ಬೆಂಗಳೂರು: ಮೆಟ್ರೋ ನೆರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವ ಪ್ರಯಾಣಿಕರು ಪರದಾಟ ನಡೆಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರುಡಚಾರ್ ಪಾಳ್ಯ, ಬೈಯಪ್ಪನಹಳ್ಳಿ ಮಾರ್ಗ ಮಧ್ಯೆ ಈ ಸಮಸ್ಯೆ ಉಂಟಾಗಿದ್ದು, ಸಿಗ್ನಲಿಂಗ್ ಸಮಸ್ಯೆಯಿಂದ ಮೆಟ್ರೋ ಓಡಾಟ ವಿಳಂಬವಾಗುತ್ತಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಭದ್ರತಾ ಸಿಬ್ಬಂದಿ ಜೊತೆ ವಾಗ್ವಾದ ಕೂಡ ನಡೆದಿದೆ.
ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ ಪಾಳ್ಯವರೆಗೆ ಮಾತ್ರ ನಿಧಾನಗತಿಯಲ್ಲಿ ರೈಲುಗಳು ಓಡಾಟ ನಡೆಸುತ್ತಿದ್ದು, ಅರ್ಧಗಂಟೆಗೊಮ್ಮೆ ಮೆಟ್ರೋ ಓಡಾಟ ನಡೆಸುತ್ತಿವೆ. ಇದರಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಎಂಟ್ರಿ ಡೋರ್ ಕ್ಲೋಸ್ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.