೋಲ್ಯಂಡ್ ಗ್ಯಾರೋಸ್ ಅಂಗಣದಲ್ಲಿ ರಫೆಲ್ ಆಟವನ್ನು ಕಣ್ತುಂಬಿಕೊಳ್ಳಲು ಟಿಕೆಟ್ ಬುಕ್ ಮಾಡುತ್ತಿದ್ದರು. ಆದ್ರೆ ಈ ವರ್ಷದಿಂದ ರಫಾ ಆಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ ರಾಫಾ ವೃತ್ತಿಪರ ಟೆನಿಸ್ ಆಡಲ್ಲ. ಕೈಯಲ್ಲಿ ಟೆನಿಸ್ ರ್ಯಾಕೆಟ್ ಹಿಡಿಯಲ್ಲ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಕಾರಣ ಆವೆ ಮಣ್ಣಿನ ಅಂಗಣದಲ್ಲಿ ರಫೆಲ್ ಆಟವನ್ನು ನೋಡುವುದು ಕಣ್ಣಿಗೆ ಹಬ್ಬವಾದ್ರೆ, ಮೈಮನಕ್ಕೆ ಪ್ರತಿ ಕ್ಷಣವೂ ರೋಮಾಂಚನವನ್ನುಂಟು ಮಾಡುತ್ತಿತ್ತು.

ಅಂದ ಹಾಗೇ, ಈ ವರ್ಷವೂ ರಫೆಲ್ ನಡಾಲ್ ತನ್ನ ಪ್ರೀತಿಯ ರೋಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಟೆನಿಸ್ ಕಿಟ್‍ನೊಂದಿಗೆ ಅಲ್ಲ. ಬದಲಾಗಿ ಕಪ್ಪು ಸೂಟ್ -ಬೂಟ್ ಹಾಕೊಂಡು ಫಿಲಿಪ್ ಚಾಟ್ರಿಯಾರ್ ಕೋಟ್Àರ್À ಸೆಂಟರ್‍ನಲ್ಲಿ ಜಂಟಲ್‍ಮ್ಯಾನ್‍ನಂತೆ ಕಂಗೊಳಿಸುತ್ತಿದ್ದರು. ಸಹಜವಾಗಿ ಟೆನಿಸ್ ಕ್ರೀಡಾಂಗಣ ಅಂದ್ರೆ ಅಭಿಮಾನಿಗಳ ಭರಾಟೆ, ಕಿರುಚಾಟ, ಸದ್ದುಗದ್ದಲಗಳಿರುವುದಿಲ್ಲ. ಹೆಚ್ಚು ಅಂದ್ರೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡ್ತಾರೆ ಅಷ್ಟೇ. ಆಗೊಮ್ಮೆ ಹೀಗೊಮ್ಮೆ ಅಲ್ಲಲ್ಲಿ ಕಿರುಚಾಟಗಳು ಕೇಳಿಬರುವುದುಂಟು. ಆಟಗಾರರ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯನ್ನು ಸೈಲೆಂಟಾಗಿ ಪ್ರೇಕ್ಷಕರು ನೋಡುತ್ತಿರುತ್ತಾರೆ.

ಆದ್ರೆ ಈ ಬಾರಿ ಟೆನಿಸ್ ಕ್ರೀಡಾಂಗಣದ ಶಿಸ್ತು ಸಾಂಪ್ರದಾಯ ಸ್ವಲ್ಪ ಸಮಯ ಮುರಿಬೀಳುವಂತೆ ಮಾಡಿದ್ದು ರಫೆಲ್ ನಡಾಲ್ ಅವರ ಎಂಟ್ರಿ. ಭರ್ತಿಯಾಗಿದ್ದ ಕ್ರೀಡಾಂಗಣದಲ್ಲಿ ರಾಫಾ.. ರಾಫಾ..ಎಂಬ ಘೋಷಣೆಗಳು ಮುಗಿಲು ಮುಟ್ಟುವಂತಿದ್ದವು. ಮರ್ಸಿ ರಾಫಾ (ಧನ್ಯವಾದ ರಾಫಾ) ಎಂದು ಕೆಂಪು ಮತ್ತು ಬಿಳಿ ಬಣ್ಣದ ಟಿ-ಶಟ್ರ್Àಗಳನ್ನು ಹಾಕೊಂಡಿದ್ದ ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿರಲಿಲ್ಲ. ವಿಶ್ವ ಟೆನಿಸ್‍ನ ಎವರ್‍ಗ್ರೀನ್ ಆಟಗಾರನಿಗೆ ಫ್ರೆಂಚ್ ಓಪನ್ ಆಯೋಜಕರು ಕೂಡ ವಿಶೇಷವಾಗಿ ಸನ್ಮಾನ ಮಾಡಿದ್ದರು. ಫಿಲಿಪ್ ಚಾಟ್ರಿಯಾರ್ ಕೋಟ್Àರ್Àನಲ್ಲಿ ನಡಾಲ್ ಹೆಸರು, ನಡಾಲ್ ಅವರ ಹೆಜ್ಜೆ ಗುರುತುಗಳ ನಾಮ ಫಲಕವನ್ನು ಕೂಡ ಇದೇ ವೇಳೆ ಅನಾವರಣಗೊಳಿಸಲಾಯ್ತು. ಬಳಿಕ ಆವೆ ಮಣ್ಣಿನ ಸಾಧನೆಯ ಮೂರು ನಿಮಿಷಗಳ ಕಿರುಚಿತ್ರವನ್ನು ನೋಡಿದಾಗ ನಡಾಲ್ ಚಿಕ್ಕ ಮಗುವಿನಂತೆ ಅಳುತ್ತಿದ್ದರು.

ಮರ್ಸಿ ಬ್ಯೂಕಪ್ (ಧನ್ಯವಾದಗಳು) ಎಂದು ಮಾತು ಶುರು ಮಾಡಿದ ರಫೆಲ್, ತನ್ನ ಟೆನಿಸ್ ಬದುಕಿನ ಏಳುಬೀಳುಗಳು, ಸಾಧನೆ, ಪ್ರಶಸ್ತಿ, ಗಾಯ, ಸೋಲು, ಗೆಲುವು, ಹೋರಾಟ ಹೀಗೆ ಪ್ರತಿಯೊಂದು ವಿಷ್ಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ್ರು. ಇದೇ ವೇಳೆ ಪತ್ನಿ, ಮಗ ಹಾಗೂ 90 ವಯಸ್ಸು ದಾಟಿದ ರಫೆಲ್ ಅವರ ಅಜ್ಜಿಯಂದಿರು ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ್ರು. ಇದೇ ವೇಳೆ, ತನ್ನ ಟೆನಿಸ್ ಬದುಕನ್ನು ರೂಪಿಸಿದ್ದ ಚಿಕ್ಕಪ್ಪ ಟೋನಿ ಅವರನ್ನು ನಡಾಲ್ ಮನದುಂಬಿ ನೆನಪಿಸಿಕೊಂಡ್ರು.

ಇಷ್ಟು ವರ್ಷ ರಫೆಲ್ ನಡಲಾ ಅವರ ಸೋಲು ಗೆಲುವುಗಳನ್ನು ಕಂಡು ಭಾವುಕರಾಗುತ್ತಿದ್ದ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ರಫೆಲ್ ನಡಾಲ್ ಅವರ ಪ್ರತಿ ಮಾತುಗಳನ್ನು ಕೇಳಿಕೊಂಡು ಕಣ್ಣೀರು ಸುರಿಸುತ್ತಿದ್ದರು. ಇದೇ ವೇಳೆ ಅಲ್ಲಿ ಸಮಾಗಮವಾಗಿದ್ದು ಬಿಗ್-4 ಟೆನಿಸ್ ದಿಗ್ಗಜರು. ಭಾರತ ಕ್ರಿಕೆಟ್‍ನಲ್ಲಿ ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್ ಅವರನ್ನು ಬಿಗ್-4 ಎಂದು ಕರೆಯುತ್ತಿದ್ದರು. ಹಾಗೇ ಟೆನಿಸ್ ಜಗತ್ತಿನಲ್ಲಿ ಫೆಡರರ್, ಜಾಕೊವಿಕ್, ಆಂಡಿ ಮುರ್ರೆ ಮತ್ತು ನಡಾಲ್ ಎಂಬ ಬಿಗ್-4 ಜೊತೆಯಾಗಿ ಅಂಗಣದಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳ ಖುಷಿ ಹೇಗಿರಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಕಳೆದ 25 ವರ್ಷಗಳಲ್ಲಿ ಟೆನಿಸ್ ಜಗತ್ತನ್ನು ಆಳುತ್ತಿದ್ದದ್ದೇ ಈ ತ್ರಿಮೂರ್ತಿಗಳು. ಇವರಿಗೆ ಮುರ್ರೆ ಕೂಡ ಪೈಪೋಟಿ ನೀಡುತ್ತಿದ್ದರು.
ಕೊನೆಯದಾಗಿ ರಫೆಲ್ ನಡಾಲ್, ಫ್ರಾನ್ಸ್ ಮತ್ತು ಪ್ಯಾರಿಸ್‍ಗೂ ಧನ್ಯವಾದ ಹೇಳಿದ್ರು. ಈ ಪ್ರೀತಿಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನಿಮ್ಮ ಪ್ರೀತಿ, ಅಭಿಮಾನದಿಂದ ನಾನು ನಿಮ್ಮವನೇ ಅಂದಾಗ ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಅಪ್ರತಿಮ ಆಟಗಾರರನಿಗೆ ಗೌರವ ಸಲ್ಲಿಸಿರುವುದು ಸ್ಮರಣೀಯವಾಗಿತ್ತು.

ಇಷ್ಟು ದಿನ ಆಟವಾಡುತ್ತಿದ್ದ ನಡಾಲ್ ಅವರ ಬೆವರಿನ ಹನಿಗಳು ರೋಲ್ಯಾಂಡ್ ಗ್ಯಾರೋನ ಆವೆ ಮಣ್ಣಿನ ಅಂಗಣಕ್ಕೆ ಬೀಳುತ್ತಿದ್ದವು. ಆದ್ರೆ ಈ ಭಾರಿ ಅಭಿಮಾನಿಗಳ ಅಭಿಮಾನಕ್ಕೆ ರಫೆಲ್ ನಡಾಲ್‍ನ ಕಣ್ಣೀರು ಹನಿ ಹನಿಯಾಗಿ ಬೀಳುತ್ತಿದ್ದಾಗ, ತಮಗೆ ಗೊತ್ತಿಲ್ಲದಂತೆ ಅಭಿಮಾನಿಗಳ ಕಣ್ಣುಗಳು ಕೂಡ ಒದ್ದೆಯಾಗಿದ್ದವು. ಮರ್ಸಿ ಬ್ಯೂಕಪ್ ರಾಫಾ.. ಥ್ಯಾಂಕ್ಯೂ ರಫೆಲ್ ನಡಾಲ್…!

ಸನತ್ ರೈ

ShareTweetSendShare
Join us on:

Related Posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

by Shwetha
January 21, 2026
0

ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಸಾಂಪ್ರದಾಯಿಕ ವಸ್ತ್ರ ಧಾರಣೆ ಕಡ್ಡಾಯವಾಗಲಿದೆ. ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಮಠದ ಗೌರವವನ್ನು ಕಾಪಾಡುವ...

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

by Shwetha
January 21, 2026
0

2026ರ ಮಹಿಳಾ ಪ್ರೀಮಿಯರ್ ಲೀಗ್‌ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ಸರಣಿ ಮುಂದುವರೆದಿದೆ. ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ಆಡುತ್ತಿರುವ RCB ಈವರೆಗೆ...

ಶಬರಿಮಲೆ ತೀರ್ಥಯಾತ್ರೆ  ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

ಶಬರಿಮಲೆ ತೀರ್ಥಯಾತ್ರೆ ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

by Shwetha
January 21, 2026
0

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಈ ವರ್ಷದ ವಾರ್ಷಿಕ ತೀರ್ಥಯಾತ್ರೆಯ ಋತು ನಿನ್ನೆ ಭಕ್ತಿಭಾವಪೂರ್ಣವಾಗಿ ಅಂತ್ಯಗೊಂಡಿದೆ. ಸಾವಿರಾರು ಭಕ್ತರ ಸಾಕ್ಷಿಯಾಗಿ, ಸಾಂಪ್ರದಾಯಿಕ...

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

by Shwetha
January 21, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ದಲಿತ...

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

by Shwetha
January 21, 2026
0

ಬೆಂಗಳೂರು: ಪೊಲೀಸ್ ಇಲಾಖೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪಕ್ಕೆ ಗುರಿಯಾಗಿರುವ ಸಿಐಡಿ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram