ಚಾಮರಾಜನಗರ : ಜಿಲ್ಲೆಯ ಹೆಚ್.ಮೂಕಳ್ಳಿ ಹತ್ತಿರ ಭೋಗಪುರದ ಹೊರವಲಯದಲ್ಲಿ ಲಘು ವಿಮಾನ (Jet Crash) ಪತನಗೊಂಡು ಉರಿದಿತ್ತು. ಇದಕ್ಕೆ ತಾಂತ್ರಿಕ ದೋಷವೇ (Technical Fault) ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನ HAL ನಿಂದ ಹೊರಟಿದ್ದ ಲಘು ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಪತನಗೊಂಡಿತ್ತು. ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಹೆಚ್‌ಎಎಲ್‌ನ ಸೇನಾ ಹೆಲಿಕಾಪ್ಟರ್‌ಗಳು ಪೈಲಟ್ ಗಳಾದ ತೇಜ್ ಪಾಲ್ ಹಾಗೂ ಭೂಮಿಕಾ ಅವರನ್ನು ಏರ್‌ಲಿಫ್ಟ್ ಮೂಲಕ ಸಾಗಿಸಲಾಗಿದೆ. ಪೈಲಟ್ ಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ವಿಂಗ್ ಕಮಾಂಡರ್ ತೇಜ್‌ಪಾಲ್ ತರಬೇತುದಾರರಾಗಿದ್ದು, ಭೂಮಿಕಾ ತರಬೇತಿ ಪಡೆಯುತ್ತಿದ್ದ ಪೈಲಟ್ ಆಗಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 12:20ರ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ವಿಮಾನ ಪತನಗೊಂಡಿದೆ. ಪೈಲಟ್ ಗಳು ವಿಮಾನ ಪತನವಾದ 2 ಕಿ.ಮೀ ದೂರದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.