ADVERTISEMENT
Sunday, July 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ತಾಂತ್ರಿಕ ವೈಫಲ್ಯ, ಆಡಳಿತಾತ್ಮಕ ಅವ್ಯವಸ್ಥೆ: ಜಾತಿ ಗಣತಿ ಮಹಾಗೊಂದಲದಲ್ಲಿ! ಸರ್ಕಾರದ ಹಠಕ್ಕೆ ಜನರ ಆಕ್ರೋಶ

Technical failure, administrative chaos: Caste census in a state of chaos!

Shwetha by Shwetha
September 24, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಆರಂಭವಾದ ಎರಡೇ ದಿನದಲ್ಲಿ ತಾಂತ್ರಿಕ ದೋಷಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳಿಂದಾಗಿ ಸಂಪೂರ್ಣ ಹಳಿ ತಪ್ಪಿದೆ. ಮೊಬೈಲ್ ಆ್ಯಪ್‌ನ ಕಿರಿಕಿರಿ, ಓಟಿಪಿ ಬಾರದ ಗೋಳು, ತರಬೇತಿಯ ಕೊರತೆ ಮತ್ತು ಸಮರ್ಪಕ ಯೋಜನೆಯಿಲ್ಲದೆ ಸಮೀಕ್ಷಕರು ಹೈರಾಣಾಗಿದ್ದರೆ, ಸಾರ್ವಜನಿಕರಲ್ಲಿ ಅಸಹನೆ ಮತ್ತು ಆಕ್ರೋಶ ಮಡುಗಟ್ಟಿದೆ.

ಹಳ್ಳ ಹಿಡಿದ ತಂತ್ರಜ್ಞಾನ, ಪರದಾಡುತ್ತಿರುವ ಸಿಬ್ಬಂದಿ

Related posts

janma-nakshatra-adhipati-puja-significance-remedies

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ?

July 25, 2026
devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

July 25, 2026

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಆರಂಭವಾದ ಈ ಬೃಹತ್ ಕಾರ್ಯಕ್ರಮವು, ತಾಂತ್ರಿಕ ಸಮಸ್ಯೆಗಳಿಂದಾಗಿ ಕುಂಟುತ್ತಾ ಸಾಗುತ್ತಿದೆ. ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್‌ಗೆ ಓಟಿಪಿ ಬಾರದಿರುವುದು ಸಮೀಕ್ಷೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿಯೊಬ್ಬ ಸಮೀಕ್ಷಕರಿಗೆ ಸುಮಾರು 50 ಮನೆಗಳನ್ನು ನಿಗದಿಪಡಿಸಲಾಗಿದ್ದು, ದಿನಕ್ಕೆ ಕನಿಷ್ಠ 10 ಮನೆಗಳ ಸಮೀಕ್ಷೆ ಮುಗಿಸಬೇಕಾದ ಒತ್ತಡವಿದೆ. ಆದರೆ, ಗಂಟೆಗಟ್ಟಲೆ ಕಾದರೂ ಓಟಿಪಿ ಬಾರದೆ, ಮೊಬೈಲ್ ಆ್ಯಪ್ ಪದೇ ಪದೇ ಹ್ಯಾಂಗ್ ಆಗುತ್ತಿರುವುದರಿಂದ ಒಂದೇ ಮನೆಯ ಸಮೀಕ್ಷೆ ಮುಗಿಸಲು ಹಲವು ಗಂಟೆಗಳು ಬೇಕಾಗುತ್ತಿವೆ. ಇದರಿಂದಾಗಿ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಇನ್ನೂ ಶುರುವಾಗಿಲ್ಲ ಗಣತಿ!

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 20ಕ್ಕೂ ಹೆಚ್ಚು ಪಾಲು ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಸಮೀಕ್ಷೆ ಆರಂಭವಾಗಿಲ್ಲದಿರುವುದು ಸರ್ಕಾರದ ಯೋಜನಾ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಹುತೇಕ ಸಮೀಕ್ಷಕರಿಗೆ ಇನ್ನೂ ತರಬೇತಿಯನ್ನೇ ನೀಡಿಲ್ಲ. ಈಗಾಗಲೇ ದಸರಾ ರಜೆ ಆರಂಭಗೊಂಡಿದ್ದು, ಬಹುತೇಕ ಜನರು ಪ್ರವಾಸ ಅಥವಾ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸುವುದು ದುಸ್ತರವಾಗಿದ್ದರೂ, ಹಿಂದುಳಿದ ವರ್ಗಗಳ ಆಯೋಗವು ಈ ಬಗ್ಗೆ ಗಮನಹರಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ.

ಹಿಂದಿನ ತಪ್ಪುಗಳಿಂದ ಪಾಠ ಕಲಿಯದ ಸರ್ಕಾರ

ಈ ಹಿಂದಿನ ನ್ಯಾ. ನಾಗಮೋಹನದಾಸ್ ಆಯೋಗ ಮತ್ತು ಕಾಂತರಾಜು ಆಯೋಗದ ಸಮೀಕ್ಷೆಗಳ ವೇಳೆಯಲ್ಲೂ ಇದೇ ರೀತಿಯ ಅವ್ಯವಸ್ಥೆಗಳು ಮರುಕಳಿಸಿದ್ದವು. ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ, ದೂರವಾಣಿಯಲ್ಲೇ ಮಾಹಿತಿ ಪಡೆದು ವರದಿ ಸಲ್ಲಿಸಿದ ಉದಾಹರಣೆಗಳಿವೆ. ಸುಮಾರು 175 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾದ ಕಾಂತರಾಜು ಆಯೋಗದ ವರದಿಯು 10 ವರ್ಷ ಕಳೆದರೂ ಅನುಷ್ಠಾನಗೊಳ್ಳದೆ ಮೂಲೆಗುಂಪಾಗಿದೆ. ಈಗಲೂ ಸಹ ಸಮುದಾಯಗಳ ವಿರೋಧ ಮತ್ತು ತಜ್ಞರ ಸಲಹೆಗಳನ್ನು ಕಡೆಗಣಿಸಿ, ಸರ್ಕಾರವು “ಸಮೀಕ್ಷೆ ನಡೆಸಿಯೇ ತೀರುತ್ತೇವೆ” ಎಂಬ ಮೊಂಡು ಹಠಕ್ಕೆ ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಖಾಂತ್ಯದ ಭ್ರಮೆಯಲ್ಲಿ ಸರ್ಕಾರ, ಆಕ್ರೋಶಗೊಂಡ ಜನತೆ

ಸಮೀಕ್ಷೆ ಆರಂಭಕ್ಕೂ ಮೂರು ದಿನ ಮುಂಚಿತವಾಗಿ ಮನೆಮನೆಗೆ ಪ್ರಶ್ನಾವಳಿಗಳನ್ನು ತಲುಪಿಸಲಾಗುವುದು ಎಂದು ಆಯೋಗ ಹೇಳಿದ್ದರೂ, ಎಲ್ಲಿಯೂ ಇದು ಜಾರಿಗೆ ಬಂದಿಲ್ಲ. ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್ ಅಂಟಿಸುವ ಕಾರ್ಯವೂ ಪೂರ್ಣಗೊಂಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಇಷ್ಟೆಲ್ಲಾ ಗೊಂದಲಗಳ ನಡುವೆಯೂ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರು, “ಅಗತ್ಯವಾದರೆ ಒಂದೆರಡು ದಿನ ಸಮೀಕ್ಷಾ ಅವಧಿ ವಿಸ್ತರಿಸಲಾಗುವುದು” ಎಂಬ ಹಗುರವಾದ ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇದೆಲ್ಲವನ್ನೂ ಕಡೆಗಣಿಸಿ, ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದೆ.

ಈ ಸಮೀಕ್ಷೆಯೂ ಹಿಂದಿನ ವರದಿಗಳಂತೆ ಕೇವಲ ಕಾಗದಕ್ಕೆ ಸೀಮಿತವಾಗಿ, ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದೇ ಎಂಬ ಆತಂಕ ಇದೀಗ ಎಲ್ಲೆಡೆ ವ್ಯಕ್ತವಾಗುತ್ತಿದೆ.

ShareTweetSendShare
Join us on:

Related Posts

janma-nakshatra-adhipati-puja-significance-remedies

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ?

by admin
July 25, 2026
0

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು ಮಾಯವಾಗಿ ಅದೃಷ್ಟ ನಿಮ್ಮದಾಗುವುದು ಖಚಿತ! ಜನ್ಮ ನಕ್ಷತ್ರ ಅಧಿಪತಿ ಪೂಜೆ...

devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

by admin
July 25, 2026
0

ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..? ಸಮಚರಣ ಸರೋಜಂ ಸಾಂದ್ರನೀಲಾಂಮುದಾಭಂ ಜಘನ ನಿಹಿತಪಾಣಿಂ ಮಂಡನಂ ಮಂಡನಾನಾಂ || ತರುಣ ತುಳಸೀಮಾಲಾಕಂಧರಂ ಕಂಜನೇತ್ರಂ...

sindhushree-ganesh-pole-vault-national-record-karnataka-sports

Sindhushree- ಬಡತನದಲ್ಲಿ ಅರಳಿದ ಪ್ರತಿಭೆ….! ಬಾಣದಂತೆ ಚಿಮ್ಮುವ ಈ ತರುಣಿ ಯಾರು..?

by admin
July 25, 2026
0

ಈಕೆಯ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ,...

ನೀಟ್ ಕಿಚ್ಚು ಇಟಲಿಗೂ ತಲುಪಿತು- ಮೆಲೊನಿ ಇನ್‌ಸ್ಟಾದಲ್ಲಿ ಮೋದಿ ರಾಜೀನಾಮೆಗೆ ಪಟ್ಟು: ಡಿಜಿಟಲ್ ಲೋಕದ ವಿಭಿನ್ನ ಪ್ರತಿಭಟನೆ

ನೀಟ್ ಕಿಚ್ಚು ಇಟಲಿಗೂ ತಲುಪಿತು- ಮೆಲೊನಿ ಇನ್‌ಸ್ಟಾದಲ್ಲಿ ಮೋದಿ ರಾಜೀನಾಮೆಗೆ ಪಟ್ಟು: ಡಿಜಿಟಲ್ ಲೋಕದ ವಿಭಿನ್ನ ಪ್ರತಿಭಟನೆ

by Shwetha
July 25, 2026
0

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಈಗ ದೇಶದ ಗಡಿ ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದ ವಿದ್ಯಾರ್ಥಿಗಳ ಆಕ್ರೋಶದ ಧ್ವನಿ ಈಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ...

ಪೇಪರ್ ಲೀಕ್ ಮಾಡಿದರೆ 1 ಕೋಟಿ ದಂಡದ ಜೊತೆ ಜೈಲೇ ಗತಿ- ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಉಳಿಗಾಲವಿಲ್ಲ: ಪೇಪರ್ ಲೀಕ್ ಮಾಫಿಯಾ ವಿರುದ್ಧ ಕೇಂದ್ರದ ಸರ್ಜಿಕಲ್ ಸ್ಟ್ರೈಕ್ ಶುರು

ಪೇಪರ್ ಲೀಕ್ ಮಾಡಿದರೆ 1 ಕೋಟಿ ದಂಡದ ಜೊತೆ ಜೈಲೇ ಗತಿ- ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಉಳಿಗಾಲವಿಲ್ಲ: ಪೇಪರ್ ಲೀಕ್ ಮಾಫಿಯಾ ವಿರುದ್ಧ ಕೇಂದ್ರದ ಸರ್ಜಿಕಲ್ ಸ್ಟ್ರೈಕ್ ಶುರು

by Shwetha
July 25, 2026
0

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧವಾಗಿದೆ. ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram